Venturia inaequalis
ಶಿಲೀಂಧ್ರ
ಆಪಲ್ ಸ್ಕ್ಯಾಬ್ ನ ಮೊದಲ ಗೋಚರ ಲಕ್ಷಣಗಳು ವಸಂತಕಾಲದಲ್ಲಿ, ಸಾಮಾನ್ಯವಾಗಿ ಎಲೆಗಳ ಮೇಲೆ ಮುಖ್ಯ ನಾಳದ ಉದ್ದಕ್ಕೂ ಚಿಕ್ಕದಾದ, ವೃತ್ತಾಕಾರದ, ಆಲಿವ್-ಹಸಿರು ಚುಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಅವು ದೊಡ್ಡದಾಗುತ್ತಿದ್ದಂತೆ, ಕಂದು-ಕಪ್ಪು ಬಣ್ಣ ಆಗುತ್ತವೆ ಮತ್ತು ಅಂತಿಮವಾಗಿ ನೆಕ್ರೋಟಿಕ್ ಅಂಗಾಂಶದ ದೊಡ್ಡ ತೇಪೆಗಳನ್ನು ರೂಪಿಸುತ್ತವೆ. ಬಾಧಿತ ಎಲೆಗಳು ಹೆಚ್ಚಾಗಿ ವಿರೂಪಗೊಳ್ಳುತ್ತವೆ ಮತ್ತು ಅಕಾಲಿಕವಾಗಿ ಉದುರಿಹೋಗುತ್ತವೆ. ಮತ್ತು ಇದು ಅತಿಯಾದ ಸೋಂಕಿನ ಸಂದರ್ಭದಲ್ಲಿ ವಿರೂಪಕ್ಕೆ ಕಾರಣವಾಗುತ್ತದೆ. ಚಿಗುರುಗಳ ಮೇಲೆ, ಸೋಂಕು ಗುಳ್ಳೆಗಳನ್ನು ಮತ್ತು ಬಿರುಕುಗಳನ್ನು ಉಂಟುಮಾಡುತ್ತವೆ ಹಾಗು ಅದು ಅವಕಾಶವಾದಿ ರೋಗಕಾರಕಗಳಿಗೆ ಪ್ರವೇಶವನ್ನು ನೀಡುತ್ತದೆ. ಹಣ್ಣುಗಳ ಮೇಲೆ, ಕಂದು ಬಣ್ಣದಿಂದ ಗಾಢ ಕಂದು ಬಣ್ಣದ ವೃತ್ತಾಕಾರದ ಪ್ರದೇಶಗಳು ಮೇಲ್ಮೈಯಲ್ಲಿ ಕಾಣಿಸಿಕೊಳ್ಳುತ್ತವೆ. ಮತ್ತಷ್ಟು ಬೆಳೆದಂತೆ, ಅವು ಒಗ್ಗೂಡುತ್ತವೆ ಮತ್ತು ಉಬ್ಬಿದ, ಗಟ್ಟಿಯಾದ ತೊಗಟೆಯಂತೆ ಆಗುತ್ತವೆ. ಇದು ಹಣ್ಣಿನ ಬೆಳವಣಿಗೆಯನ್ನು ನಿರ್ಬಂಧಿಸುತ್ತದೆ ಮತ್ತು ಚರ್ಮವನ್ನು ವಿರೂಪ ಮತ್ತು ಬಿರುಕುಗೊಳಿಸಿ ಅದರ ಒಳಭಾಗ ಹೊರಗೆ ಕಾಣುವಂತೆ ಮಾಡುತ್ತದೆ. ಅಲ್ಪಮಟ್ಟದ ಸೋಂಕು ಹಣ್ಣಿನ ಗುಣಮಟ್ಟದ ಮೇಲೆ ಗಮನಾರ್ಹವಾದ ಪರಿಣಾಮ ಬೀರುವುದಿಲ್ಲ. ಆದಾಗ್ಯೂ, ಸ್ಕ್ಯಾಬ್ ಗಳು ಹೊಸ ಹಣ್ಣುಗಳನ್ನು ಅವಕಾಶವಾದಿ ರೋಗಕಾರಕಗಳು ಮತ್ತು ಕೊಳೆತಕ್ಕೆ ಒಡ್ಡಬಹುದು ಹಾಗು ಇದು ಶೇಖರಣಾ ಸಾಮರ್ಥ್ಯ ಮತ್ತು ಗುಣಮಟ್ಟವನ್ನು ಕಡಿಮೆ ಮಾಡುತ್ತದೆ.
ಹಿಂದಿನ ಋತುವಿನಲ್ಲಿ ರೋಗದ ಮಟ್ಟವು ಅಧಿಕವಾಗಿದ್ದರೆ, ಚಳಿಗಾಲದಲ್ಲಿ ಮರದ ಮೇಲೆ ಶಿಲೀಂಧ್ರಗಳ ಬೆಳವಣಿಗೆಯನ್ನು ತಡೆಯಲು ದ್ರವ ತಾಮ್ರದ ಶಿಲೀಂಧ್ರನಾಶಕಗಳನ್ನು ಸಿಂಪಡಿಸಬಹುದು. ಸೇಬಿನ ಹುರುಪು ವಿರುದ್ಧ ಸಲ್ಫರ್ ಸ್ಪ್ರೇಗಳು ಭಾಗಶಃ ಮಾತ್ರ ಪರಿಣಾಮಕಾರಿ. ಆದಾಗ್ಯೂ, ಬೆಳವಣಿಗೆಯ ಋತುವಿನಲ್ಲಿ ರೋಗದ ಸಾವಯವ ನಿಯಂತ್ರಣಕ್ಕಾಗಿ ಸಲ್ಫರ್ ಮತ್ತು ಪೈರೆಥ್ರಿನ್ ಗಳನ್ನು ಒಳಗೊಂಡಿರುವ ದ್ರಾವಣಗಳು ಲಭ್ಯವಿದೆ.
ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ರೋಗವನ್ನು ತಪ್ಪಿಸಲು ಡೋಡಿನ್, ಕ್ಯಾಪ್ಟನ್ ಅಥವಾ ಡೈನಾಥಿಯನ್ ನಂತಹ ರಕ್ಷಣಾತ್ಮಕ ಶಿಲೀಂಧ್ರನಾಶಕಗಳನ್ನು ಮೊಗ್ಗಿನ ಬಿರುಕಿನ ಸುತ್ತಲೂ ಸಿಂಪಡಿಸಬಹುದು. ಹುರುಪು ಪತ್ತೆಯಾದ ನಂತರ, ಶಿಲೀಂಧ್ರದ ಬೆಳವಣಿಗೆಯನ್ನು ನಿಯಂತ್ರಿಸಲು ಡೈಫೆನೊಕೊನಜೋಲ್, ಮೈಕ್ಲೋಬುಟಾನಿಲ್ ಅಥವಾ ಸಲ್ಫರ್ ಅನ್ನು ಆಧರಿಸಿದ ಶಿಲೀಂಧ್ರನಾಶಕಗಳನ್ನು ಬಳಸಬಹುದು. ಪ್ರತಿರೋಧದ ಬೆಳವಣಿಗೆಯನ್ನು ತಪ್ಪಿಸಲು ಸ್ಕ್ಯಾಬ್ ಶಿಲೀಂಧ್ರನಾಶಕಗಳನ್ನು ವಿವಿಧ ರಾಸಾಯನಿಕ ಗುಂಪುಗಳಿಂದ ಬಳಸುವಂತೆ ನೋಡಿಕೊಳ್ಳಿ.
ಆಪಲ್ ಸ್ಕ್ಯಾಬ್, ವೆಂಚುರಿಯಾ ಇನಾಕ್ವಾಲಿಸ್ ಎಂಬ ಶಿಲೀಂಧ್ರದಿಂದ ಉಂಟಾಗುವ ಕಾಯಿಲೆಯಾಗಿದೆ. ಇದು ಚಳಿಗಾಲವನ್ನು ಮುಖ್ಯವಾಗಿ ನೆಲದ ಮೇಲಿರುವ ಸೋಂಕಿತ ಎಲೆಗಳ ಮೇಲೆ ಮತ್ತು ಮೊಗ್ಗಿನ ಮೇಲ್ಮೈ ಅಥವಾ ಮರದ ಮೇಲಿನ ಗಾಯಗಳ ಮೇಲೆ ಬದುಕುಳಿಯುತ್ತದೆ. ವಸಂತಕಾಲದ ಆರಂಭದಲ್ಲಿ, ಶಿಲೀಂಧ್ರವು ಬೆಳವಣಿಗೆಯನ್ನು ಪುನರಾರಂಭಿಸುತ್ತದೆ ಮತ್ತು ಬೀಜಕಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ನಂತರ ಅವುಗಳು ಗಾಳಿಯ ಮೂಲಕ ಸಾಗಿ ದೂರದವರೆಗೆ ಹರಡಲ್ಪಡುತ್ತದೆ. ಈ ಬೀಜಕಗಳು ಬೆಳೆಯುತ್ತಿರುವ ಎಲೆಗಳು ಮತ್ತು ಹಣ್ಣುಗಳ ಮೇಲೆ ಇಳಿಯುತ್ತವೆ ಮತ್ತು ಹೊಸ ಸೋಂಕನ್ನು ಪ್ರಾರಂಭಿಸುತ್ತವೆ. ತೆರೆಯದೇ ಇರುವ ಹಣ್ಣಿನ ಮೊಗ್ಗುಗಳ ಹೊರ ಭಾಗಗಳು ಈ ಸೋಂಕಿಗೆ ಹೆಚ್ಚು ಒಳಗಾಗುತ್ತವೆ. ಆದಾಗ್ಯೂ, ಹಣ್ಣು ಬೆಳೆದಂತೆ ಅದು ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಆರ್ದ್ರ ವಾತಾವರಣ, ಎಲೆಗಳು ಅಥವಾ ಹಣ್ಣುಗಳ ತೇವದ ಅವಧಿಯು ಸೋಂಕಿಗೆ ಅವಶ್ಯಕವಾಗಿದೆ. ಪರ್ಯಾಯ ಅತಿಥೇಯಗಳಲ್ಲಿ ಕೋಟೋನೆಸ್ಟರ್, ಪೈರಕಾಂತ ಮತ್ತು ಸೊರ್ಬಸ್ ಕುಲದ ಪೊದೆಗಳು ಸೇರಿವೆ. ಎಲ್ಲಾ ಸೇಬು ಪ್ರಭೇದಗಳು ಸ್ಕ್ಯಾಬ್ ಗೆ ಒಳಗಾಗುತ್ತವೆ. ಅದರಲ್ಲೂ ಗಾಲಾ ಹೆಚ್ಚು ದುರ್ಬಲವಾಗಿರುತ್ತದೆ.