ನಾನು ಯುವಕ ರೈತ corona ಕಾರಣ ನಾನು ರೈತನಾದೆ ಆದರೆ ಅನುಭವ ಕೃಷಿಯಲ್ಲಿ ತೀರ ಕಡಿಮೆ ಆದರೂ ನಾನು ತೋಟ ಮಾಡೋಣ ಅಂತ ಮನಸು ಮಾಡಿ ತೋಟ ಮಾಡಿದೆ . ಇವಾಗ ನನಗೆ ಒಂದು ಸಹಾಯ ಬೇಕಿದೆ ಬೆಂಡೆಕಾಯಿ ಗಿಡದ ಎಲೆಗೆ ತೂತು ಬೀಳುತ್ತಿದೆ ಇದನ್ನು ತಡೆಗಟ್ಟಲು ಯಾವ ರಾಸಾಯನಿಕ ಬಳಸಬೇಕು ? ಹಾಗೂ ನಮ್ಮ ತೋಟದಲ್ಲಿ ಇರುವ ಬೆಳೆಗಳು ಅಂದ್ರೆ ಟೊಮೊಟೊ, ಸೌತೆಕಾಯಿ, ಇರೆಕಾಯಿ, ಚೌಳಿಕಾಯಿ, ಬದನೆಕಾಯಿ, ಮೆಣಸಿನಕಾಯಿಸಸಿ ಗಳು . ಇವೆಲ್ಲ ಸಮೃದ್ಧಿಯಿಂದ ಬೆಳೆಯಬೇಕು ಒಂದು ಉತ್ತಮ ರಸಾಯನ ತಿಳಿಸಿ .9686627770
ಎಲೆಗಳು ತೂತು ಬೀಳುವುದು ಹಾಗೂ ಸಸಿಗಳ ಬೆಳವಣಿಗೆಯಲ್ಲಿ ಕುಂಠಿತ ಕಂಡುಬರುತ್ತಿದೆ
Suresh 173587
4 ವರ್ಷಗಳ ಹಿಂದೆ
ಹೆಲೋ ಅಂಬರೀಷ. ತಾವು ಕೃಷಿಯಲ್ಲಿ ತೊಡಗಿಸಿಕೊಂಡಿರುವುದು, ತುಂಬಾ ಸಂತೋಷದ ವಿಚಾರ. ಬಹು ಬೆಳೆ ಪಧತಿಯಲ್ಲಿ ತಾವು ವಿವಿಧ ತರಕಾರಿಗಳು ಒಟ್ಟಿಗೆ ಬೆಳೆದಿರುವುದರಿಂದ ರೋಗ ಮತ್ತು ಕೀಟಗಳ ಭಾಧೆ ಆದಷ್ಟು ಕಡಿಮೆ ಮಾಡುವುದು ಮತ್ತು ಎಲ್ಲಾ ತರಕಾರಿಗಳು ಒಟ್ಟಿಗೆ ಬೆಳೆದಿರುವುದರಿಂದ ಬೆಲೆ ತುಲನೆಯಾಗಿ, ತಾವು ನಷ್ಟ ಅನುಭವುಸುವುದು ಕಡಿಮೆಯಾಗುತ್ತದೆ. ಈ ಚಿತ್ರದ ಪ್ರಕಾರವಾಗಿ, ತಮ್ಮ ಬೆಂಡೆಕಾಯಿ ಬೆಳೆಗೆ ಒಂದೆರಡು ರಂದ್ರಗಳು ಬಿದ್ದರೆ ಅಂಥಾ ದೊಡ್ಡ ತೊಂದರೆ ಏನೂ ಆಗುವುದಿಲ್ಲ. ಒಂದು ವೇಳೆ ಈ ರಂದ್ರಗಳು ಜಾಸ್ತಿ ಇದ್ದರೆ ಮಾತ್ರ ಔಷಧದ ಸಿಂಪರಣೆ ಮಾಡಬೇಕು. ಅಂದರೆ, ಇದು Flea Beetles ಕೀಟದ ಭಾಧೆ ಇರಬಹುದು ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಬೇರೆ ಏನಾದರು ತೊಂದರೆ ಇದ್ದರೆ ಇನ್ನೊಮ್ಮೆ ಇನ್ನಷ್ಟು ಕ್ಲಿಯರ್ ಇರುವ ಹತ್ತಿರದ ಚಿತ್ರಗಳ ಜೊತೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ. ಜೊತೆಗೆ, ತಾವು ಕೃಷಿಯಲ್ಲಿ ಹೊಸದಾಗಿ ತೊಡಗಿಸಿಕೊಂಡಿರುವುದರಿಂದ, ತಾವು ಪ್ಲಾಂಟಿಕ್ಸ್ ನ ಹೊಂ ಪೇಜನಲ್ಲಿ ಕೊಟ್ಟಿರುವ ಮೆಣಸಿನಕಾಯಿ, ಟೊಮ್ಯಾಟೊ, ಬದನೆಕಾಯಿ, ಸೌತೇಕಾಯಿ ಬೆಳೆಗಳ ಸಲಹೆಯನ್ನು ರಚಿಸಿ. ಇದು ನಿಮ್ಮ ಬೆಳೆಗಳ ಉತ್ಪಾದನೆಯನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದರ ಕುರಿತು ಮಾಹಿತಿಯನ್ನು ಒದಗಿಸುತ್ತದೆ. ತಾವು ಒಳ್ಳೆಯ ಪಧತಿ ಅಳವಡಿಸಿಕೊಳ್ಳುವುದು ಒಂದು ಸುವಿಚಾರವಾಗಿದ್ದು, ಬೇರೆ ರೈತರಿಗೆ ತಾವು ಬಹು ಬೆಳೆ ಪಧತಿಯ ಮಾದರಿಯಾಗಿರುತ್ತೀರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!