ಕಲ್ಲಂಗಡಿ

Citrullus lanatus

ನೀರು ಹಾಕುವುದು
ಮಧ್ಯಮ

ಸಾಗುವಳಿ
ನೇರವಾಗಿ ಬಿತ್ತನೆ ಮಾಡುವುದು

ಕೊಯ್ಲು ಮಾಡುವುದು
70 - 100 ದಿನಗಳು

ಕೆಲಸ
ಮಧ್ಯಮ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
6 - 7.5

ತಾಪಮಾನ
0°C - 0°C

ಗೊಬ್ಬರ ಬಳಕೆ
ಮಧ್ಯಮ

ಕಲ್ಲಂಗಡಿ

ಪರಿಚಯ

ಕಲ್ಲಂಗಡಿ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿದ್ದು, ಮರುಭೂಮಿ ಹಣ್ಣಾಗಿದೆ. ಪ್ರೋಟೀನ್ ಗಳು , ಖನಿಜಗಳು ಮತ್ತು ಕಾರ್ಬೋಹೈಡ್ರೇಟ್‌ಗಳ ಜೊತೆಗೆ 92% ನೀರನ್ನು ಹೊಂದಿರುತ್ತದೆ. ಕಲ್ಲಂಗಡಿಗಳನ್ನು ಮುಖ್ಯವಾಗಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ಸಲಹೆ

ನಿಗಾವಣೆ

ನಿಗಾವಣೆ

ಇತರ ಬೆಳೆಗಳಂತೆ , ಕಲ್ಲಂಗಡಿ ಸಸ್ಯಗಳ ಮೇಲಿನ ಹೂವುಗಳು ತಮ್ಮಷ್ಟಕ್ಕೇ ತಾವೇ ಹಣ್ಣುಗಳಾಗಿ ಬೆಳೆಯಲು ಸಾಧ್ಯವಿಲ್ಲ. ಈ ಸಸ್ಯದ ವಿಶೇಷತೆಯೆಂದರೆ ಗಂಡು ಮತ್ತು ಹೆಣ್ಣು ಹೂವುಗಳು ಪ್ರತ್ಯೇಕವಾಗಿ ಒಂದೇ ಸಸ್ಯದಲ್ಲಿ ಉತ್ಪಾದನೆಯಾಗುತ್ತದೆ. ಗಂಡು ಹೂವುಗಳು ಗಾತ್ರದಲ್ಲಿ ಚಿಕ್ಕದಾಗಿರುತ್ತವೆ ಮತ್ತು ಮೊದಲು ಕಾಣಿಸಿಕೊಳ್ಳುತ್ತವೆ ಮತ್ತು ಹೆಣ್ಣು ಹೂವುಗಳು ದೊಡ್ಡದಾಗಿದ್ದು ನಂತರ ಕಾಣಿಸಿಕೊಳ್ಳುತ್ತವೆ. ಹೆಣ್ಣು ಹೂವುಗಳು ಬುಡದಲ್ಲಿ ಸಣ್ಣ ಹಣ್ಣುಗಳನ್ನು ಹೊಂದಿರುತ್ತವೆ. ಒಂದು ವೇಳೆ ಅದು ಕುಗ್ಗಿದರೆ, ಪರಾಗಸ್ಪರ್ಶ ಆಗುವುದಿಲ್ಲ ಎಂದರ್ಥ. ಪ್ರಕೃತಿಯಲ್ಲಿ, ಹೂವುಗಳಿಂದ ಹೂವಿಗೆ ಮಕರಂದಕ್ಕಾಗಿ ಹಾರುವ ಜೇನುನೊಣಗಳು ಜೇನುನೊಣಗಳು ಪರಾಗ ಸಂಗ್ರಹಿಸಿ ಒಯ್ಯುತ್ತವೆ. ಆದ್ದರಿಂದ, ಕಲ್ಲಂಗಡಿ ತೋಟದಲ್ಲಿ ಕೃತಕ ಜೇನುಗೂಡು ಸ್ಥಾಪಿಸುವುದು ಒಳ್ಳೆಯದು.

ಮಣ್ಣು

ಆಳವಾದ ಫಲವತ್ತಾದ ಮತ್ತು ಚೆನ್ನಾಗಿ ನೀರು ಬಸಿಯುವ ಮಣ್ಣಿನಲ್ಲಿ ಕಲ್ಲಂಗಡಿ ಚೆನ್ನಾಗಿ ಬೆಳೆಯುತ್ತದೆ. ಮರಳು ಅಥವಾ ಮರಳು ಮಿಶ್ರಿತ ಮಣ್ಣಿನಲ್ಲಿ ಬೆಳೆದಾಗ ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಮಣ್ಣಿನಿಂದ ನೀರು ಸುಲಭವಾಗಿ ಹರಿದು ಹೋಗಬೇಕು. ಇಲ್ಲವಾದರೆ ಬಳ್ಳಿಗಳು ಶಿಲೀಂಧ್ರಗಳ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ಒಂದೇ ಹೊಲದಲ್ಲಿ ಒಂದೇ ಬೆಳೆಯನ್ನು ನಿರಂತರವಾಗಿ ಬೆಳೆಯುವುದರಿಂದ ಪೋಷಕಾಂಶಗಳ ನಷ್ಟ, ಕಳಪೆ ಇಳುವರಿ ಮತ್ತು ಹೆಚ್ಚಿನ ರೋಗದ ದಾಳಿಗೆ ಕಾರಣವಾಗುವುದರಿಂದ ಬೆಳೆ ಸರದಿಯನ್ನು ಅನುಸರಿಸಿ. ಮಣ್ಣಿನ ಪಿಹೆಚ್ 6.0 ಮತ್ತು 7.5 ರ ನಡುವೆ ಇರಬೇಕು. ಆಮ್ಲೀಯ ಮಣ್ಣಿನಲ್ಲಿ ಬೀಜಗಳು ಬತ್ತಿ ಹೋಗುತ್ತವೆ. ತಟಸ್ಥ ಪಿಹೆಚ್ ಹೊಂದಿರುವ ಮಣ್ಣಿಗೆ ಮೊದಲ ಆದ್ಯತೆಯಾದರೂ, ಮಣ್ಣು ಸ್ವಲ್ಪ ಕ್ಷಾರೀಯವಾಗಿದ್ದರೂ ಸಹ ಬೆಳೆ ಚೆನ್ನಾಗಿ ಬೆಳೆಯುತ್ತದೆ.

ಹವಾಮಾನ

ಬೆಚ್ಚಗಿನ ಋತುವಿನ ಬೆಳೆಯಾಗಿರುವುದರಿಂದ, ಹಣ್ಣುಗಳ ಉತ್ಪಾದನೆಗೆ ಸಾಕಷ್ಟು ಬಿಸಿಲು ಮತ್ತು ಶುಷ್ಕ ಹವಾಮಾನದ ಅಗತ್ಯವಿರುತ್ತದೆ. ಭಾರತದಲ್ಲಿ, ಹವಾಮಾನವು ಹೆಚ್ಚಾಗಿ ಉಷ್ಣವಲಯವಾಗಿರುವುದರಿಂದ, ಎಲ್ಲಾ ಋತುಗಳು ಕಲ್ಲಂಗಡಿ ಕೃಷಿಗೆ ಸೂಕ್ತವಾಗಿವೆ. ಆದರೆ, ಕಲ್ಲಂಗಡಿ ಶೀತ ಮತ್ತು ಹಿಮಕ್ಕೆ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ, ಚಳಿಗಾಲವು ತೀವ್ರವಾಗಿರುವ ದೇಶದ ಕೆಲವು ಭಾಗಗಳಲ್ಲಿ, ಹಿಮವು ಕಳೆದ ನಂತರ ಕಲ್ಲಂಗಡಿಗಳನ್ನು ಬೆಳೆಸಲಾಗುತ್ತದೆ. ಬೀಜ ಮೊಳಕೆಯೊಡೆಯಲು ಮತ್ತು ಕಲ್ಲಂಗಡಿ ಸಸ್ಯಗಳ ಬೆಳವಣಿಗೆಗೆ 24-27⁰C ಸೂಕ್ತವಾಗಿದೆ.

ಸಂಭವನೀಯ ರೋಗಗಳು

ಕಲ್ಲಂಗಡಿ

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಕಲ್ಲಂಗಡಿ

Citrullus lanatus

ಕಲ್ಲಂಗಡಿ

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪರಿಚಯ

ಕಲ್ಲಂಗಡಿ ದಕ್ಷಿಣ ಆಫ್ರಿಕಾದಲ್ಲಿ ಹುಟ್ಟಿದ್ದು, ಮರುಭೂಮಿ ಹಣ್ಣಾಗಿದೆ. ಪ್ರೋಟೀನ್ ಗಳು , ಖನಿಜಗಳು ಮತ್ತು ಕಾರ್ಬೋಹೈಡ್ರೇಟ್‌ಗಳ ಜೊತೆಗೆ 92% ನೀರನ್ನು ಹೊಂದಿರುತ್ತದೆ. ಕಲ್ಲಂಗಡಿಗಳನ್ನು ಮುಖ್ಯವಾಗಿ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ಪ್ರಮುಖ ಅಂಶಗಳು