ಎಲೆಕೋಸು

Brassica oleracea

ನೀರು ಹಾಕುವುದು
ಮಧ್ಯಮ

ಸಾಗುವಳಿ
ನಾಟಿ ಮಾಡುವುದು

ಕೊಯ್ಲು ಮಾಡುವುದು
90 - 120 ದಿನಗಳು

ಕೆಲಸ
ಕಡಿಮೆ

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
5.5 - 6.5

ತಾಪಮಾನ
7°C - 29°C

ಗೊಬ್ಬರ ಬಳಕೆ
ಹೆಚ್ಚು

ಎಲೆಕೋಸು

ಪರಿಚಯ

ಎಲೆಕೋಸು ಸಸ್ಯವು ಕ್ರೂಸಿಫೆರಸ್ ತರಕಾರಿಯಾಗಿದ್ದು ಅದು ಬ್ರಾಸ್ಸಿಕೇಸಿ ಕುಟುಂಬಕ್ಕೆ ಸೇರಿದೆ. ಎಲೆಕೋಸು ಸಸ್ಯಗಳನ್ನು ಅವುಗಳ ಹವಾಮಾನ ಹೊಂದಾಣಿಕೆಯ ಕಾರಣದಿಂದಾಗಿ ಮತ್ತು ಹೆಚ್ಚಿನ ಪೌಷ್ಠಿಕಾಂಶದ ಮೌಲ್ಯದಿಂದಾಗಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಯುರೋಪಿನಲ್ಲಿ ಹುಟ್ಟಿಕೊಂಡ ಎಲೆಕೋಸು ಗಿಡಗಳನ್ನು ಈಗ ವಿಶ್ವದಾದ್ಯಂತ ಬೆಳೆಸಲಾಗುತ್ತದೆ ಮತ್ತು ತಿನ್ನಲಾಗುತ್ತದೆ.

ನಿಗಾವಣೆ

ನಿಗಾವಣೆ

ನಾಟಿ ಮಾಡುವ ಮೊದಲು ಮಣ್ಣನ್ನು ಆಳವಾಗಿ ಉಳುಮೆ ಮಾಡಿ. ಕನಿಷ್ಠ 450-600 ಮಿ.ಮೀ ಆಳದವರೆಗೊ ಉಳುಮೆ ಮಾಡಬೇಕು. ಉಳುಮೆಯಿಂದಾಗಿ ಉಳಿದಿರುವ ಯಾವುದೇ ಅವಶೇಷಗಳು ಮಣ್ಣಿನಲ್ಲಿ ಸೇರಿ, ಮಣ್ಣಿನ ವಿನ್ಯಾಸವನ್ನು ಸುಧಾರಿಸಲು ಸಹಾಯವಾಗುತ್ತದೆ. ನೆಮಟೋಡ್ಗಳನ್ನು ನಿಯಂತ್ರಿಸಲು ನಾಟಿ ಮಾಡುವ 2 ವಾರಗಳ ಮೊದಲು ಮಣ್ಣಿನ ಫ್ಯುಮಿಗೇಷನ್ ಮಾಡಬೇಕು. ಎಲೆಕೋಸನ್ನು ಯಶಸ್ವಿಯಾಗಿ ಬೆಳೆಯಲು ಹೆಚ್ಚಿನ ಪ್ರಮಾಣದ ಪೋಷಕಾಂಶಗಳು ಬೇಕಾಗುತ್ತವೆ. ಪ್ರತಿ ಹೆಕ್ಟೇರ್‌ಗೆ ಸುಮಾರು 200-250 ಕೆಜಿ ಸಾರಜನಕವನ್ನು ಸೇರಿಸಲಾಗುತ್ತದೆ. ಗೊಬ್ಬರವನ್ನು ಹಲವಾರು ಬಾರಿ ಸೇರಿಸುವುದು ಹೆಚ್ಚಿನ ಇಳುವರಿಯನ್ನು ಪಡೆಯಲು ಸಹಾಯ ಮಾಡುತ್ತದೆ. ಎಲೆಕೋಸು ಬೀಜವನ್ನು ನೇರವಾಗಿ ಬಿತ್ತಬಹುದು ಅಥವಾ ಸಸಿಯನ್ನು ನಾಟಿ ಮಾಡಬಹುದು. ಪ್ರತಿ ಹೆಕ್ಟೇರ್‌ಗೆ ಸರಿಸುಮಾರು 2 ಕಿ.ಗ್ರಾಂ ಬೀಜಗಳು ಬೇಕಾಗುತ್ತವೆ. ಬಿತ್ತನೆ ಮಾಡಿದ ಅಥವಾ ನೆಟ್ಟ ತಕ್ಷಣ ನೀರಾವರಿ ಮಾಡಬೇಕು ಮತ್ತು ಅಪೇಕ್ಷಿತ ಗಾತ್ರವನ್ನು ಸಾಧಿಸುವವರೆಗೆ ಹಗುರವಾದ ಮಣ್ಣಿಗೆ ಪ್ರತಿ 8 ದಿನಗಳಿಗೊಮ್ಮೆ ನೀರಾವರಿ ಮಾಡಬೇಕು. ಎಲೆಕೋಸು ಸ್ವಲ್ಪ ಅಪಕ್ವ ಹಂತದಲ್ಲಿದ್ದಾಗಲೇ ಕಾಂಡದಿಂದ ಎಲೆಕೋಸು ಕತ್ತರಿಸುವ ಮೂಲಕ ಕೈಯಿಂದಲೇ ಕೊಯ್ಲು ಮಾಡಬಹುದು. ತಂಪಾದ, ಆರ್ದ್ರ ವಾತಾವರಣದಲ್ಲಿ ಸಂಗ್ರಹಿಸಬೇಕು.

ಮಣ್ಣು

ಎಲೆಕೋಸನ್ನು ಪ್ರಭೇದಕ್ಕೆ ಅನುಗುಣವಾಗಿ ಬಹುತೇಕ ಯಾವುದೇ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು. ಆದರೆ ಅದು ಚೆನ್ನಾಗಿ ನೀರು ಬಸಿಯುವ, ಕಲಸು ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಹೆಚ್ಚು ಮಳೆ ಬೀಳುವ ಪರಿಸ್ಥಿತಿಗಳಲ್ಲಿ, ಚೆನ್ನಾಗಿ ನೀರು ಹರಿದು ಹೋಗುವುದರಿಂದಾಗ ಮರಳು ಮಣ್ಣಿಗೆ ಆದ್ಯತೆ ನೀಡಲಾಗುತ್ತದೆ. ಎಲೆಕೋಸು ಹೆಚ್ಚು ಆಮ್ಲೀಯ ಮಣ್ಣಿಗೆ ಸೂಕ್ಷ್ಮವಾಗಿರುವುದರಿಂದ, ಸೂಕ್ತ ಪಿಹೆಚ್ ಶ್ರೇಣಿ 5.5 ರಿಂದ 6.5 ಆಗಿದೆ. ಎಲೆಕೋಸಿಗೆ ಹೆಚ್ಚಿನ ಸಂಖ್ಯೆಯ ಪೋಷಕಾಂಶಗಳು ಬೇಕಾಗುತ್ತವೆ. ಆದ್ದರಿಂದ ಹೆಚ್ಚಿನ ಸಾವಯವ ಪದಾರ್ಥವನ್ನು ಹೊಂದಿರುವ ಮಣ್ಣಿಗೆ ಆದ್ಯತೆ ನೀಡಲಾಗುತ್ತದೆ.

ಹವಾಮಾನ

ಎಲೆಕೋಸು ತಂಪಾದ ಮತ್ತು ಆರ್ದ್ರ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಹೆಚ್ಚಿನ ಶಾಖಕ್ಕೆ ಒಡ್ಡಿಕೊಂಡಾಗ, ಇಳುವರಿ ಕಡಿಮೆಯಾಗಬಹುದು ಮತ್ತು ಕೀಟಗಳನ್ನು ನಿಯಂತ್ರಿಸುವುದು ಹೆಚ್ಚು ಕಷ್ಟಕರವಾಗುತ್ತದೆ. ಬೆಳವಣಿಗೆಗೆ ಸೂಕ್ತವಾದ ತಾಪಮಾನದ ವ್ಯಾಪ್ತಿಯು 18-20 ಡಿಗ್ರಿ ಸಿ ನಡುವೆ ಇರುತ್ತದೆ. ಎಲೆಕೋಸು ಶೀತ ಹವಾಮಾನವನ್ನು ತಡೆದುಕೊಳ್ಳುತ್ತದೆ ಮತ್ತು -3 °C ಗಿಂತ ಕಡಿಮೆ ತಾಪಮಾನದಲ್ಲೂ ಬೆಳೆಗೆ ಹಾನಿಯಾಗದಂತೆ ಬದುಕಬಲ್ಲದು. ಎಲೆಕೋಸು ಹೆಚ್ಚು ಹೊಂದಿಕೊಳ್ಳಬಲ್ಲದು ಮತ್ತು ವರ್ಷದುದ್ದಕ್ಕೂ ಅನೇಕ ಪ್ರದೇಶಗಳಲ್ಲಿ ಬೆಳೆಯಬಹುದು. ನೀರಿನ ಅವಶ್ಯಕತೆ ಪ್ರತಿ ಬೆಳೆಗೆ 380 ರಿಂದ 500 ಮಿ.ಮೀ. ವರೆಗೆ ಇರುತ್ತದೆ. ಬೆಳೆಯುವ ಅವಧಿಯಲ್ಲಿ ಬೆಳೆಯ ನೀರಿನ ಅಗತ್ಯ ಹೆಚ್ಚಾಗುತ್ತದೆ.

ಸಂಭವನೀಯ ರೋಗಗಳು

ಎಲೆಕೋಸು

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಎಲೆಕೋಸು

Brassica oleracea

ಎಲೆಕೋಸು

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪರಿಚಯ

ಎಲೆಕೋಸು ಸಸ್ಯವು ಕ್ರೂಸಿಫೆರಸ್ ತರಕಾರಿಯಾಗಿದ್ದು ಅದು ಬ್ರಾಸ್ಸಿಕೇಸಿ ಕುಟುಂಬಕ್ಕೆ ಸೇರಿದೆ. ಎಲೆಕೋಸು ಸಸ್ಯಗಳನ್ನು ಅವುಗಳ ಹವಾಮಾನ ಹೊಂದಾಣಿಕೆಯ ಕಾರಣದಿಂದಾಗಿ ಮತ್ತು ಹೆಚ್ಚಿನ ಪೌಷ್ಠಿಕಾಂಶದ ಮೌಲ್ಯದಿಂದಾಗಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಯುರೋಪಿನಲ್ಲಿ ಹುಟ್ಟಿಕೊಂಡ ಎಲೆಕೋಸು ಗಿಡಗಳನ್ನು ಈಗ ವಿಶ್ವದಾದ್ಯಂತ ಬೆಳೆಸಲಾಗುತ್ತದೆ ಮತ್ತು ತಿನ್ನಲಾಗುತ್ತದೆ.

ಪ್ರಮುಖ ಅಂಶಗಳು