ಇತರೆ

ಫ್ರೂಟ್ ಟ್ರೀ ಕ್ಯಾಂಕರ್ (ಹಣ್ಣಿನ ಮರಗಳಿಗೆ ಕ್ಯಾಂಕರ್ ರೋಗ)

Neonectria ditissima

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಸೋಂಕುಗಳು ಸಾಮಾನ್ಯವಾಗಿ ಕೊಂಬೆಗಳಲ್ಲಿ ಕೆಂಪು ಗುಳಿಬಿದ್ದ ಗಾಯಗಳ ರೂಪದಲ್ಲಿ ಪ್ರಾರಂಭವಾಗುತ್ತದೆ.
  • ಈ ಗಾಯಗಳು ನಂತರ ಕ್ಯಾಂಕರ್ ಆಗಿ ಬೆಳೆಯುತ್ತವೆ ಮತ್ತು ಅದು ಶಾಖೆಗಳನ್ನು ಸುತ್ತುವರಿದು ಕೊಲ್ಲುತ್ತದೆ.
  • ದೊಡ್ಡ ಶಾಖೆಗಳಲ್ಲಿ, ಸತ್ತ ತೊಗಟೆ ದೀರ್ಘಕಾಲಿಕವಾಗಿರುತ್ತದೆ ಮತ್ತು ಕೇಂದ್ರೀಕೃತ ಉಂಗುರಗಳು ಮತ್ತು ಊದಿದ ಅಂಚಿನ ಭಾಗಗಳನ್ನು ತೋರಿಸುತ್ತದೆ.
  • ಕೆಲವೊಮ್ಮೆ, ಮಾಗುತ್ತಿರುವ ಹಣ್ಣುಗಳು ಪುಷ್ಪಪಾತ್ರೆಯ ಸುತ್ತಲೂ ಒಣ "ಕಣ್ಣಿನ ಕೊಳೆತ"ವನ್ನು ತೋರಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಸೇಬು
ಪೇರು ಹಣ್ಣು/ ಮರಸೇಬು

ಇತರೆ

ರೋಗಲಕ್ಷಣಗಳು

ಕಾಂಡಗಳು ಮತ್ತು ಕೊಂಬೆಗಳ ಮೇಲೆ ಸತ್ತ ತೊಗಟೆಯ (ಕ್ಯಾಂಕರ್ ಗಳು) ಗುಂಡಗಿನ ಅಥವಾ ಅಂಡಾಕಾರದ ಗುಳಿಬಿದ್ದ ತೇಪೆಗಳನ್ನು ಗಮನಿಸಬಹುದು. ಸೋಂಕುಗಳು ಸಾಮಾನ್ಯವಾಗಿ ಗಾಯಗಳು ಅಥವಾ ಕೊಂಬೆಗಳ ಮೊಗ್ಗುಗಳು ಮತ್ತು ಕೆಂಪು ಗುಳಿಬಿದ್ದ ಗಾಯಗಳ ರೂಪದಲ್ಲಿ ಎಳೆಯ ಶಾಖೆಗಳಲ್ಲಿ ಪ್ರಾರಂಭವಾಗುತ್ತವೆ. ಗಾಯಗಳು ನಂತರ ಒಂದು ಕ್ಯಾಂಕರ್ (ಬೊಕ್ಕೆ) ಆಗಿ ಬೆಳೆಯುತ್ತವೆ ಮತ್ತು ಒಂದೇ ಋತುವಿನಲ್ಲಿ ಶಾಖೆಗಳನ್ನು ಸುತ್ತುವರಿದು ಕೊಲ್ಲುತ್ತವೆ. ದೊಡ್ಡ ಶಾಖೆಗಳ ಮೇಲೆ, ಅವು ಕಂದು-ಕೆಂಪು, ಒಳಬಾಗಿದ, ಗುಳಿಬಿದ್ದ ಕಲೆಗಳ ರೂಪವನ್ನು ಹೊಂದಿರುತ್ತವೆ. ಅವು ನಂತರ ಸ್ಫೋಟಗೊಂಡು ತೆರೆದುಕೊಳ್ಳುತ್ತದೆ ಮತ್ತು ಮಧ್ಯದಲ್ಲಿ ತೆರೆದ ಸತ್ತ ಮರವನ್ನು ತೋರಿಸುತ್ತದೆ. ಸತ್ತ ತೊಗಟೆಯು, ವರ್ಷಗಳಲ್ಲಿ ಸಂಗ್ರಹವಾದ ಕೇಂದ್ರೀಕೃತ ಉಂಗುರಗಳು ಮತ್ತು ವಿಶಿಷ್ಟ ಉಬ್ಬಿದ ಅಂಚುಗಳನ್ನು ತೋರಿಸುತ್ತವೆ. ಕ್ಯಾಂಕರ್ ಮೇಲಿನ ಶಾಖೆಗಳು ದುರ್ಬಲಗೊಳ್ಳುತ್ತವೆ ಮತ್ತು ಕ್ರಮೇಣ ಸಾಯುತ್ತವೆ. ಬೆಳೆಯುತ್ತಿರುವ ಹಣ್ಣುಗಳು ಕೆಲವೊಮ್ಮೆ ದಾಳಿಗೊಳಗಾಗುತ್ತವೆ ಮತ್ತು ಪುಷ್ಪಪಾತ್ರೆಯ ಸುತ್ತಲೂ ಒಣ "ಕಣ್ಣಿನ ಕೊಳೆತ"ವನ್ನು ತೋರಿಸುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಈ ಶಿಲೀಂಧ್ರದ ಯಾವುದೇ ಜೈವಿಕ ನಿಯಂತ್ರಣವು ಇಂದಿನವರೆಗೆ ಲಭ್ಯವಿಲ್ಲ. ತಾಮ್ರವನ್ನು ಆಧರಿಸಿದ ಗಾಯದ ಸೀಲ್ ಉತ್ಪನ್ನಗಳನ್ನು ಹಣ್ಣಿನ ಮರದ ಕ್ಯಾಂಕರ್ ನ ಸಂಭವವನ್ನು ಮಿತಿಗೊಳಿಸಲು ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸೋಂಕಿತ ಶಾಖೆಗಳ ಸಮರುವಿಕೆಯನ್ನು ಮಾಡಿದ ನಂತರ, ತೆರೆದ ಭಾಗವನ್ನು ಗಾಯದ ಸೀಲ್ ಉತ್ಪನ್ನ ಅಥವಾ ಬಣ್ಣದಿಂದ ಚಿಕಿತ್ಸೆ ಮಾಡಬೇಕು. ತಾಮ್ರದ ಹೈಡ್ರಾಕ್ಸೈಡ್ ಅಥವಾ ಕ್ಯಾಪ್ಟನ್ ಆಧಾರಿತ ಶಿಲೀಂಧ್ರನಾಶಕಗಳನ್ನು ಆ ಉದ್ದೇಶಕ್ಕಾಗಿ ಹಣ್ಣಿನ ಮರದ ಕ್ಯಾಂಕರ್ ಸಂಭವವನ್ನು ಮಿತಿಗೊಳಿಸಲು ಬಳಸಬಹುದು. ಎಲೆಗಳ ಉದುರುವಿಕೆ ಮತ್ತು ಮೊಗ್ಗು ಬೆಳೆಯುವ ಸಮಯದಲ್ಲಿ ತಾಮ್ರದ ಚಿಕಿತ್ಸೆಯನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ನೆಕ್ಟ್ರಿಯಾ ಗಲ್ಲಿಗೆನಾ ಎಂಬ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಹಲವಾರು ಮರಗಳ ತೊಗಟೆಯ ಮೇಲೆ ದಾಳಿ ಮಾಡುತ್ತದೆ ಮತ್ತು ಅವುಗಳಲ್ಲಿ ಸೇಬು ಒಂದು. ಶಿಲೀಂಧ್ರವು ಬೇಸಿಗೆಯಲ್ಲಿ ನೀರಿನಿಂದ ಹರಡುವ ಬೀಜಕಗಳ ಮೂಲಕ ಮತ್ತು ಚಳಿಗಾಲ ಮತ್ತು ವಸಂತಕಾಲದಲ್ಲಿ ವಾಯುಗಾಮಿ ಬೀಜಕಗಳ ಮೂಲಕ ಹರಡುತ್ತದೆ. ಈ ಎರಡೂ ವಿಧದ ಬೀಜಕಗಳು ಗಾಯಗೊಂಡ ಅಂಗಾಂಶಗಳ ಮೇಲೆ ಇಳಿದಾಗ ಸೋಂಕುಗಳನ್ನು ಪ್ರಾರಂಭಿಸಬಹುದು. ಸೋಂಕಿಗೆ ಕಾರಣವಾಗುವ ಮರ ಗಾಯಗಳೆಂದರೆ, ಸಮರುವಿಕೆಯ ಗಾಯ, ಹಿಮ, ಸ್ಕ್ಯಾಬ್ ರೋಗ ಮತ್ತು ಗಿಡಹೇನುಗಳಿಂದಾದ ಗಾಯ. ತೇವಾಂಶವುಳ್ಳ ಮಣ್ಣು, ಭಾರವಾದ ಮಣ್ಣು ಮತ್ತು ಆಮ್ಲ ಮಣ್ಣುಗಳಲ್ಲಿ ಕ್ಯಾಂಕರ್ ಹೆಚ್ಚು ಗಂಭೀರವಾಗಿರುತ್ತದೆ. ರೋಗದ ಏಕಾಏಕಿ ಸಂಭವಕ್ಕೆ ಗರಿಷ್ಠ ತಾಪಮಾನವು 14 - 15.5 °C ಆಗಿರುತ್ತದೆ. ಮರಗಳ ದೀರ್ಘಕಾಲದ ತೇವಾಂಶವು ಒಂದು ಪ್ರಮುಖ ಅಂಶವಾಗಿದೆ (6 ಗಂಟೆಗಳು ಅಥವಾ ಹೆಚ್ಚು). ಮರಗಳ ಶಕ್ತಿ ಮತ್ತು ಸೋಂಕಿತ ಅಂಗಾಂಶಗಳ ಮೇಲೆ ತೊಗಟೆಯ ಬೆಳವಣಿಗೆಯ ಸಾಮರ್ಥ್ಯವನ್ನು ಅವಲಂಬಿಸಿ ಕ್ಯಾಂಕರ್‌ಗಳ ಗಾತ್ರವು ಹೆಚ್ಚುತ್ತದೆ ಮತ್ತು ಕ್ಷೀಣಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಕೀಟ ಪ್ರತಿರೋಧವಿರುವ ಪ್ರಭೇವನ್ನು ಬಳಸುವುದನ್ನು ಮರೆಯದಿರಿ.
  • ಹೊಲದ ಕೆಲಸ ಅಥವಾ ಸುಗ್ಗಿಯ ಸಮಯದಲ್ಲಿ ಸಸ್ಯಗಳಿಗೆ ಗಾಯವಾಗುವುದಂತೆ ನೋಡಿಕೊಳ್ಳಿ.
  • ಸಮತೋಲಿತ ಫಲವತ್ತತೆ ಮತ್ತು ಕಟಾವನ್ನು ಮಾಡಿ.
  • ಒಣ ವಾತಾವರಣದಲ್ಲಿ ಮಾತ್ರ ಕತ್ತರಿಸಿ ಮತ್ತು ಯಾವಾಗಲೂ ಕತ್ತರಿಸುವ ಉಪಕರಣಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.
  • ನಿಯಮಿತವಾಗಿ ಹಣ್ಣಿನ ತೋಟವನ್ನು ಮೇಲ್ವಿಚಾರಣೆ ಮಾಡಿ ಮತ್ತು ಎಲ್ಲಾ ಬಾಧಿತ ಶಾಖೆಗಳು ಮತ್ತು ಕೊಂಬೆಗಳನ್ನು ತೆಗೆದುಹಾಕಿ.
  • ರಕ್ಷಣಾತ್ಮಕ ಗಾಯದ ಸೀಲ್ ಉತ್ಪನ್ನದೊಂದಿಗೆ ಗಾಯಗಳನ್ನು ಪೇಂಟ್ ಮಾಡಿ.
  • ಹೊಲದಲ್ಲಿ ಉತ್ತಮ ಒಳಚರಂಡಿ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಅಗತ್ಯವಿದ್ದರೆ ಸುಣ್ಣವನ್ನು ಹಾಕುವ ಮೂಲಕ ಮಣ್ಣಿನ ಪಿಎಚ್ಅನ್ನು ಹೆಚ್ಚಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ