ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

Capsicum

ನೀರು ಹಾಕುವುದು
ಮಧ್ಯಮ

ಸಾಗುವಳಿ
ನಾಟಿ ಮಾಡುವುದು

ಕೊಯ್ಲು ಮಾಡುವುದು
90 - 150 ದಿನಗಳು

ಕೆಲಸ
ಮಧ್ಯಮ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
5.5 - 7

ತಾಪಮಾನ
21°C - 29°C

ಗೊಬ್ಬರ ಬಳಕೆ
ಮಧ್ಯಮ

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಪರಿಚಯ

ಮೆಣಸಿನಕಾಯಿ ಅಥವಾ ದೊಡ್ಡಮೆಣಸಿನಕಾಯಿ/ದಪ್ಪಮೆಣಸಿನಕಾಯಿ ಎಂಬುದು ನೈಟ್‍ಶೇಡ್ ಕುಟುಂಬಕ್ಕೆ ಸೇರಿದ ಒಂದು ಹೂಬಿಡುವ ಸಸ್ಯವಾಗಿದೆ. ಇದು ಅಮೇರಿಕಾ ಮೂಲದ್ದಾಗಿದ್ದು (ಮೆಕ್ಸಿಕೊದಲ್ಲಿ 3,000 ಕ್ರಿ.ಪೂ. ದಲ್ಲಿ ಕಂಡುಬರುವ ಅದರ ಸಾಗುವಳಿಯ ಉಳಿಕೆಗಳು)16 ನೇ ಶತಮಾನದ ನಂತರ ಪ್ರಪಂಚದ ಉಳಿದ ಭಾಗಗಳಿಗೆ ಪರಿಚಯಿಸಲ್ಪಟ್ಟಿದೆ. ಇಂದು ಎಲ್ಲಾ ಮೆಣಸಿನಕಾಯಿಗಳ 50% ರಷ್ಟು ಚೀನಾದಲ್ಲಿ , ನಂತರ ಮೆಕ್ಸಿಕೊ, ಟರ್ಕಿ, ಇಂಡೋನೇಷಿಯಾ ಮತ್ತು ಸ್ಪೇನ್ ನಲ್ಲಿ ಬೆಳೆಯಲಾಗುತ್ತದೆ.

ಸಲಹೆ

ನಿಗಾವಣೆ

ನಿಗಾವಣೆ

ಒಳಚರಂಡಿ ಮುಖ್ಯವಾದುದು ಮತ್ತು ಮಣ್ಣಿನ ಪ್ರಕಾರವನ್ನು ಅವಲಂಬಿಸಿ, ಎತ್ತರಿಸಿದ ಸಸಿಮಡಿಗಳು ಅಗತ್ಯವಾಗಬಹುದು. ಆಳವಾಗಿ ಉಳುಮೆ ಮಾಡುವ ಮೂಲಕ ಶರತ್ಕಾಲದಲ್ಲಿ ಮಣ್ಣನ್ನು ತಯಾರಿಸಬಹುದು. ದೊಡ್ಡಮೆಣಸಿನಕಾಯಿಯನ್ನು ಸಾಮಾನ್ಯವಾಗಿ ಸಸಿಯಾಗಿ ಬೆಳೆಯಲಾಗುತ್ತದೆ ಮತ್ತು ನಂತರ ಹಿಮದ ಅಪಾಯವು ಕಳೆದ ನಂತರ ಅದನ್ನು ನೆಡಲಾಗುತ್ತದೆ. ಪ್ರಖ್ಯಾತ ನರ್ಸರಿಗಳಿಂದ ಪಡೆದ ಸಸಿಗಳಿಗೆ ಚೆನ್ನಾಗಿ ಬೆಳೆಯುವ ಮತ್ತು ರೋಗಗಳಿಂದ ಮುಕ್ತವಾಗಿರುವ ಸಸ್ಯಗಳನ್ನು ಪಡೆಯಲು ಆದ್ಯತೆ ನೀಡಲಾಗುತ್ತದೆ. ಗಾಳಿಯಿಂದ ಹಾನಿಗಳಾಗುವ ಅಪಾಯವಿರುವ ಜಾಗಗಳಲ್ಲಿ ಸಾಲುಗಳ ಮಾದರಿಯಲ್ಲಿ ರೈಕಾರ್ನ್ ಅಥವಾ ಸ್ವೀಟ್ಕಾರ್ನ್ನಂತಹ ಗಾಳಿತಡೆ ಸಸ್ಯಗಳನ್ನು ಬೆಳೆಯಿರಿ. ನೆಡುವ ನಾಲ್ಕು ವಾರಗಳ ಮೊದಲು ಕೋಳಿ ಗೊಬ್ಬರ ಅಥವಾ ಮಿಶ್ರಗೊಬ್ಬರವನ್ನು ಹಾಕಲು ಶಿಫಾರಸು ಮಾಡಲಾಗುತ್ತದೆ.

ಮಣ್ಣು

ದೊಡ್ಡ ಮೆಣಸಿನಕಾಯಿಗಳನ್ನು ಅನೇಕ ವಿಧದ ಮಣ್ಣಿನಲ್ಲಿ ಬೆಳೆಸಬಹುದು ಆದರೆ ಆಳವಾದ, ಕಳಿತ ಮತ್ತು ಚೆನ್ನಾಗಿ ಬರಿದುಹೋದ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯಬಹುದು. ಮಣ್ಣಿನ pH 5.5 - 7.0 ವ್ಯಾಪ್ತಿಯಲ್ಲಿರಬೇಕು. ಅವು ಬಲವುಳ್ಳ ಆಳವಾದ ಮೂಲ ಬೇರುಗಳನ್ನು (> 1 ಮೀ) ಬೆಳೆಸಬಲ್ಲವು. ಏಕರೂಪದ ಇಳಿಜಾರು ಸೂಕ್ತವಾದವು, ಏಕೆಂದರೆ ಅವುಗಳು ಒಳಚರಂಡಿಗೆ ಅನುಕೂಲ ಕಲ್ಪಿಸುತ್ತವೆ, ಆದರೆ ಅವಶ್ಯಕವೇನಲ್ಲ. ಕೃಷಿ ಭೂಮಿಯಲ್ಲಿ ಏರಿಳಿತಗಳಿದ್ದರೆ ಅದು ನೀರು ಕೊಚ್ಚಿ ಹೋಗುವುದಕ್ಕೆ ಕಾರಣವಾಗಬಹುದು.

ಹವಾಮಾನ

ಮೆಣಸಿನಕಾಯಿಗಳಿಗೆ ಸೂಕ್ತವಾದ ಬೆಳವಣಿಗೆಯ ಪರಿಸ್ಥಿತಿಗಳೆಂದರೆ ಬಿಸಿಲಿರುವ ವಾತಾವರಣದೊಂದಿಗೆ ಬೆಚ್ಚಗಿನ ಕಡುಮಣ್ಣು, ನಿರ್ದಿಷ್ಟವಾಗಿ 21 ರಿಂದ 29 °C. ಮಣ್ಣು ತೇವವಾಗಿರಬೇಕು ಆದರೆ ನೀರು ನಿಂತಿರಬಾರದು. ಅತಿ ಹೆಚ್ಚು ತೇವಾಂಶವಿರುವ ಮಣ್ಣುಗಳಲ್ಲಿ ಸಸಿಗಳು "ನೆಂದು- ಬಾಗುತ್ತವೆ" ಮತ್ತು ಚಿಗುರುವುದು ಕಡಿಮೆಯಾಗಬಹುದು. ಸಸ್ಯಗಳು 12 °C ವರೆಗಿನ ತಾಪಮಾನವನ್ನು (ಆದರೆ ಅದು ಆದ್ಯತೆ ಅಲ್ಲ) ಸಹಿಸಿಕೊಳ್ಳುತ್ತವೆ ಮತ್ತು ಹಿಮಕ್ಕೆ ಸೂಕ್ಷ್ಮವಾಗಿರುತ್ತವೆ. ದೊಡ್ಡಮೆಣಸಿನಕಾಯಿಯ ಹೂಬಿಡುವಿಕೆಯು ದಿನದ ಹಗಲಿನ ಉದ್ದಕ್ಕೆ ನಿಕಟವಾಗಿ ಸಂಬಂಧಿಸಿರುತ್ತದೆ. ಹೂವುಗಳು ಸ್ವಯಂ ಪರಾಗಸ್ಪರ್ಶ ಮಾಡಿಕೊಳ್ಳುತ್ತವೆ. ಆದಾಗ್ಯೂ, ಅತಿ ಹೆಚ್ಚಿನ ಉಷ್ಣಾಂಶದಲ್ಲಿ (33 ರಿಂದ 38 °C), ಪರಾಗವು ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತದೆ, ಮತ್ತು ಹೂವುಗಳು ಯಶಸ್ವಿಯಾಗಿ ಪರಾಗಸ್ಪರ್ಶಗೊಳ್ಳುವ ಸಾಧ್ಯತೆಯಿರುವುದಿಲ್ಲ.

ಸಂಭವನೀಯ ರೋಗಗಳು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

Capsicum

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪರಿಚಯ

ಮೆಣಸಿನಕಾಯಿ ಅಥವಾ ದೊಡ್ಡಮೆಣಸಿನಕಾಯಿ/ದಪ್ಪಮೆಣಸಿನಕಾಯಿ ಎಂಬುದು ನೈಟ್‍ಶೇಡ್ ಕುಟುಂಬಕ್ಕೆ ಸೇರಿದ ಒಂದು ಹೂಬಿಡುವ ಸಸ್ಯವಾಗಿದೆ. ಇದು ಅಮೇರಿಕಾ ಮೂಲದ್ದಾಗಿದ್ದು (ಮೆಕ್ಸಿಕೊದಲ್ಲಿ 3,000 ಕ್ರಿ.ಪೂ. ದಲ್ಲಿ ಕಂಡುಬರುವ ಅದರ ಸಾಗುವಳಿಯ ಉಳಿಕೆಗಳು)16 ನೇ ಶತಮಾನದ ನಂತರ ಪ್ರಪಂಚದ ಉಳಿದ ಭಾಗಗಳಿಗೆ ಪರಿಚಯಿಸಲ್ಪಟ್ಟಿದೆ. ಇಂದು ಎಲ್ಲಾ ಮೆಣಸಿನಕಾಯಿಗಳ 50% ರಷ್ಟು ಚೀನಾದಲ್ಲಿ , ನಂತರ ಮೆಕ್ಸಿಕೊ, ಟರ್ಕಿ, ಇಂಡೋನೇಷಿಯಾ ಮತ್ತು ಸ್ಪೇನ್ ನಲ್ಲಿ ಬೆಳೆಯಲಾಗುತ್ತದೆ.

ಪ್ರಮುಖ ಅಂಶಗಳು