ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಬೂದಿರೋಗ

Erysiphaceae

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಎಲೆಗಳು, ಕಾಂಡಗಳು ಮತ್ತು ಕೆಲವೊಮ್ಮೆ ಹಣ್ಣುಗಳ ಮೇಲೆ ಬಿಳಿ ಕಲೆಗಳು.
  • ಎಲೆಗಳ ಮೇಲ್ಭಾಗದಲ್ಲಿ ಅಥವಾ ಕೆಳಭಾಗದಲ್ಲಿ ಬಿಳಿ ಹೊದಿಕೆ.
  • ಕುಂಠಿತ ಬೆಳವಣಿಗೆ.
  • ಎಲೆಗಳು ಬಾಡುತ್ತವೆ ಮತ್ತು ಉದುರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

36 ಬೆಳೆಗಳು
ಸೇಬು
ಜಲ್ದರು ಹಣ್ಣು
ಹುರುಳಿ
ಹಾಗಲಕಾಯಿ
ಇನ್ನಷ್ಟು

ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಸೋಂಕು ಸಾಮಾನ್ಯವಾಗಿ ವೃತ್ತಾಕಾರದ, ಪುಡಿ ಬಿಳಿ ಕಲೆಗಳಾಗಿ ಪ್ರಾರಂಭವಾಗುತ್ತದೆ, ಇದು ಎಲೆಗಳು, ಕಾಂಡಗಳು ಮತ್ತು ಕೆಲವೊಮ್ಮೆ ಹಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಸಾಮಾನ್ಯವಾಗಿ ಎಲೆಗಳ ಮೇಲಿನ ಭಾಗಗಳನ್ನು ಆವರಿಸುತ್ತದೆ ಆದರೆ ಕೆಳಭಾಗದಲ್ಲಿಯೂ ಬೆಳೆಯಬಹುದು. ಶಿಲೀಂಧ್ರ ದ್ಯುತಿಸಂಶ್ಲೇಷಣೆಗೆ ಅಡ್ಡಿಯಾಗುತ್ತದೆ ಮತ್ತು ಎಲೆಗಳನ್ನು ಹಳದಿಯಾಗಿಸಿ ಒಣಗಲು ಕಾರಣವಾಗುತ್ತದೆ ಮತ್ತು ಕೆಲವು ಎಲೆಗಳು ತಿರುಚಬಹುದು, ಮುರಿಯಬಹುದು ಅಥವಾ ವಿರೂಪಗೊಳ್ಳಬಹುದು. ನಂತರದ ಹಂತಗಳಲ್ಲಿ, ಮೊಗ್ಗುಗಳು ಮತ್ತು ಬೆಳೆಯುತ್ತಿರುವ ಚಿಗುರುಗಳು ವಿರೂಪಗೊಳ್ಳುತ್ತವೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಸಲ್ಫರ್, ಬೇವಿನ ಎಣ್ಣೆ, ಕಾಯೋಲಿನ್ ಅಥವಾ ಆಸ್ಕೋರ್ಬಿಕ್ ಆಮ್ಲವನ್ನು ಆಧರಿಸಿದ ಎಲೆಗಳ ದ್ರವೌಷಧಗಳು ತೀವ್ರವಾದ ಸೋಂಕನ್ನು ತಡೆಯಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳು, ತಡೆಗಟ್ಟುವ ಕ್ರಮಗಳನ್ನು ಒಳಗೊಂಡಂತಹ ಸಮಗ್ರ ವಿಧಾನವನ್ನು ಪರಿಗಣಿಸಿ. ಪೌಡರೀ ಮಿಲ್ಡ್ಯೂ ರೋಗಕ್ಕೆ ಒಳಗಾಗುವಂತಹ ಬೆಳೆಗಳ ಸಂಖ್ಯೆ ದೊಡ್ಡದಿರುವುದರಿಂದ ಯಾವುದೇ ನಿರ್ದಿಷ್ಟ ರಾಸಾಯನಿಕ ಚಿಕಿತ್ಸೆಯನ್ನು ಶಿಫಾರಸು ಮಾಡುವುದು ಕಷ್ಟ. ವೆಟ್ಟೆಬಲ್ ಸಲ್ಫರ್ (3ಗ್ರಾಂ/ಲೀ), ಕಾರ್ಬೆಂಡಜೀಮ, ಮಿಕ್ಲೊಬ್ಯುಟನಾಲ್ ಅಥವಾ ಡಿನೊಕಾಪ್ (ಎಲ್ಲಾ 2 ಮಿಲೀ/ಲೀ) ಆಧರಿತ ಶಿಲೀಂಧ್ರನಾಶಕಗಳು ಕೆಲವು ಫಸಲುಗಳಲ್ಲಿ ಶಿಲೀಂಧ್ರಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ.

ಅದಕ್ಕೆ ಏನು ಕಾರಣ

ಶಿಲೀಂಧ್ರಗಳ ಬೀಜಕಗಳು ಎಲೆಯ ಮೊಗ್ಗುಗಳು ಮತ್ತು ಸಸ್ಯದ ಉಳಿಕೆಗಳ ಒಳಗೆ ಚಳಿಗಾಲವನ್ನು ಕಳೆಯುತ್ತವೆ. ಗಾಳಿ, ನೀರು ಮತ್ತು ಕೀಟಗಳು, ಬೀಜಕಗಳನ್ನು ಹತ್ತಿರದ ಸಸ್ಯಗಳಿಗೆ ರವಾನಿಸುತ್ತವೆ. ಪೌಡರೀ ಮಿಲ್ಡ್ಯೂ ಶಿಲೀಂಧ್ರವಾಗಿದ್ದರೂ ಸಹ, ಇದು ಸಾಮಾನ್ಯವಾಗಿ ಒಣ ಪರಿಸ್ಥಿತಿಯಲ್ಲಿ ಬೆಳೆಯಬಲ್ಲದು. ಇದು 10-12 °C ನಡುವಿನ ಉಷ್ಣಾಂಶದಲ್ಲಿ ಬದುಕಬಲ್ಲದು. ಆದರೆ 30 °C ಇದಕ್ಕೆ ಸೂಕ್ತ, ಅನುಕೂಲಕರ ಪರಿಸ್ಥಿತಿಯಾಗಿದೆ. ಡೌನಿ ಮಿಲ್ಡ್ಯೂಗೆ ವ್ಯತಿರಿಕ್ತವಾಗಿ ಸಣ್ಣ ಪ್ರಮಾಣದ ಮಳೆ ಮತ್ತು ಬೆಳಗಿನ ಕಾಲ ನಿಯಮಿತವಾಗಿ ಬೀಳುವ ಹಿಮ ಪೌಡರೀ ಮಿಲ್ಡ್ಯೂ ಹರಡುವಿಕೆಯನ್ನು ತೀವ್ರಗೊಳಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಉತ್ತಮವಾಗಿ ಗಾಳಿಯಾಡಲು ಅವಕಾಶವಾಗುವಂತೆ ಗಿಡಗಳ ನಡುವೆ ಸಾಕಷ್ಟು ಅಂತರವಿರಲಿ.
  • ಯಾವುದೇ ರೋಗ ಅಥವಾ ಕೀಟದ ಸಂಭವವನ್ನು ಗುರುತಿಸಲು ಹೊಲವನ್ನು ಆಗಾಗ್ಗೆ ಪರಿಶೀಲಿಸಿ.
  • ಮೊದಲ ಚುಕ್ಕೆಗಳು ಕಾಣಿಸಿಕೊಂಡಾಗಲೇ ಸೋಂಕಿತ ಎಲೆಗಳನ್ನು ತೆಗೆದುಹಾಕಿ.
  • ಸೋಂಕಿತ ಸಸ್ಯಗಳನ್ನು ಮುಟ್ಟಿದ ನಂತರ ಆರೋಗ್ಯಕರ ಸಸ್ಯಗಳನ್ನು ಸ್ಪರ್ಶಿಸಬೇಡಿ.
  • ಹಸಿಗೊಬ್ಬರದ ದಪ್ಪ ಪದರವೊಂದು ಮಣ್ಣಿನಲ್ಲಿರುವ ಬೀಜಕಗಳು ಎಲೆಗಳಿಗೆ ಹರಡುವುದನ್ನು ತಡೆಯಬಲ್ಲದು.
  • ರೋಗಕ್ಕೆ ಸೂಕ್ಷ್ಮವಲ್ಲದ ಬೆಳೆಗಳೊಂದಿಗೆ ಸರದಿ ಬೆಳೆ ವ್ಯವಸ್ಥೆ ಕೂಡ ಸಹಾಯ ಮಾಡುತ್ತದೆ.
  • ಸಮತೋಲಿತ ಪೌಷ್ಟಿಕಾಂಶ ಪೂರೈಸುವ ಮೂಲಕ ಫಲವತ್ತತೆ ಹೆಚ್ಚಿಸಿ.
  • ತೀವ್ರವಾದ ತಾಪಮಾನ ಬದಲಾವಣೆಯನ್ನು ತಪ್ಪಿಸಿ.
  • ಸುಗ್ಗಿಯ ನಂತರ ಮಣ್ಣನ್ನು ಸಂಪೂರ್ಣವಾಗಿ ಉಳುಮೆ ಮಾಡುವ ಮೂಲಕ ಸಸ್ಯದ ಉಳಿಕೆಗಳನ್ನು ಆಳದಿಂದ ಕಿತ್ತು ತೆಗೆಯಿರಿ.
  • ಸುಗ್ಗಿಯ ನಂತರ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ