ಸೇಬು

ಸೇಬಿನ ಬೇರು ಮತ್ತು ಕಾಲರ್ ಕೊಳೆತ

Phytophthora cactorum

ಶಿಲೀಂಧ್ರ

ಸಂಕ್ಷಿಪ್ತವಾಗಿ

  • ಮೊದಲ ರೋಗಲಕ್ಷಣಗಳೆಂದರೆ, ಕಳಪೆಯಾದ ತುದಿ ಭಾಗಗಳ ಬೆಳೆವಣಿಗೆ, ಸಣ್ಣ ಕ್ಲೋರೋಟಿಕ್ ಆಗಿರುವ, ಬಾಡುತ್ತಿರುವ ಎಲೆಗಳು ಮತ್ತು ಕುಂಠಿತ ಮರಗಳು.
  • ಮರದ ಕಾಂಡದ ಒಳಗಿನ ಅಂಗಾಂಶಗಳು ಕಿತ್ತಳೆ ಬಣ್ಣದಿಂದ ಕೆಂಪು-ಕಂದು ಬಣ್ಣದ ಸ್ಪಷ್ಟವಾದ ಜಾಗಗಳನ್ನು ತೋರುತ್ತವೆ.
  • ಹಲವಾರು ಋತುಗಳ ಉದ್ದಕ್ಕೂ ಮರಗಳು ಕುಗ್ಗುತ್ತಾ ಹೋಗುತ್ತವೆ ಮತ್ತು ಅಂತಿಮವಾಗಿ ಸಾಯುತ್ತವೆ.
  • ಗಾಢವಾದ ಕಂದು ಬಣ್ಣದ ಗಾಯಗಳಾಗಿ ಹಣ್ಣಿನ ಕೊಳೆತ ಕೂಡ ಉಂಟಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೇಬು

ರೋಗಲಕ್ಷಣಗಳು

ಸೇಬು ಮತ್ತು ಪೇರು ಹಣ್ಣಿನ ಮರಗಳಲ್ಲಿ ಮೊದಲ ರೋಗಲಕ್ಷಣಗಳು ಎಲೆಗಳ ಮೇಲೆ ತೋರುತ್ತವೆ ಮತ್ತು ಅವು ಕಳಪೆಯಾದ ತುದಿ ಭಾಗಗಳ ಬೆಳವಣಿಗೆ ಮತ್ತು ಸಣ್ಣ ಕ್ಲೋರೋಟಿಕ್ ಆಗಿರುವ, ಬಾಡುತ್ತಿರುವ ಎಲೆಗಳನ್ನು ಹೊಂದಿರುತ್ತವೆ. ಮರಗಳು ಕುಂಠಿತವಾಗಿಯೂ ಸಹ ಇರಬಹುದು. ಈ ಹೊತ್ತಿಗಾಗಲೇ ಬೇರುಗಳಲ್ಲಿ ಮತ್ತು ಕ್ರೌನ್ಗಳಲ್ಲಿನ ಕೊಳೆತವು ಮುಂದುವರೆದ ಹಂತದಲ್ಲಿರುತ್ತದೆ. ಮರದ ಕಾಂಡವನ್ನು ತೆಗೆದಾಗ, ಒಳಗಿನ ಅಂಗಾಂಶಗಳು ಕಿತ್ತಳೆ ಬಣ್ಣದಿಂದ ಕೆಂಪು-ಕಂದು ಬಣ್ಣದ ಸ್ಪಷ್ಟವಾದ ಜಾಗಗಳನ್ನು ತೋರುತ್ತವೆ. ರೋಗವು ಮುಂದುವರೆದಂತೆ, ಅವು ದೊಡ್ಡಾಗುತ್ತವೆ ಮತ್ತು ಕಂದು ಬಣ್ಣಕ್ಕೆ ತಿರುಗುತ್ತವೆ. ನಾಳೀಯ ಅಂಗಾಂಶಗಳ ನೆಕ್ರೋಸಿಸ್ ಅಥವಾ ಕೊಳೆತವು ಇಡೀ ಸಸ್ಯಕ್ಕೆ ಪೋಷಕಾಂಶಗಳ ಪೂರೈಕೆಯನ್ನು ಮಿತಿಯಲ್ಲಿಡುತ್ತದೆ. ಸಾಮಾನ್ಯ ಒತ್ತಡದ ರೋಗಲಕ್ಷಣಗಳಾದ, ಮಂಕಾದ, ಬಾಡುತ್ತಿರುವ ಎಲೆಗಳು ಮತ್ತು ಅದರ ನಂತರದ ಎಲೆಗಳಚುವಿಕೆ ಹಾಗು ಸಸ್ಯದ ಕಂಠಿತ ಬೆಳವಣಿಗೆ ಈ ಕಾರಣದಿಂದಲೇ ಉಂಟಾಗುತ್ತವೆ. ಹಲವಾರು ಋತುಗಳ ಉದ್ದಕ್ಕೂ ಮರಗಳು ಕುಗ್ಗುತ್ತಾ ಹೋಗುತ್ತವೆ ಮತ್ತು ಅಂತಿಮವಾಗಿ ಸಾಯುತ್ತವೆ. ಇಡೀ ಹಣ್ಣಿನ ಮೇಲೆ ಪರಿಣಾಮ ಬೀರಬಲ್ಲ ಗಾಢವಾದ ಕಂದು ಬಣ್ಣದ ಗಾಯಗಳೊಂದಿಗಿನ ಹಣ್ಣಿನ ಕೊಳೆತ ಕೂಡ ಉಂಟಾಗಬಹುದು. ಪರಿಪಕ್ವತೆಯ ವಿವಿಧ ಹಂತಗಳಲ್ಲಿ ಹಣ್ಣಿನ ಮರಗಳು ಕೊಳೆತಕ್ಕೆ ಒಳಗಾಗಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಇಂದಿನವರೆಗೂ, ಈ ಶಿಲೀಂಧ್ರದ ವಿರುದ್ಧ ಯಾವುದೇ ಜೈವಿಕ ನಿಯಂತ್ರಣ ವಿಧಾನಗಳನ್ನು ಅಭಿವೃದ್ಧಿಪಡಿಸಲಾಗಿಲ್ಲ. ಆದರೆ, ಸೋಂಕಿತ ಮರದ ಕಾಂಡದ ಚಿಕಿತ್ಸೆಗಾಗಿ ತಾಮ್ರವಿರುವ ಶಿಲೀಂಧ್ರನಾಶಕಗಳನ್ನು ಬಳಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಲಭ್ಯವಿದ್ದಲ್ಲಿ, ಜೈವಿಕ ನಿಯಂತ್ರಣದ ಜೊತೆ, ನಿರೋಧಕ ಕ್ರಮಗಳೊಡನೆ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮೆಫೇನೊಕ್ಸಾಮ್, ಏಟ್ರಿಡೈಝೋಲ್ ಅಥವಾ ಪೋಸೆಟೈಲ್-ಅಲ್ಯೂಮಿನಿಯಂ ಹೊಂದಿರುವ ವಾಣಿಜ್ಯ ಶಿಲೀಂಧ್ರನಾಶಕಗಳನ್ನು ಮಣ್ಣನ್ನು ಕಶ್ಮಲೀಕರಣದಿಂದ ಮುಕ್ತಗೊಳಿಸುವುದಕ್ಕೆ ಬಳಸಬಹುದು ಆದರೆ ಇವು ಸಸ್ಯದ ಸೋಂಕಿತ ಭಾಗಗಳ ಚಿಕಿತ್ಸೆಗಾಗಿ ಬಳಸುವುದಕ್ಕೆ ನಿಷ್ಪ್ರಯೋಜಕವಾಗಿವೆ. ಮರಗಳ ತಳದ ಸುತ್ತಲೂ ಮಿತಲಾಕ್ಸಿಲ್+ಮಾಂಕೊಝೇಬ್ ಸಂಯೋಗದ ಚಿಕಿತ್ಸೆಯು ಮರದ ಕಾಂಡಗಳಲ್ಲಿ ಪಿ. ಕ್ಯಾಕ್ಟೊರಂ ನ ಬೆಳವಣಿಗೆಯನ್ನು ತಡೆಯಲು ಸಹ ಬಳಸಬಹುದು.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಮಣ್ಣಿನಲ್ಲಿ ಹುಟ್ಟಿದ ಫೈಟೋಫ್ಟೋರ ಕ್ಯಾಕ್ಟೊರಂ ಎಂಬ ಶಿಲೀಂಧ್ರಗಳಿಂದ ಉಂಟಾಗುತ್ತವೆ, ಇವು ಅತಿ ಹೆಚ್ಚಿನ ಸಂಖ್ಯೆಯ ಹೋಸ್ಟ್ ಗಳನ್ನು ಹೊಂದಿವೆ. ಇದು ಒದ್ದೆ ಮಣ್ಣಿನಲ್ಲಿ ಬದುಕುಳಿಯುತ್ತದೆ ಮತ್ತು ಹೀಗಾಗಿ ನೀರು ತುಂಬಿಕೊಳ್ಳಬಹುದಾದ, ಕಡಿಮೆ ಎತ್ತರದ ಜಾಗಗಳಲ್ಲಿ ಅಥವಾ ಹೊಲಗಳಲ್ಲಿ ತೇವಾಂಶವಿರುವ ಸ್ಥಿತಿಗಳಲ್ಲಿ ಇದು ತೊಂದರೆಯಾಗಬಹುದು. ಬೆಚ್ಚಗಿನ ಅವಧಿಗಳು ಬೀಜಕಣಗಳ ಉತ್ಪಾದನೆಗೆ ಅನುಕೂಲಕರವಾಗಿವೆ, ಹೀಗಾಗಿ ಈ ಅವಧಿಗಳು ಸೋಂಕಿಗೂ ಅನುಕೂಲಕರವಾಗಿರುತ್ತವೆ. ಇದು ಸೇಬು ಮತ್ತು ಪೇರು ಹಣ್ಣು ಇವೆರಡು ಮರಗಳ ಮೇಲೂ ದಾಳಿ ಮಾಡುತ್ತದೆ ಆದರೆ ಪೇರು ಹಣ್ಣಿನ ಮರಗಳಲ್ಲಿ ಇದು ಹೆಚ್ಚಾಗಿ ಸಮಸ್ಯೆಯಾಗಿರುವುದಿಲ್ಲ. ಸೋಂಕಿಗೆ ನಿರ್ಣಾಯಕ ಹಂತವೆಂದರೆ ಅದು ಹೂ ಬಿಡುವ ಹಂತದ ಮೊದಲಾಗಿರುತ್ತದೆ. ಸೋಂಕಿನ ಪ್ರಮುಖ ಮೂಲವೆಂದರೆ ಶಿಲೀಂಧ್ರಗಳ ಬೀಜಕಣಗಳನ್ನು ಹೊರಸೂಸುವ ಉದುರಿರುವ ಹಣ್ಣುಗಳು ಅಥವಾ ಸೋಂಕಿತ ಕಸಿಗಳ ಬಳಕೆ. ಕ್ರೌನ್ ಮತ್ತು ಬೇರಿನ ಕೊಳೆತದ ರೋಗಲಕ್ಷಣಗಳು ಸೋಂಕು ಮಣ್ಣಿನ ಮಟ್ಟದ ಕೆಳಗಿರುವಾಗ ಉಂಟಾಗುತ್ತವೆ. ಕಾಲರ್ ಕೊಳೆತವು ಕೆಳಗಿನ ಮರದ ಕಾಂಡದಲ್ಲಿ ಮಣ್ಣಿನ ಮಟ್ಟದ ಮೇಲೆ ಉಂಟಾಗುತ್ತದೆ. ಈ ಎರಡೂ ಪ್ರಕರಣಗಳಲ್ಲಿ, ಬೇರಿನ ಒಳಗಿನ ಅಂಗಾಂಶಗಳ ಕೊಳೆತ ಮತ್ತು ನಾಳೀಯ ಅಂಗಾಂಶಗಳ ವೈಫಲ್ಯತೆಯ ಸೂಚಕವೆಂದರೆ ಎಲೆಗಳ ಮೇಲಿನ ರೋಗಲಕ್ಷಣಗಳಾಗಿವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದಲ್ಲಿ, ಚೇತರಿಸಿಕೊಳ್ಳಬಲ್ಲ ಪ್ರಬೇಧಗಳನ್ನು ಆರಿಸಿ.
  • ಹೊಲಗಳಲ್ಲಿ ಉತ್ತಮ ಒಳಚರಂಡಿಯನ್ನು ಒದಗಿಸಿ.
  • ಸೋಂಕಿತ ಸಣ್ಣ ರೆಂಬೆಗಳನ್ನು ಮತ್ತು ದೊಡ್ಡ ರೆಂಬೆಗಳನ್ನು ಕತ್ತರಿಸಿ ಹಾಕಿ.
  • ಸೋಂಕಿತ ಹಣ್ಣುಗಳನ್ನೂ ಸಹ ಸಂಗ್ರಹಿಸಬೇಕು ಮತ್ತು ಅವನ್ನು ಓಣಿಗಳಲ್ಲಿ ಮಿದುವಾಗಲು ಬಿಡಬೇಕು.
  • ಮರದ ಕಾಂಡದ ಬಳಿ ಅತಿಯಾದ ಕಳೆಯ ಬೆಳವಣಿಗೆಯನ್ನು ತಪ್ಪಿಸಿ.
  • ಮಣ್ಣಿನ ಎರಚಲನ್ನು ತಡೆಯಲು ಮರದ ಕಾಂಡದ ಸುತ್ತಲೂ ಹಸಿಗೊಬ್ಬರವನ್ನು ಹಾಕಿ.
  • ಸೋಂಕಿತ ಮರದ ಕಾಂಡದ ಭಾಗವನ್ನು ಹೊರಗೊಡ್ಡುವಂತೆ ಕೆಳಗಿನಿಂದ ಮಣ್ಣನ್ನು ತೆಗೆಯಿರಿ ಮತ್ತು ಆ ಭಾಗವನ್ನು ಒಣಗಲು ಬಿಡಿ, ಚಳಿಗಾಲದಲ್ಲಿ ಆ ಜಾಗಕ್ಕೆ ತಾಜಾ ಮಣ್ಣನ್ನು ಮತ್ತೆ ತುಂಬಿ.
  • ಶೇಖರಣೆಗಾಗಿ, ನಿಶ್ಚಿತ ಎತ್ತರದ ಮೇಲಿಂದಲೇ ಹಣ್ಣುಗಳನ್ನು ಕೀಳಿ.
  • ಹಣ್ಣಿನ ತೋಟದಲ್ಲಿ ಸೂರುಗಳ ಮಿದುವಾಗುವಿಕೆಯನ್ನು ತ್ವರಿತಗೊಳಿಸಲು 5% ಯೂರಿಯಾದ ಸಿಂಪರಣೆಯನ್ನು ಹಾಕಿ.
  • ಟ್ರಾಕ್ಟರ್ನಿಂದಾಗುವ ಮಣ್ಣಿನ ಎರಚಲಿನಿಂದ ಉಂಟಾಗುವ ಹಣ್ಣುಗಳ ಕಶ್ಮಲೀಕರಣವನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ