ಮಾವಿನ ಮರ ಬುದುರೋಗದಿಂದ ಹೂವು ಉದುರುತ್ತಾಯಿತ್ತು 2 ಬಾರಿ hexaconozole ಅನ್ನು ಸಿಂಪರಣೆ ಮಾಡಿದ್ದೇನೆ. ಕಾಯಿ ಕುರುತಾ ಇದೆ ಆದರೆ ಆ ಹೂವಿನ ಕೊಂಬೆ ಒಣಗತಾ ಇದೆ ಎನ್ ಮಾಡ್ಬೇಕು ದಯವಿಟ್ಟು ಪರಿಹಾರ ತಿಳಿಸಿ
ಮಾವಿನ ಮರ ಬುದುರೋಗದಿಂದ ಹೂವು ಉದುರುತ್ತಾಯಿತ್ತು 2 ಬಾರಿ hexaconozole ಅನ್ನು ಸಿಂಪರಣೆ ಮಾಡಿದ್ದೇನೆ. ಕಾಯಿ ಕುರುತಾ ಇದೆ ಒಳ್ಳೆ ವಿಚಾರ(improvement ಆಗಿದೆ) ಅನ್ನಬಹುದು ಆದರೆ ಆ ಕಾಯಿಯ ಕೊಂಬೆ ಒಣಗತಾ ಇದೆ . ಉದಿರಿ ಹೋಗಬಹುದೆನೊ ಕೊಂಬೆ , ಹೀಗಾದರೆ ಔಷದಿ ಸಿಂಪರಣೆ ಮಾಡಿದ್ದು ಎಲ್ಲಾ ವ್ಯರ್ಥ..(ಬೂದು ರೋಗವು ಸುಮಾರು 15ವರ್ಷದಿಂದ ಇದೆ ಹೂವು ಬಿಟ್ಟು ಉದುರಿ ಹೋಗುತ್ತದೆ ಪ್ರತಿ ವರ್ಷ. ಆದರೆ ಈ ಸಾರಿ ಸ್ವಲ್ಪ ಕಾಯಿ ಕಾಣಿಸ್ತಾ ಇದೆ ಆದರೆ ಕೊಂಬೆ ಒಣಕುತ್ತಿದ್ದು(ಇದಕ್ಕೆ ಕಾರಣ ತಿಲ್ಸಿ, ಬೇರೆ ರೋಗ ಇರಬಹುದಾ) ಮತ್ತೆ ಎನ್ ಮಾಡ್ಬೇಕು ದಯವಿಟ್ಟು ಪರಿಹಾರ ತಿಳಿಸಿ
Suresh
173587
4 ವರ್ಷಗಳ ಹಿಂದೆ
ಹೆಲೋ Shivu. ಈ ಚಿತ್ರದ ಪ್ರಕಾರವಾಗಿ ಮತ್ತು ತಮ್ಮ ಅನಿಸಿಕೆಯಂತೆ, ತಮ್ಮ ಮಾವಿನ ಗಿಡಕ್ಕೆ Powdery Mildew of Mango ಮತ್ತು Anthracnose of Papaya and Mango ರೋಗ ತಲುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ, ಪ್ಲ್ಯಾಟಿಕ್ಸ ಗ್ರಂಥಾಲಯವನ್ನು ಸಮ್ಪರ್ಕಿಸಿ, ಗುಣಲಕ್ಷಣಗಳನ್ನು ಸರಿಯಾಗಿ ತಿಳಿದುಕೊಂಡು,ಗುಣಲಕ್ಷಣಗಳ ಹೋಲಿಕೆ ನೋಡಿಕೊಂಡು, ಅಲ್ಲಿ ತೋರಿಸಿದ ಸರಿಯಾದ ಮುಂಜಾಗರೂಕತೆಯ ಕ್ರಮಗಳು ಮತ್ತು ಚಿಕಿತ್ಸಾ ಕ್ರಮಗಳು ತಕ್ಷಣ ಅನುಸರಿಸಿರಿ.
ನಿಮಗೂ ಒಂದು ಪ್ರಶ್ನೆ ಇದೆಯೇ?
ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!
ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!Shivu
6
4 ವರ್ಷಗಳ ಹಿಂದೆ
Sir ಆದರೆ ನಾನು 15ದಿನದ ಹಿಂದೆ ಮತ್ತು7 ದಿನದ ಹಿಂದೇನೆ ನೀವು ತಿಳಿಸಿರುವ ಶಿಲೀಂದ್ರ ನಾಶಕವಾದಂತಹ hexaconozole ಅನ್ನು ಬಳಸಿದ್ದೆನಲ್ಲಾ ಆದರೂ ಅದು ಸ್ವಲ್ಪ ಮಟ್ಟಿಗೆ ನಿಯಂತ್ರಣ ಬಂದಿದೆ ಅಂದರೆ ನಿದಾನವಾಗಿ ಒಣಗುತ್ತಿದೆ ಅಷ್ಟೇ ( 20 ಲೀಟರ್ ನೀರಿಗೆ 30ml ನಾಶಕ ಬಳಸಿದ್ದೇನೆ, ಹಿಂದಿನ ವರ್ಷದಲ್ಲಿ ಹುವಿನಲ್ಲೆ ಒಣಗುತ್ತಿತ್ತು ಈಗ ಸಣ್ಣ ಕಾಯಿಯಲ್ಲಿ ಒಣಗುತ್ತಿದೆ , ಈಗ ಎನ್ ಮಾಡ್ಬೇಕು , ಅದೇ ಔಷಧಿಯನ್ನು ಇನ್ನೊಮ್ಮೆ ಸಿಂಪಡಿಸಬೇಕಾ ? ಅಥವಾ ಮುಂದಿನ ವರ್ಷಕ್ಕೆ ಏನಾದ್ರೂ ಇನ್ನೂ ಬಲಿಷ್ಠವಾಗಿ ತಯಾರಾಗಬೇಕಾ? ಮುಂಜಾಗ್ರತೆ ವಹಿಸುಬೇಕಾ ತಿಳಿಸಿಕೊಡಿ?
Suresh
173587
4 ವರ್ಷಗಳ ಹಿಂದೆ
ಹೆಲೋ Shivu. ಬೂದಿ ರೋಗ ಕಡಿಮೆಯಾಗಿದೆ ಎಂದು ತಿಳಿಸಿದ ತಮ್ಮ ಮಾಹಿತಿಗೆ ಧಾನ್ಯಗಳು. ಈಗ ಇನ್ನೂ ಬೂದಿ ರೋಗದ ಲಕ್ಷಣಗಳು ಇದ್ದರೆ, ಇನ್ನೊಮ್ಮೆ ಸಿಂಪರಣೆ ಮಾಡಿರಿ. ಜೊತೆಗೆ ಈ ಚಿತ್ರದ ಪ್ರಕಾರವಾಗಿ, ತಮ್ಮ ಮಾವಿನ ಗಿಡಕ್ಕೆ, ಈಗಾಗಲೇ ನಾನು ಮೇಲಿನ ವಿಭಾಗದಲ್ಲಿ ತಿಳಿಸಿದಂತೆ Anthracnose of Papaya and Mango ರೋಗ ಕೂಡ ತಗುಲಿದೆ ಅನಿಸುತ್ತಿದೆ. ಸರಿಯಾಗಿ ಪರೀಕ್ಷಿಸಿ ನೋಡಿರಿ. ಒಂದು ವೇಳೆ ಈ ರೋಗದ ಲಕ್ಷಣಗಳು ಕಂಡು ಬಂದರೆ, ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕ್ ಮೇಲೆ ಬೆರಳು ಒತ್ತಿ, ಅಲ್ಲಿ ತೋರಿಸಿದ ಔಷಧಗಳ ಮಾಹಿತಿ ಪಡೆದು ಹತೋಟಿ ಕ್ರಮಗಳು ಅನುಸರಿಸಿರಿ. ಕಾಯಿ ಉದುರುವುದು ತಡೆಯಲು ಮತ್ತು ಮುಂದಿನ ವರ್ಷದ ವರೆಗೆ ಒಳ್ಳೆಯ ಬೆಳವಣಿಗೆ ಪಡೆಯಲು, ಸರಿಯಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಅಥವಾ ಎರೆ ಹುಳು ಗೊಬ್ಬರದ ಜೊತೆಗೆ 10:26:26 ಕಾಂಪ್ಲೆಕ್ಸ್ ಗೊಬ್ಬರದ ಜೊತೆ ಪ್ರತೀ 6 ತಿಂಗಳಿಗೆ ಒಂದು ಸಾರಿಯಂತೆ, ಗಿಡದ ಸುತ್ತಲೂ ಹಾಕಿ ಮಣ್ಣು ಮುಚ್ಚಿರಿ. ನಂತರ ನಿಯಮಿತವಾಗಿ ಮತ್ತು ವಾತಾವರಣಕ್ಕೆ ಅನುಸಾರವಾಗಿ ನೀರು ಹಾಯಿಸುವುದು ಮರೆಯಬಾರದು. ಇದರಿಂದ ಕಾಯಿ ಉದುರುವುದು ತಡೆಯುವುದಲ್ಲದೆ, ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು. ಸೂಚನೆ: ರಾಸಾಯನಿಕ ಗೊಬ್ಬರಗಳ ಮಾಹಿತಿಗಾಗಿ, ತಾವು ಇಲ್ಲಿ ಪ್ಲ್ಯಾಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಕೂಡ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬಹುದು. ಪ್ರಯತ್ನಿಸಿರಿ.
Pavan
0
4 ವರ್ಷಗಳ ಹಿಂದೆ
Pls contact for growth and size 8105456199
Shivu
6
4 ವರ್ಷಗಳ ಹಿಂದೆ
Pavan K Acharya ಯಾವುದರ grouth .ಮರ / ಕಾಯಿ
Shivu
6
4 ವರ್ಷಗಳ ಹಿಂದೆ
r Suresh Gollar ನಮ್ಮ ಮಾವಿನ ಮರಕ್ಕೆ ಬೂದು ರೋಗಕ್ಕೆ ನಿಮ್ಮ ಸಲಹೆ ಯಂತೆ hexaconozole ಅನ್ನು 3 ಬಾರಿ ಸಿಂಪರಣೆ ಮಾಡಿದ್ದೇನೆ ಬಹುತೇಕ ಹೂವು ಉದುರಿ ಹೋಯಿತು ಸಲ್ಪ ಪ್ರಮಾಣದಲ್ಲಿ ಮಾತ್ರ ಕಾಯಿ ಕುಂತಿತ್ತು ಅದು ತಡವಾಗಿ ಔಷದಿ ಸಿಂಪರಣೆ ಮಾಡಿದ್ದ ಕಾರಣ ಇರ್ಬೋದು. ಆದರೆ ಈಗ 1ವಾರದಿಂದ ಮತ್ತೆ ಹೂವು ಚೆನ್ನಾಗಿ ಬಿಟ್ಟಿದೆ ಈಗ ಮತ್ತೆಮ್ಮೆ ಸಿಮರಣೆ ಮಾಡಬೇಕೆಂದು ಕೊಂಡಿದ್ದೇನೆ hexaconozole ಜೊತೆ confider ಹೊಡಯ ಬಹುದೆ ಇದು ಹೂವು ಉದುರದಿರಳು ಬಳಸುತ್ತಾರೆ ಎಂದು ಕೊಂಡಿದ್ದೇನೆ. ನಿಮ್ಮ ಅಮೂಲ್ಯ ಸಲಹೆ ನಮಗೆ ಅತಿ ಮುಖ್ಯ. ಹಾಗೂ ಹೋವು ಬಿಡಲು ಪ್ರಾರಂಭಿಸಿದ ಎಸ್ಟು ದಿನದಲ್ಲಿ ಸಿಂಪರಣೆ ಮಾಡಿದರೆ ಒಳ್ಳೆಯ results ಪಡೆಯಲು ಸಾಧ್ಯ ತಿಳಿಸಿ .ಧನ್ಯವಾದ
Suresh
173587
4 ವರ್ಷಗಳ ಹಿಂದೆ
ಹೆಲೋ Shivu. ಇದರ ಕುರಿತು ನಾನು ಈಗಾಗಲೇ ಮೊದಲಿನ ವಿಭಾಗದಲ್ಲಿ ಉತ್ತರಿಸಿದ್ದೇನೆ.
Shivu
6
4 ವರ್ಷಗಳ ಹಿಂದೆ
Suresh Gollar monocrotopus ಹೊಡಿಬೋದ
Suresh
173587
4 ವರ್ಷಗಳ ಹಿಂದೆ
ಹೆಲೋ Shivu. ಅವಶ್ಯಕತೆ ಇದ್ದರೆ, ಸಮಯಕ್ಕೆ ಅನುಸಾರವಾಗಿ ಮಾತ್ರ ಔಷಧ ಸಿಂಪರಣೆ ಮಾಡಬೇಕು. ಆದುದರಿಂದ, ತಾವು ಈಗಾಗಲೇ ನಾನು ಮೇಲಿನ ವಿಭಾಗದಲ್ಲಿ ತಿಳಿಸಿದಂತೆ, ತಮ್ಮ ಮಾವಿನ ಗಿಡದ ಕ್ಲಿಯರ್ ಇರುವ ಹತ್ತಿರದ ಹಗಲು ಹೊತ್ತಿನ ಸಮಯದಲ್ಲಿ ತೆಗೆದ ತೋಟದಲ್ಲಿನ ನೇರವಾದ ಚಿತ್ರಗಳೊಂದಿಗೆ ಸಮಂಜಸ ಪ್ರಶ್ನೆಗಳು ಕಳುಹಿಸಿ ಮಾಹಿತಿ ಪಡೆಯಿರಿ.