ಟೊಮೊಟೊ ಬೆಳೆ ಹಾಕಿ 12 ದಿವಸವಾಗಿದೆ ಸಸಿ ಹಾಕಿದ ದಿವಸದಿಂದ ಮಳೆಗೆ ಸಿಕ್ಕಿದೆ ಆದ್ದರಿಂದ ಸಸ್ಯಗಳು ಈ ರೀತಿ ಆಗಿದೆ ಇದರ ಬಗ್ಗೆ ಔಷಧಿ ಕೀಟನಾಶಕ ಸಸ್ಯ ವರ್ಧಕ ಯಾವುದಾದರೂ ಇದ್ದರೆ ಮಾಹಿತಿ ತಿಳಿಸಿ
ಟಮೋಟೋ ಹಾಕಿ 12 ದಿನ ಆಗಿದೆ ಮಳೆಗೆ ಸಿಕ್ಕಿದೆ ನಂತರ ಇತರ ಗಿಡಗಳು ಆಗಿವೆ ಇದರ ಬಗ್ಗೆ ಮಾಹಿತಿ ಇದ್ದಲ್ಲಿ ಯಾವ ರೋಗ ಅಥವಾ ಸಮಸ್ಯೆಯೇನು ವಿವರಣೆಯನ್ನು ಕೊಡಿ
Suresh 173587
3 ವರ್ಷಗಳ ಹಿಂದೆ
ಹೆಲೋ Prathap Prathap. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಟೊಮೆಟೊ ಬೆಳೆಗೆ ತೀವ್ರಗತಿಯಲ್ಲಿ Damping-Off of Seedlings ರೋಗದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ ತಾವು ತಿಳಿಸಿದಂತೆ, ಈಗ ಮಳೆಗಾಲದ ಸಮಯ ಇರುವುದರಿಂದ, ಯಾವಾಗ ಬೇಕಾದರೂ ಮಳೆ ಬರಬಹುದು ಮತ್ತು ಬರುತ್ತಿದೆ. ಆದುದರಿಂದ ತಾವು ಆದಷ್ಟು ಬೇಗ ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ನಿಲ್ಲದಂತೆ, ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ಇದರಿಂದ ಗಿಡಗಳ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Basappa 0
3 ವರ್ಷಗಳ ಹಿಂದೆ
BASAPPA,H,KUNTER