ಕರಿಹೇನು ರೋಗ(ಅಫಿಡ್) - ಹತ್ತಿ

ಹತ್ತಿ ಹತ್ತಿ

H

Sir maggigalu udhroktha eve sir yava havshadha vodibheku sir

Maggigalu udhroktha eve sir edhdhakke anne heli

3ಡೌನ್ವೋಟ್ ಮಾಡಿ
S

ಹೆಲೋ Hanumesha. ಈ ಚಿತ್ರದ ಪ್ರಕಾರವಾಗಿ, ತಮ್ಮ ಹತ್ತಿ ಬೆಳೆಗೆ ತೀವ್ರಗತಿಯಲ್ಲಿ Whiteflies ಮತ್ತು Aphids ಕೀಟಗಳ ಭಾಧೆ ತಗುಲಿದೆ ಅನಿಸುತ್ತಿದೆ. ಇಲ್ಲಿ ತೋರಿಸಿದ ಹಸಿರು ಬಣ್ಣದ ಅಕ್ಷರಗಳ ಲಿಂಕಗಳ ಮೇಲೆ ಬೆರಳು ಒತ್ತಿ ಹತೋಟಿ ಕ್ರಮಗಳು ಅನುಸರಿಸಿರಿ. ಜೊತೆಗೆ, ಮಳೆ ಜಾಸ್ತಿ ಆಗಿ ಹೊಲದಲ್ಲಿ ನೀರು ನಿಂತರೆ ಕೂಡ, ಹೂವು ಉದುರುವುದು. ಆದುದರಿಂದ, ತಮಗೆ ಗೋತ್ತಿರುವಂತೆ, ಇನ್ನೂ ಮಳೆಗಾಲದ ಸಮಯ ಇರುವುದರಿಂದ, ಮಳೆ ಯಾವಾಗ ಬೇಕಾದರೂ ಬರಬಹುದು ಮತ್ತು ಕೆಲವೊಂದು ಕಡೆ ತುಂಬಾ ಮಳೆ ಬರುತ್ತಿದೆ. ಹೀಗೇ ಮಳೆ ಜಾಸ್ತಿ ಬಂದು ಹೊಲದಲ್ಲಿ ನೀರು ನಿಂತರೆ, ತಕ್ಷಣ ಹೊಲದಲ್ಲಿ ಅಲ್ಲಲ್ಲಿ ಬಸಿ ಕಾಲುವೆ ತೆಗೆಯಿರಿ ಮತ್ತು ನೀರು ಸರಾಗವಾಗಿ ಬಸಿದು ಹೋಗುವಂತೆ ಮಾಡಿರಿ. ಜೊತೆಗೆ, ಒಳ್ಳೆಯ ಇಳುವರಿ ಪಡೆಯಲು ಸಾಕಷ್ಟು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಶಿಫಾರಸಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು ಕೊಡಬೇಕು ಅಥವಾ ಇಲ್ಲಿ ಪ್ಲ್ಯಾಟಿಕ್ಸ ನ ಹೊಂ ಪೇಜನಲ್ಲಿ ಕೊಟ್ಟಿರುವ ರಸಗೊಬ್ಬರಗಳ ಕ್ಯಾಲ್ಕುಲೇಟರ ಬಳಸಿಕೊಂಡು ರಾಸಾಯನಿಕ ಗೊಬ್ಬರಗಳು ಕೊಡಬಹುದು. ಇದರಿಂದ ಬೆಳೆಯ ಒಳ್ಳೆಯ ಬೆಳವಣಿಗೆ ಮತ್ತು ಇಳುವರಿ ನಿರೀಕ್ಷಿಸಬಹುದು. ಪ್ರಯತ್ನಿಸಿರಿ.

ಅಪ್‌ವೋಟ್ ಮಾಡಿ!ಡೌನ್ವೋಟ್ ಮಾಡಿ

ನಿಮಗೂ ಒಂದು ಪ್ರಶ್ನೆ ಇದೆಯೇ?

ಈಗ ದೊಡ್ಡ ಕೃಷಿ ಆನ್‌ಲೈನ್ ಸಮುದಾಯಕ್ಕೆ ಸೇರಿಕೊಳ್ಳಿ ಮತ್ತು ನಿಮಗೆ ಅಗತ್ಯವಿರುವ ಸಹಾಯವನ್ನು ಪಡೆಯಿರಿ!

ಪ್ಲಾಂಟಿಕ್ಸ್ ಅನ್ನು ಈಗಲೇ ಉಚಿತವಾಗಿ ಪಡೆಯಿರಿ!

ಪ್ರಪಂಚದಾದ್ಯಂತದ ರೈತರಿಗೆ ತಮ್ಮ ಕೃಷಿ ವಿಧಾನಗಳನ್ನು ಸುಧಾರಿಸಲು ಪ್ಲಾಂಟಿಕ್ಸ್ ಸಹಾಯ ಮಾಡುತ್ತದೆ.

ಪ್ಲಾಂಟಿಕ್ಸ್ ಬಗ್ಗೆ ಇನ್ನಷ್ಟು ತಿಳಿಯಿರಿ
ಉತ್ತರಕ್ಕೆ ಹೋಗಿ