ಬಾಳೆಹಣ್ಣು

Musa

ನೀರು ಹಾಕುವುದು
ಹೆಚ್ಚು

ಸಾಗುವಳಿ
ನಾಟಿ ಮಾಡುವುದು

ಕೊಯ್ಲು ಮಾಡುವುದು
365 - 456 ದಿನಗಳು

ಕೆಲಸ
ಹೆಚ್ಚು

ಸೂರ್ಯನ ಬೆಳಕು
ಪೂರ್ಣ ಸೂರ್ಯ

pH ಮೌಲ್ಯ
6 - 7.5

ತಾಪಮಾನ
4°C - 21°C

ಗೊಬ್ಬರ ಬಳಕೆ
ಹೆಚ್ಚು

ಬಾಳೆಹಣ್ಣು

ಪರಿಚಯ

ಬಾಳೆಹಣ್ಣು ತಿನ್ನಬಲ್ಲ ಹಣ್ಣಾಗಿದ್ದು, ಮೂಸಾ ಕುಲದ ಹಲವಾರು ಬಗೆಯ ದೊಡ್ಡ ಹೂಬಿಡುವ ಸಸ್ಯಗಳಿಂದ ಉತ್ಪತ್ತಿಯಾಗುತ್ತದೆ. ಕೆಲವು ಬಾಳೆಹಣ್ಣುಗಳನ್ನು ಅಡುಗೆಗೆ ಬಳಸಲಾಗುತ್ತದೆ. ಇತರವುಗಳನ್ನು ಸಿಹಿಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಮೂಸಾ ಪ್ರಭೇದಗಳು ಮೂಲದಲ್ಲಿ ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾಕ್ಕೆ ಸೇರಿದವು. ಬಾಳೆಹಣ್ಣು ಮೂಲತಃ ಉಷ್ಣವಲಯದ ಬೆಳೆಯಾಗಿದ್ದು, ಇದು ಆರ್ದ್ರ ತಗ್ಗು ಪ್ರದೇಶಗಳಿಗೆ ಆದ್ಯತೆ ನೀಡುತ್ತದೆ, ಆದರೆ ಸಮುದ್ರ ಮಟ್ಟದಿಂದ 2000 ಮೀಟರ್ ಎತ್ತರದ ಪ್ರದೇಶದವರೆಗೂ ಬೆಳೆಸಬಹುದು.

ನಿಗಾವಣೆ

ನಿಗಾವಣೆ

ಬಾಳೆಹಣ್ಣುಗಳ ಉತ್ತಮ ಬೆಳವಣಿಗೆಗೆ ಸಾಕಷ್ಟು ಉಷ್ಣತೆಯ ಅಗತ್ಯವಿದೆ. ಅಗತ್ಯವಿದ್ದರೆ, ಕಟ್ಟಡ ಅಥವಾ ಡಾಂಬರು / ಸಿಮೆಂಟ್ ಪಕ್ಕದಲ್ಲಿ ನೆಡುವುದರ ಮೂಲಕ ಹೆಚ್ಚುವರಿ ಶಾಖವನ್ನು ನೀಡಬಹುದು. ಈ ಜಾತಿಗಳು ಬಹಳಷ್ಟು ನೀರನ್ನು ಬಳಸುವುದರಿಂದ, ಬೆಚ್ಚನೆಯ ಹವಾಮಾನದ ಸಮಯದಲ್ಲಿ ನಿಯಮಿತವಾಗಿ ಆಳವಾಗಿ ನೀರಾವರಿ ಮಾಡುವುದು ಅವಶ್ಯಕವಾಗಿದೆ. ಸಸ್ಯಗಳು ಒಣಗಬಾರದು. ಮತ್ತೊಂದೆಡೆ, ನಿಂತಿರುವ ನೀರು, ವಿಶೇಷವಾಗಿ ತಂಪಾದ ವಾತಾವರಣದಲ್ಲಿ, ಬೇರು ಕೊಳೆತಕ್ಕೆ ಕಾರಣವಾಗುತ್ತದೆ. ಹಸಿಗೊಬ್ಬರದ ದಪ್ಪ ಪದರವು ತೇವಾಂಶವನ್ನು ಸಂರಕ್ಷಿಸುತ್ತದೆ. ಬಾಳೆ ಗಿಡಗಳಿಗೆ ಅತೀ ಹೆಚ್ಚು ಪೋಷಕಾಂಶದ ಅಗತ್ಯವಿದೆ ಮತ್ತು ಕಾಂಡದಿಂದ ಸುಮಾರು 4-8 ಅಡಿಗಳಷ್ಟು ಮೇಲಿನವರೆಗೆ ತಿಂಗಳಿಗೊಮ್ಮೆ 0,5-2 ಪೌಂಡ್‌ಗಳಷ್ಟು ಸಮತೋಲಿತ ಗೊಬ್ಬರ (ಬೆಳವಣಿಗೆಯ ಹಂತವನ್ನು ಅವಲಂಬಿಸಿ) ನೀಡಬೇಕು. ಬಾಳೆಹಣ್ಣುಗಳು ಗಾಳಿಯಿಂದ ಹಾನಿಗೆ ಒಳಗಾಗುತ್ತವೆ ಮತ್ತು ಆದ್ದರಿಂದ ಉತ್ತಮವಾಗಿ ಕಾಣಲು ಮತ್ತು ಗರಿಷ್ಠ ಇಳುವರಿಗಾಗಿ ಅವುಗಳಿಗೆ ಗಾಳಿಯಿಂದ ರಕ್ಷಣೆ ಅಗತ್ಯವಿರುತ್ತದೆ. ಪಕ್ವವಾದ ಬಾಳೆ ಗಿಡಗಳ ಸುತ್ತ ಹೊಸ ಚಿಗುರುಗಳು ಬೆಳೆಯುತ್ತವೆ. ಮುಖ್ಯ ಸಸ್ಯಕ್ಕೆ ಅದರ ಬೆಳವಣಿಗೆಯ ಸಮಯದಲ್ಲಿ ಅಗತ್ಯವಿರುವ ಎಲ್ಲಾ ಶಕ್ತಿಯನ್ನು ನೀಡಲು ಅವುಗಳನ್ನು ಕತ್ತರಿಸಬೇಕು. ಸಸ್ಯಗಳು ಹಣ್ಣು ಬಿಡುವ ಸಮಯದ ಹತ್ತಿರದಲ್ಲಿದ್ದರೆ, ಚಿಗುರುಗಳನ್ನು (ಕನಿಷ್ಠ 3 ಅಡಿ ಎತ್ತರವಿರುವಾಗ) ಹೊಸ ತಳಿಗಳಿಗೆ ಸಸಿಗಳಾಗಿ ತೆಗೆದುಕೊಳ್ಳಬಹುದು. ನಾಟಿ ಮಾಡಲು ಬೀಜಗಳನ್ನು ಸಹ ಬಳಸಬಹುದು.

ಮಣ್ಣು

ಬಾಳೆಹಣ್ಣುಗಳು ಬಹುತೇಕ ಎಲ್ಲಾ ಮಣ್ಣಿನಲ್ಲಿ ಬೆಳೆಯುತ್ತವೆ. ಆದರೆ ಚೆನ್ನಾಗಿ ಬೆಳೆಯಲು, ಅವುಗಳನ್ನು ಸಮೃದ್ಧ, ಆಳವಾದ, ಚೆನ್ನಾಗಿ ನೀರು ಬಸಿಯುವ ಮಣ್ಣಿನಲ್ಲಿ ನೆಡಬೇಕು. ಅದು ಕಾಡಿನ ಕಲಸು ಮಣ್ಣು, ಕಲ್ಲಿನಂತಹ ಮರಳು ಮಣ್ಣು, ಮಾರ್ಲ್, ಕೆಂಪು ಲ್ಯಾಟರೈಟ್, ಜ್ವಾಲಾಮುಖಿಯ ಬೂದಿ, ಮರಳು ಜೇಡಿಮಣ್ಣು ಅಥವಾ ಭಾರವಾದ ಜೇಡಿಮಣ್ಣು ಆಗಿರಬಹುದು. 5.5 ಮತ್ತು 6.5 ರ ನಡುವೆ ಪಿಹೆಚ್ ಹೊಂದಿರುವ ಆಮ್ಲ ಮಣ್ಣನ್ನು ಇವು ಬಯಸುತ್ತವೆ. ಬಾಳೆಹಣ್ಣು ಉಪ್ಪು ಮಣ್ಣನ್ನು ಸಹಿಸುವುದಿಲ್ಲ. ಬಾಳೆ ಗಿಡಗಳ ಉತ್ತಮ ಬೆಳವಣಿಗೆಗೆ ಬೇಕಾದ ಮಣ್ಣಿನ ಪ್ರಕಾರಕ್ಕಿರಬೇಕಾದ ಪ್ರಮುಖ ಅಂಶವೆಂದರೆ ಉತ್ತಮ ಒಳಚರಂಡಿ. ನದಿ ಕಣಿವೆಗಳ ಮಣ್ಣು ಬಾಳೆಯನ್ನು ಬೆಳೆಯಲು ಸೂಕ್ತವಾಗಿದೆ.

ಹವಾಮಾನ

ಹೂವಿನ ಸ್ಟಾಕ್ ಉತ್ಪಾದಿಸಲು ಬಾಳೆ ಗಿಡಕ್ಕೆ 15-35 °C ತಾಪಮಾನದಲ್ಲಿ 10 - 15 ತಿಂಗಳ ಹಿಮ ಮುಕ್ತ ಪರಿಸ್ಥಿತಿಗಳು ಬೇಕಾಗುತ್ತವೆ. ತಾಪಮಾನವು 53 °F (11.5 °C) ಗಿಂತ ಕಡಿಮೆಯಾದಾಗ ಹೆಚ್ಚಿನ ಪ್ರಭೇದಗಳು ಬೆಳೆಯುವುದನ್ನು ನಿಲ್ಲಿಸುತ್ತವೆ. ಹೆಚ್ಚಿನ ತಾಪಮಾನದತ್ತೆ ನೋಡಿದಾಗ, ಬೆಳವಣಿಗೆ ಸುಮಾರು 80 °F (26.5 °C) ನಲ್ಲಿ ನಿಧಾನವಾಗುತ್ತದೆ ಮತ್ತು ತಾಪಮಾನವು 100 °F (38 °C) ತಲುಪಿದಾಗ ಸಂಪೂರ್ಣವಾಗಿ ನಿಲ್ಲುತ್ತದೆ. ಹೆಚ್ಚಿನ ತಾಪಮಾನ ಮತ್ತು ಪ್ರಕಾಶಮಾನವಾದ ಸೂರ್ಯನ ಬೆಳಕು ಎಲೆಗಳು ಮತ್ತು ಹಣ್ಣುಗಳನ್ನು ಸುಡಬಹುದು. ಆದರೂ ಬಾಳೆಹಣ್ಣುಗಳು ಪೂರ್ಣ ಸೂರ್ಯನ ಬೆಳಕಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಹೆಪ್ಪುಗಟ್ಟುವ ತಾಪಮಾನವು ಎಲೆಗಳನ್ನು ಕೊಲ್ಲುತ್ತದೆ. ಬಾಳೆಹಣ್ಣುಗಳು ಗಾಳಿಯಿಂದಾಗಿ ಹಾಳಾಗುವ ಸಾಧ್ಯತೆಯಿದೆ.

ಸಂಭವನೀಯ ರೋಗಗಳು

ಬಾಳೆಹಣ್ಣು

ಪ್ಲಾಂಟಿಕ್ಸ್‌ನಲ್ಲಿ ಇದನ್ನು ಹೇಗೆ ಬೆಳೆಸುವುದು ಎಂಬುದರ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಬಾಳೆಹಣ್ಣು

Musa

ಬಾಳೆಹಣ್ಣು

ಆರೋಗ್ಯಕರ ಬೆಳೆಗಳನ್ನು ಬೆಳೆಯಿರಿ ಮತ್ತು ಪ್ಲಾಂಟಿಕ್ಸ್ ಅಪ್ಲಿಕೇಶನ್‌ನೊಂದಿಗೆ ಹೆಚ್ಚು ಇಳುವರಿ ಪಡೆಯಿರಿ!

ಪರಿಚಯ

ಬಾಳೆಹಣ್ಣು ತಿನ್ನಬಲ್ಲ ಹಣ್ಣಾಗಿದ್ದು, ಮೂಸಾ ಕುಲದ ಹಲವಾರು ಬಗೆಯ ದೊಡ್ಡ ಹೂಬಿಡುವ ಸಸ್ಯಗಳಿಂದ ಉತ್ಪತ್ತಿಯಾಗುತ್ತದೆ. ಕೆಲವು ಬಾಳೆಹಣ್ಣುಗಳನ್ನು ಅಡುಗೆಗೆ ಬಳಸಲಾಗುತ್ತದೆ. ಇತರವುಗಳನ್ನು ಸಿಹಿಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಮೂಸಾ ಪ್ರಭೇದಗಳು ಮೂಲದಲ್ಲಿ ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾಕ್ಕೆ ಸೇರಿದವು. ಬಾಳೆಹಣ್ಣು ಮೂಲತಃ ಉಷ್ಣವಲಯದ ಬೆಳೆಯಾಗಿದ್ದು, ಇದು ಆರ್ದ್ರ ತಗ್ಗು ಪ್ರದೇಶಗಳಿಗೆ ಆದ್ಯತೆ ನೀಡುತ್ತದೆ, ಆದರೆ ಸಮುದ್ರ ಮಟ್ಟದಿಂದ 2000 ಮೀಟರ್ ಎತ್ತರದ ಪ್ರದೇಶದವರೆಗೂ ಬೆಳೆಸಬಹುದು.

ಪ್ರಮುಖ ಅಂಶಗಳು