ಕಬ್ಬಿನ ಸ್ಮಟ್ - ಕಬ್ಬು

ಕಬ್ಬು ಕಬ್ಬು

M

ಕಬ್ಬು ಎತ್ತರವಾಗಲು ಮತ್ತು ದಪ್ಪ ಆಗಲು ಯಾವ ಔಷಧಿಯನ್ನು ಬಳಸಬೇಕು. ಇದು 2ನೇ ಕುಳ್ಳೇ.

ಕಬ್ಬು ಹಚ್ಚಿದ ಮೇಲೆ ಯಾವುದೇ ಗೊಬ್ಬರಗಳನ್ನು ಬಳಸಿಲ್ಲ. ಯಾವ ಗೊಬ್ಬರವನ್ನು ಬಳಸಬೇಕು ತಿಳಿಸಿ ಕೊಡಿ.

143
S

ಹೆಲೋ Mallu Bommannavr M. ಕಬ್ಬು ದಪ್ಪ ಮತ್ತು ಎತ್ತರವಾಗಿ ಬೆಳೆಯಲು, ಶಿಫಾರಸಿನ ಪ್ರಮಾಣದಲ್ಲಿ 10 ಟನ ಕೊಟ್ಟಿಗೆ ಗೊಬ್ಬರ ಅಥವಾ 1 ಟನ ಎರೆಹುಳು ಗೊಬ್ಬರ ಅಥವಾ 5 ಟನ ಪ್ರೆಸ್ ಮಡ, ಇವುಗಳಲ್ಲಿ ಯಾವುದಾದರೊಂದರಲ್ಲಿ 4 ಕಿಲೋ ಗ್ರಾಂ ಅಜೋಸ್ಪಿರಿಲಮ್ + 4 ಕಿಲೋ ಗ್ರಾಂ ರಂಜಕ ಕರಗಿಸುವ ಸುಕ್ಷಾಣುಜೀವಿಗಳು ಬೆರೆಸಿ, 2 ರಿಂದ 3 ವಾರ ಮೊದಲು ಮಣ್ಣಿನಲ್ಲಿ ಸೇರಿಸಬೇಕು. ಸಾಧ್ಯವಾದರೆ ನಾಟಿ ಮಾಡುವ ಪೂರ್ವದಲ್ಲಿ ಸಾಲು ಬಿಟ್ಟು ಸಾಲು ಎರಡು ಮಗ್ಗಲು ಸೆಣಬು ಅಥವಾ ಡೈಂಚಾ ಅಥವಾ ದ್ವಿದಳ ಧಾನ್ಯಗಳನ್ನು ಬಿತ್ತಿ 45 ರಿಂದ 50 ದಿನಗಳಿಗೆ ಸಾಲಿನಲ್ಲಿ ಮುಗ್ಗು ಹೊಡೆದು ಮಣ್ಣು ಮುಚ್ಚಬೇಕು. ಸಾಧ್ಯವಾದರೆ ಇದೇ ರೀತಿ ಮತ್ತೊಂದು ಹಸಿರೆಲೆ ಬೆಳೆ ತೆಗೆದುಕೊಳ್ಳಬೇಕು. ನಂತರ ಸಿಫಾರಸ್ಸಿನ ಪ್ರಮಾಣದಲ್ಲಿ NPK ಗೊಬ್ಬರಗಳು ಅಂದರೆ ಸಾರಜನಕ:ರಂಜಕ:ಪೋಟಾಶ್ 100:30:75 ಕಿಲೋ ಗ್ರಾಂ ಪ್ರಮಾಣದಲ್ಲಿ ಕೊಡಬೇಕು. ಸೂಚನೆ: ಶೇಕಡಾ 10% ಸಾರಜನಕ, ಪೂರ್ತಿ ರಂಜಕ ಮತ್ತು ಪೋಟಾಶ್ ಪೋಷಕಾಂಶಗಳು ಕಬ್ಬು ನಾಟಿ ಮಾಡುವಾಗ ಸಾಲುಗಳ ಮಧ್ಯದಲ್ಲಿ ಒದಗಿಸಬೇಕು. ಉಳಿದ ಸಾರಜನಕ ಗೊಬ್ಬರವನ್ನು ನಾಟಿ ನಾಡಿದ 6 ನೇ ವಾರಕ್ಕೆ ಶೇಕಡಾ 20%, 10 ನೇ ವಾರಕ್ಕೆ ಶೇಕಡಾ 30% ಮತ್ತು 14 ನೇ ವಾರಕ್ಕೆ ಶೇಕಡಾ 40% ಕೊಟ್ಟು ಬೋದು ಹೋಢೇದುಕೋಳಬೇಕು. ಸಮಯಕ್ಕನುಸಾರವಾಗಿ ಬೇಕಾದಷ್ಟು ಮಾತ್ರ ನೀರು ಕೋಡಿ. ಈ ತರ ಮಾಡುವುದರಿಂದ ಕಬ್ಬಿನಲ್ಲಿ ಒಳ್ಳೆಯ ಇಳುವರಿ ಪಡೆಯಬಹುದು. ಧನ್ಯವಾದಗಳು.

ಅಪ್‌ವೋಟ್ ಮಾಡಿ!5
S

ಹೆಲೋ Arun Aramani. ಈಗ ತಮ್ಮ ಅನುಕೂಲತೆಗೆ ತಕ್ಕಂತೆ ಹೊಂದಿಸಿಕೊಂಡು, ಮೇಲೆ ತಿಳಿಸಿರುವಂತೆ ಮತ್ತು ತಮ್ಮ ಭಾಗದ ಮಣ್ಣು,ತಳಿ ಮತ್ತು ಹವಾಗುಣಕ್ಕೆ ಅನುಸಾರವಾಗಿ, ಒಳ್ಳೆಯ ಬೆಳೆಯನ್ನು ಬೆಳೆಯಬಹುದು. ಧನ್ಯವಾದಗಳು.

ಅಪ್‌ವೋಟ್ ಮಾಡಿ!1
C

Kabbu dappa udda agalu yava enne balasabeku 2kulli

ಅಪ್‌ವೋಟ್ ಮಾಡಿ!1
S

ಹೆಲೋ Channu Bhairi. ಈಗಾಗಲೇ ಮೇಲೆ Mallu Bommannavr M ಗೆ ತಿಳಿಸಿದ ಕ್ರಮಗಳನ್ನು ಅನುಸರಿಸಿರಿ. ತಮ್ಮ ಭಾಗಕ್ಕೆ ತಕ್ಕಂತೆ ಮತ್ತು ಮಣ್ಣು,ತಳಿ ಮತ್ತು ಹವಾಗುಣಕ್ಕೆ ಅನುಸಾರವಾಗಿ ತಾವು ಸ್ವಲ ಬದಲಾವಣೆ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಸಮ್ಪರ್ಕಿಸಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1
S

kbige kaadige roga bandide yaava kriminashk simpdisabeku

ಅಪ್‌ವೋಟ್ ಮಾಡಿ!1
S

ಹೆಲೋ Siddappahavalagi96. ತಮ್ಮ ಕಬ್ಬಿನ ಬೆಳೆಯ ಚಿತ್ರ ಕಳಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1
S

ಹೆಲೋ Siddappahavalagi96. ತಮ್ಮ ಕಬ್ಬಿನ ಬೆಳೆಗೆ Smut of Sugarcane ರೋಗ ತಗುಲಿದೆ ಎಂದು ಹೇಳಿದ್ದೀರಿ. ಹಾಗಾದರೆ ರೋಗದ ಲಕ್ಷಣಗಳು ತಿಳಿಯಲು ತಮ್ಮ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಲಿಂಕ್ ಮೇಲೆ ಕ್ಲಿಕ್ಕಿಸಿ ಮಾಹಿತಿ ಪಡೆಯಿರಿ. ಧನ್ಯವಾದಗಳು.

ಅಪ್‌ವೋಟ್ ಮಾಡಿ!1

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
M

Mahiti tilisee

11
S

ಹೆಲೋ Babunaik P. ಕಬ್ಬು ಚೆನ್ನಾಗಿ ದಪ್ಪ ಮತ್ತು ಉದ್ದ ಬೆಳೆಯಲು, ತಾವು ತಮ್ಮ ಭಾಗದ ಕಬ್ಬಿನ ಬೆಳೆಯ ಎಲ್ಲಾ ಸುಧಾರಿತ ಬೇಸಾಯ ಕ್ರಮಗಳನ್ನು ಸರಿಯಾದ ಸಮಯಕ್ಕೆ ಸರಿಯಾಗಿ ಪಾಲಿಸಿರಿ. ಜೊತೆಗೆ ಕಬ್ಬು ದಪ್ಪ ಮತ್ತು ಎತ್ತರವಾಗಿ ಬೆಳೆಯಲು, ಶಿಫಾರಸಿನ ಪ್ರಮಾಣದಲ್ಲಿ 10 ಟನ ಕೊಟ್ಟಿಗೆ ಗೊಬ್ಬರ ಅಥವಾ 1 ಟನ ಎರೆಹುಳು ಗೊಬ್ಬರ ಅಥವಾ 5 ಟನ ಪ್ರೆಸ್ ಮಡ, ಇವುಗಳಲ್ಲಿ ಯಾವುದಾದರೊಂದರಲ್ಲಿ 4 ಕಿಲೋ ಗ್ರಾಂ ಅಜೋಸ್ಪಿರಿಲಮ್ + 4 ಕಿಲೋ ಗ್ರಾಂ ರಂಜಕ ಕರಗಿಸುವ ಸುಕ್ಷಾಣುಜೀವಿಗಳು ಬೆರೆಸಿ, 2 ರಿಂದ 3 ವಾರ ಮೊದಲು ಮಣ್ಣಿನಲ್ಲಿ ಸೇರಿಸಬೇಕು. ಸಾಧ್ಯವಾದರೆ ನಾಟಿ ಮಾಡುವ ಪೂರ್ವದಲ್ಲಿ ಸಾಲು ಬಿಟ್ಟು ಸಾಲು ಎರಡು ಮಗ್ಗಲು ಸೆಣಬು ಅಥವಾ ಡೈಂಚಾ ಅಥವಾ ದ್ವಿದಳ ಧಾನ್ಯಗಳನ್ನು ಬಿತ್ತಿ 45 ರಿಂದ 50 ದಿನಗಳಿಗೆ ಸಾಲಿನಲ್ಲಿ ಮುಗ್ಗು ಹೊಡೆದು ಮಣ್ಣು ಮುಚ್ಚಬೇಕು. ಸಾಧ್ಯವಾದರೆ ಇದೇ ರೀತಿ ಮತ್ತೊಂದು ಹಸಿರೆಲೆ ಬೆಳೆ ತೆಗೆದುಕೊಳ್ಳಬೇಕು. ನಂತರ ಸಿಫಾರಸ್ಸಿನ ಪ್ರಮಾಣದಲ್ಲಿ NPK ಗೊಬ್ಬರಗಳು ಅಂದರೆ ಸಾರಜನಕ:ರಂಜಕ:ಪೋಟಾಶ್ 100:30:75 ಕಿಲೋ ಗ್ರಾಂ ಪ್ರಮಾಣದಲ್ಲಿ ಕೊಡಬೇಕು. ಸೂಚನೆ: ಶೇಕಡಾ 10% ಸಾರಜನಕ, ಪೂರ್ತಿ ರಂಜಕ ಮತ್ತು ಪೋಟಾಶ್ ಪೋಷಕಾಂಶಗಳು ಕಬ್ಬು ನಾಟಿ ಮಾಡುವಾಗ ಸಾಲುಗಳ ಮಧ್ಯದಲ್ಲಿ ಒದಗಿಸಬೇಕು. ಉಳಿದ ಸಾರಜನಕ ಗೊಬ್ಬರವನ್ನು ನಾಟಿ ನಾಡಿದ 6 ನೇ ವಾರಕ್ಕೆ ಶೇಕಡಾ 20%, 10 ನೇ ವಾರಕ್ಕೆ ಶೇಕಡಾ 30% ಮತ್ತು 14 ನೇ ವಾರಕ್ಕೆ ಶೇಕಡಾ 40% ಕೊಟ್ಟು ಬೋದು ಹೋಢೇದುಕೋಳಬೇಕು. ಸಮಯಕ್ಕನುಸಾರವಾಗಿ ಬೇಕಾದಷ್ಟು ಮಾತ್ರ ನೀರು ಕೋಡಿ. ಈ ತರ ಮಾಡುವುದರಿಂದ ಕಬ್ಬಿನಲ್ಲಿ ಒಳ್ಳೆಯ ಇಳುವರಿ ಪಡೆಯಬಹುದು. ಧನ್ಯವಾದಗಳು.

ಅಪ್‌ವೋಟ್ ಮಾಡಿ!2
S

ಹೆಲೋ Manju. ತಾವು ತಮ್ಮ ಕಬ್ಬಿನ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1
R

ನಮ್ಮ ಕಬ್ಬುನ ಮರಿಗಳು ಸಾಹಿತಿದಾವ ಕಾರಣ ಹೇಳಿ ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

ನಮ್ಮ ಕಬ್ಬು ಎಂಟು ತಿಂಗಳು ಆಗಿದೆ ಈಗ ಯಾವ ಗೊಬ್ಬರವನ್ನು ಕೊಡಬೇಕಾಗಿ ತಿಳಿಸಿಕೊಡಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

ಕೃಷಿ Manjanagouda S Patil ಕಬ್ಬು ದಪ್ಪವಾಗಲು ಯಾವ ಗೊಬ್ಬರವನ್ನು ಹಾಕಬೇಕಾಗಿ ತಿಳಿಸಿಕೊಡಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
R

ಕಬ್ಬು ದಪ್ಪ ಮತ್ತು ಎತ್ತರ ನಾವು ಯಾವುದನ್ನು ಉಪಯೋಗಿಸಬೇಕಾಗಿ ನಮಗೆ ಸ್ವಲ್ಪ ತಿಳಿಸಿಕೊಡಿ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Raju N. ಕಬ್ಬು 8 ತಿಂಗಳಿನ ಆಸು ಪಾಸಿನಲ್ಲಿ ಇದ್ದು, ಸಾಧಾರಣವಾಗಿ 270 ದಿನಗಳಿಗೆ ಬೆಳೆಯುವ ಬೆಳೆಯುವ ಹಂತ ಮುಗಿಸಿ ಬಲಿಯುವ ಹಂತ ಪ್ರವೇಶಿಸುತ್ತದೆ. ಈ ಸಮಯದಲ್ಲಿ ಕಬ್ಬಿಗೆ ಗೊಬ್ಬರ ಹಾಕುವುದರಿಂದ, ಕಬ್ಬು ದಪ್ಪ ಮತ್ತು ಉದ್ದ ಆಗಲು ಯಾವುದೇ ಸಹಾಯ ಆಗುವುದಿಲ್ಲ. ಈಗ ಸಮಯಕ್ಕೆ ಸರಿಯಾಗಿ ನೀರು ಹಾಯಿಸಿರಿ.

1ಡೌನ್ವೋಟ್ ಮಾಡಿ
R

ಸರ್ ನಮ್ಮೂರಲ್ಲಿ ಮಳೆ ಜಾಸ್ತಿ ಇರೋದ್ರಿಂದ ನೀರಿನ ಅವಶ್ಯಕತೆ ಇರುವುದಿಲ್ಲ

ಅಪ್‌ವೋಟ್ ಮಾಡಿ!1
S

Kabbige bili suli nivarane bagge tilisi sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Shreenath Dalawai. ತಮ್ಮ ಕಬ್ಬಿನ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!1

ಕಬ್ಬು ನೀರಿನ್ಲಿ ಮುಳ್ ಗಿದೆ ಕಬ್ಬು ವನಗಿದೆ 8 ತಿಂಗಳ ಬೆಳ್ ಇದೆ ಸರ್ ಮುಂದೆ ಏನು ಮಾಡಬೇಕು

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ ಮಂಜುನಾಥ್. ತಮ್ಮ ಕಬ್ಬಿನ ಬೆಳೆಯ ಚಿತ್ರಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

Helo Sv Love. ಈ ಸೈಟನಲ್ಲಿ ಬೆಳೆಗಳ ರೋಗ, ಕೀಟ ಮತ್ತು ಪೋಸಕೌಂಶಗಳ ಕೊರತೆ ಬಗ್ಗೆ ಮಾಹಿತಿ ಪಡೆಯಿರಿ. ಈ ಶುಭಾಶಯಗಳು ಇಲ್ಲಿ ಬೇಡ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
N

ನಮ್ಮ ಕಬ್ಬಿ ಗೆ ಬೀಚಿ ಕಸ ಆಗತಾ ಇದೆ ಬಾಳ ಕಬ್ಬ ಸರಿ ಯಾಗಿ ಬೆಳೀತಾ ಇಲ್ಲ ಇದಕೆ ಏನ ಮಾಡಬೇಕು ಹೇಳಿ ಸರ್ ಪ್ಲಜ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Nagu. ತಮ್ಮ ಕಬ್ಬಿನ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

1ಡೌನ್ವೋಟ್ ಮಾಡಿ
N

ನಮ್ಮ ಕಬ್ಬು ಈವಾಗ 2 ಕುಲೇ ಅದಕೆ ಕೊಳ್ಳಿ ಗೂಬ್ಬರ್ ಹಾಕಿರ ನಡೀತೇತಿ sir

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Nagu. ಕಬ್ಬು 2 ನೇ ಕೂಳೆ ಇದ್ದರೂ ಸಿಫಾರಸ್ಸಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ(ಕೋಳಿ ಗೋಬ್ಬರ) ಮತ್ತು ರಾಸಾಯನಿಕ ಗೊಬ್ಬರಗಳು ಹಂತ ಹಂತವಾಗಿ ಕೊಡಬೇಕು. ತಮ್ಮ ಭಾಗದ ಕಬ್ಬಿನ ಶಿಫಾರಸಿನ ಗೊಬ್ಬರದ ಪ್ರಮಾಣ ತಿಳಿಯಲು ತಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಅಥವಾ ಕೆವಿಕೆ ಯನ್ನು ಸಮ್ಪರ್ಕಿಸಿರಿ ಅಥವಾ ತಾವು ಪ್ಲ್ಯಾನಟಿಕ್ಸ ನ ಹೊಂ ಪೇಜನಲ್ಲಿ ತಮ್ಮ ಅನುಕೂಲಕ್ಕೆ ಕೊಟ್ಟಿರುವ ಕಬ್ಬಿನ "ರಸಗೋಬ್ಬರ ಕ್ಯಾಲ್ಕುಲೇಟರ" ಮತ್ತು "ಹವಾಮಾನ ವರದಿ" ಎನ್ನುವ ವಿಭಾಗಗಳನ್ನು ಉಪಯೋಗಿಸಿಕೊಂಡು ಸಮಯಕ್ಕೆ ಸರಿಯಾದ ಕ್ರಮಗಳು ಅನುಸರಿಸಿರಿ. ಇವು ನಿಮಗೆ ಕಬ್ಬಿನ ಬೆಳೆಯ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿ ಒದಗಿಸುತ್ತವೆ.

1ಡೌನ್ವೋಟ್ ಮಾಡಿ
H

Nmagu tilishi kodi

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Hanamanth. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
H

Past doj yen kodbeku 1thingl aitu

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
N

ನಮ್ಮ ಕಬ್ಬುನ ಮರಿಗಳು ಸಾಹಿತಿದಾವ ಕಾರಣ ಹೇಳಿ ಸರ್

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Ningaraju. ತಮ್ಮ ಬೆಳೆಯ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
I

ಕಬ್ಬು ಸುಳಿವು ಬೀಳುತ್ತದೆ ಪರಿಹಾರ ನೀಡಬೇಕು ಸರ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Mahesh Pujari. ತಮ್ಮ ಅನಿಸಿಕೆಯಂತೆ ಇದು Early Shoot Borer ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ, ತಾವು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Irappa Yakkundi. ತಮ್ಮ ಅನಿಸಿಕೆಯಂತೆ, ಇದು Early Shoot Borer ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ತಾವು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ