ನಿಗಾವಣೆ
ನಿಮ್ಮ ಸಸ್ಯಗಳು ಸರಿಸುಮಾರಾಗಿ 8 ರಿಂದ 10 ಸೆಂ.ಮೀ ಎತ್ತರ ಇರುವಾಗ ಅವುಗಳ ಮಧ್ಯೆ 20 ರಿಂದ 30 ಸೆಂ.ಮೀ ಅಂತರ ಇರುವಂತೆ ಕತ್ತರಿಸಿ. ಕಳೆ ಕಿತ್ತುವಾಗ ಬೇರುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಿ. ಸ್ಥಿರವಾದ ತೇವಾಂಶವನ್ನು ಉಳಿಸಿಕೊಳ್ಳಲು ಮಣ್ಣಿನಿಂದ ನೀರು ಚೆನ್ನಾಗಿ ಬಸಿದಿರುವಂತೆ ನೋಡಿಕೊಳ್ಳಿ. ಶುಷ್ಕ ಪರಿಸ್ಥಿತಿಯಲ್ಲಿ ಆಳವಿಲ್ಲದ ಬೇರುಗಳನ್ನು ಆರ್ದ್ರವಾಗಿರಿಸಲು ಸಸ್ಯಗಳಿಗೆ ನೀರು ಹಾಕುವುದು ಅವಶ್ಯಕ.
ಮಣ್ಣು
ಝಿಯಾ ಮೇಸ್ ಚೆನ್ನಾಗಿ ನೀರು ಬಸಿಯುವ ಮತ್ತು ಫಲವತ್ತಾದ ಕಡು ಮಣ್ಣು ಅಥವಾ ಮೆಕ್ಕಲು ಮಣ್ಣಿನಲ್ಲಿ ಬೆಳೆಯುತ್ತದೆ. ಆದಾಗ್ಯೂ, ಮೆಕ್ಕೆ ಜೋಳವನ್ನು ಮರಳು ಮಣ್ಣಿನಿಂದ ಜೇಡಿ ಮಣ್ಣಿನವರೆಗಿನ ವಿವಿಧ ಮಣ್ಣುಗಳಲ್ಲಿ ಬೆಳೆಯಲು ಸಾಧ್ಯವಿದೆ. ಈ ಬೆಳೆ ಮಣ್ಣಿನ ಆಮ್ಲತೆಗೆ ಸಹಿಷ್ಣುವಾಗಿದೆ. ಸುಣ್ಣದ ಮೂಲಕ ಮಣ್ಣಿನ ಆಮ್ಲೀಯತೆಯನ್ನು ತಟಸ್ಥಗೊಳಿಸಿದರೆ ಇಳುವರಿ ಹೆಚ್ಚುತ್ತದೆ.
ಹವಾಮಾನ
ಮೆಕ್ಕೆ ಜೋಳ ಪ್ರಪಂಚದಾದ್ಯಂತ ಬೆಳೆಯಲು ಒಂದು ಕಾರಣವೆಂದರೆ, ಇದಕ್ಕೆ ವ್ಯಾಪಕವಾದ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯುವ ಸಾಮರ್ಥ್ಯವಿದೆ. ಆದರೂ, ಮಧ್ಯಮ ತಾಪಮಾನ ಮತ್ತು ಮಳೆ ಈ ಬೆಳೆಗೆ ಹೆಚ್ಚು ಅನುಕೂಲಕರವಾಗಿದೆ.