ಆರಂಭಿಕ ಶೂಟ್ ಬೋರರ್ - ಕಬ್ಬು

ಕಬ್ಬು ಕಬ್ಬು

V

Nana jaminalli 2 manth kabbu idu changi illuvari baralu yena madbeku. Last year 1yakarege 40 tanh illuvari bandittu

Sulli roga. Kabbina marigalu karagi hoguttave

2ಡೌನ್ವೋಟ್ ಮಾಡಿ
S

ಹೆಲೋ Venki Belavinal. ತಮ್ಮ ಕಬ್ಬಿನ ಬೆಳೆಗೆ Early Shoot Borer ಕೀಟ ತಗುಲಿದೆ. ಇದರ ಹತೋಟಿ ಕ್ರಮಗಳಿಗಾಗಿ ಮೇಲೆ ತೋರಿಸಿದ ಹಸಿರು ಬಣ್ಣದ ಹೈಪರ್ ಲಿಂಕ್‌ ಮೇಲೆ ಕ್ಲಿಕ್ಕಿಸಿ ಮಾಹಿತಿ  ಪಡೆಯಿರಿ. ಇದಲ್ಲದೆ ತಾವು ಹೆಚ್ಚಿನ ಕಬ್ಬಿನ ಇಳುವರಿ ಪಡೆಯಲು ಈ ಕೆಳಗಿನ ಕ್ರಮಗಳನ್ನು ಪಾಲಿಸಿರಿ: ಕಬ್ಬಿಗೆ ಶಿಫಾರಸಿನ ಪ್ರಮಾಣದಲ್ಲಿ 10 ಟನ ಕೊಟ್ಟಿಗೆ ಗೊಬ್ಬರ ಅಥವಾ 1 ಟನ ಎರೆಹುಳು ಗೊಬ್ಬರ ಅಥವಾ 5 ಟನ ಪ್ರೆಸ್ ಮಡ, ಇವುಗಳಲ್ಲಿ ಯಾವುದಾದರೊಂದರಲ್ಲಿ 4 ಕಿಲೋ ಗ್ರಾಂ ಅಜೋಸ್ಪಿರಿಲಮ್ + 4 ಕಿಲೋ ಗ್ರಾಂ ರಂಜಕ ಕರಗಿಸುವ ಸುಕ್ಷಾಣುಜೀವಿಗಳು ಬೆರೆಸಿ, 2 ರಿಂದ 3 ವಾರ ಮೊದಲು ಮಣ್ಣಿನಲ್ಲಿ ಸೇರಿಸಬೇಕು. ಸಾಧ್ಯವಾದರೆ ನಾಟಿ ಮಾಡುವ ಪೂರ್ವದಲ್ಲಿ ಸಾಲು ಬಿಟ್ಟು ಸಾಲು ಎರಡು ಮಗ್ಗಲು ಸೆಣಬು ಅಥವಾ ಡೈಂಚಾ ಅಥವಾ ದ್ವಿದಳ ಧಾನ್ಯಗಳನ್ನು ಬಿತ್ತಿ 45 ರಿಂದ 50 ದಿನಗಳಿಗೆ ಸಾಲಿನಲ್ಲಿ ಮುಗ್ಗು ಹೊಡೆದು ಮಣ್ಣು ಮುಚ್ಚಬೇಕು. ಸಾಧ್ಯವಾದರೆ ಇದೇ ರೀತಿ ಮತ್ತೊಂದು ಹಸಿರೆಲೆ ಬೆಳೆ ತೆಗೆದುಕೊಳ್ಳಬೇಕು. ನಂತರ ಸಿಫಾರಸ್ಸಿನ ಪ್ರಮಾಣದಲ್ಲಿ NPK ಗೊಬ್ಬರಗಳು ಅಂದರೆ ಸಾರಜನಕ:ರಂಜಕ:ಪೋಟಾಶ್ 100:30:75 ಕಿಲೋ ಗ್ರಾಂ ಪ್ರಮಾಣದಲ್ಲಿ ಕೊಡಬೇಕು. ಸೂಚನೆ: ಶೇಕಡಾ 10% ಸಾರಜನಕ, ಪೂರ್ತಿ ರಂಜಕ ಮತ್ತು ಪೋಟಾಶ್ ಪೋಷಕಾಂಶಗಳು ಕಬ್ಬು ನಾಟಿ ಮಾಡುವಾಗ ಸಾಲುಗಳ ಮಧ್ಯದಲ್ಲಿ ಒದಗಿಸಬೇಕು. ಉಳಿದ ಸಾರಜನಕ ಗೊಬ್ಬರವನ್ನು ನಾಟಿ ನಾಡಿದ 6 ನೇ ವಾರಕ್ಕೆ ಶೇಕಡಾ 20%, 10 ನೇ ವಾರಕ್ಕೆ ಶೇಕಡಾ 30% ಮತ್ತು 14 ನೇ ವಾರಕ್ಕೆ ಶೇಕಡಾ 40% ಕೊಟ್ಟು ಬೋದು ಹೋಢೇದುಕೋಳಬೇಕು. ಸಮಯಕ್ಕನುಸಾರವಾಗಿ ಬೇಕಾದಷ್ಟು ಮಾತ್ರ ನೀರು ಕೋಡಿ. ಈ ತರ ಮಾಡುವುದರಿಂದ ಕಬ್ಬಿನಲ್ಲಿ ಒಳ್ಳೆಯ ಇಳುವರಿ ಪಡೆಯಬಹುದು. ಧನ್ಯವಾದಗಳು.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!
V

Tq u sir

11

ಈ ಪ್ರಶ್ನೆಗಳು ಕೂಡ ನಿಮಗೆ ಆಸಕ್ತಿದಾಯಕವಾಗಿರಬಹುದು:

ಕಬ್ಬು

ಕಬ್ಬು ಬೆಳೆಯಲ್ಲಿ ಈ ರೋಗ

9 ತಿಂಗಳ ಕಬ್ಬು ಬೆಳೆಯಲ್ಲಿ ಈ ರೀತಿ (last digit) ...265 ತಳಿಯ, ಜಾತಿಯ ಕಬ್ಬು ಬೆಳೆದ ಎಲ್ಲ ರೈತರ ಹೊಲದಲ್ಲಿ ಈ ರೋಗ 100% ಕಾಣಿಸುತ್ತಿದೆ .ಹಳಿಯಾಳ ತಾಲೂಕಿನಲ್ಲಿ. ಈಗ ಯಾವುದೇ ರೀತಿಯ ಔಷಧಿ ಸಿಂಪಡನೆಗೆ ಅವಕಾಶ-ಅನುಕೂಲ ಇಲ್ಲ.ಕಬ್ಬು ಸುಮಾರು 10-12 ಅಡಿ ಇದೆ. 4 ತಿಂಗಳ ಮೊದಲೆ ಏನಾದರೂ (vaccine) ಮಾಡಬಹುದಾ.

ಕಬ್ಬು

ನಮ ಬೆಳೆ ಈತರ ಆಗಿದೆ ಅದ್ಕೆ yen ಮಾಡಬೇಕು

ಕಬು ಮಾತ್ರ್ ಬೆಳಗ ಅಗೆದೆ

ಕಬ್ಬು

ಕಬ್ಬಿಣ ಎಲೆ ಮೇಲೆ ಕೆಂಪು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡಿದೆ ಏನು ಮಾಡಬೇಕು

ಕಬ್ಬಿಣ ಎಲೆಗಳು ಕೆಂಪು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡಿದೆ

ಕಬ್ಬು

ಇಳುವರಿಯನ್ನು ಹೆಚ್ಚಿಸಲು ನಿಮ್ಮ ಬೆಳೆಯ ಬಗ್ಗೆ ಎಲ್ಲಾ ತಿಳಿಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ