ಥ್ರಿಪ್ಸ್ ನುಸಿ - ದಾಳಿಂಬೆ

ದಾಳಿಂಬೆ ದಾಳಿಂಬೆ

J

ದಾಳಿಂಬೆ ಬೆಳೆ ಎಪ್ಪತ್ತು ದಿನಗಳ ದ್ದಾಗಿದ್ದು ಅದಕ್ಕೆ ಯಾವಔಷಧ ಉಪಚಾರಗಳನ್ನು ಮಾಡಬೇಕು ಹಾಗೂ ಆ ಬೆಳೆಯಗುಣಲಕ್ಷಣಗಳನ್ನು ನನಗೆ ತಿಳಿಸುವಿರಾ...

ಸ್ವಲ್ಪ ಎಲೆಗಳು ಮುಕ್ರಿ ರೀತಿಯಲ್ಲಿ ಇರುತ್ತವೆ ಹಾಗೂಬೇರೆ ಯಾವ ರೋಗದ ಲಕ್ಷಣಗಳು ಕಂಡು ಬಂದಿಲ್ಲ

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ
S

ಹೆಲೋ Jnyaneshwara Y Bhosale. ಈ ಚಿತ್ರದ ಪ್ರಕಾರವಾಗಿ ಮತ್ತು ತಾವು ತಿಳಿಸಿದಂತೆ, ತಮ್ಮ ದಾಳಿಂಬೆ ಬೆಳೆಗೆ Thrips ಕೀಟದ ಭಾಧೆ ತಗುಲಿದೆ ಅನಿಸುತ್ತಿದೆ. ಆದುದರಿಂದ ತಾವು ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ, ತಮ್ಮ ದಾಳಿಂಬೆ ಬೆಳೆಗೆ ರೋಗ ಮತ್ತು ಕೀಟದ ಭಾಧೆ ಬಾರದಂತೆ ನಿಗಾ ವಹಿಸಲು, ಗಿಡಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಪ್ರತೀ 6 ತಿಂಗಳಿಗೆ ಒಂದು ಸಾರಿಯಂತೆ ಮತ್ತು ತಮ್ಮ ಭಾಗದ ದಾಳಿಂಬೆ ಬೆಳೆಯ ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಪ್ರತಿ ಗಿಡಕ್ಕೆ ಕೊಡಬೇಕು. ತಮ್ಮ ಭಾಗದ ದಾಳಿಂಬೆ ಬೆಳೆಯ ಶಿಫಾರಸಿನ ಪ್ರಮಾಣ ತಿಳಿಯಲು ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯನ್ನು ಅಥವಾ ಕೆವಿಕೆ ಯನ್ನು ಸಮ್ಪರ್ಕಿಸಿರಿ ಅಥವಾ ಇಲ್ಲಿ ಪ್ಲ್ಯಾಟಿಕ್ಸ ನ ಹೋಮ ಪೆಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬೇಕು. ಇದರಿಂದ ಗಿಡಗಳ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು. ಪ್ರಯತ್ನಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ