ಮಾವು

ಮಾವಿನ ಚಿಗುರು ಕೊರಕ

Chlumetia transversa

ಕೀಟ

5 mins to read

ಸಂಕ್ಷಿಪ್ತವಾಗಿ

  • ಸಸ್ಯಗಳು ಸೊರಗುತ್ತವೆ.
  • ಕಾಂಡ ಮತ್ತು ಎಳೆಯ ಚಿಗುರುಗಳಲ್ಲಿ ಬಿಳಿ ಬಣ್ಣದ ಮೊಟ್ಟೆಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ಚಿಗುರು ಕೊರಕದ ಹುಳಗಳು ಬೆಳೆಯುತ್ತಿರುವ ಹೂಗೊಂಚಲುಗಳನ್ನೂ ಮೃದುವಾದ ಎಲೆಗಳ ಮಧ್ಯನಾಳಗಳನ್ನೂ ಮತ್ತು ಚಿಗುರುಗಳನ್ನೂ ಭೇದಿಸಿ ಕೆಳಕ್ಕೆ ಕೊರೆಯುತ್ತಾ ಹೋಗುತ್ತವೆ. ಬಾಧಿತ ಗಿಡದ ಭಾಗಗಳು ಬಾಡುತ್ತವೆ ಹಾಗೂ ಅವಕಾಶಕ್ಕೆ ಹೊಂಚುವ ರೋಗಕಾರಕಗಳಿಂದ ಹೆಚ್ಚುವರಿ ಸೋಂಕುಗಳಿಗೆ ಒಳಗಾಗುತ್ತವೆ. ಲಾರ್ವಾಗಳು ಅರೆಪಾರದರ್ಶಕವಾದ ಹಳದಿ ಮಿಶ್ರಿತ ಹಸಿರು ಅಥವಾ ಕಂದು ಬಣ್ಣದಲ್ಲಿದ್ದು, ತಲೆಯು ಕಪ್ಪು ಬಣ್ಣದ್ದಾಗಿರುತ್ತದೆ. ಇದು ಹೊಸ ಕುಡಿಗಳ ಮೃದುವಾದ ಹಾಗೂ ನವಿರಾದ ಅಂಗಾಂಶಗಳನ್ನು ತಿನ್ನಲು ಹೊರಬರುತ್ತದೆ, ಹೊರಬರುವ ತೂತಿನ ಬಳಿ ಕೊರೆತದಿಂದ ಉಂಟಾದ ಹುಡಿಯಂತಹ ಹಿಕ್ಕೆಯನ್ನು ಹೇರಳವಾಗಿ ಬಿಡುತ್ತದೆ. ಗಿಡದ ಉಳಿಕೆಗಳ ಮೇಲೆ ಮತ್ತು ಮಣ್ಣಿನ ಮೇಲ್ಭಾಗದಲ್ಲಿ ಕಂದು ಬಣ್ಣದ ಪ್ಯುಪಾವನ್ನು ಕಾಣಬಹುದು. ಲಭ್ಯವಿರುವ ಮಾಹಿತಿಯ ಪ್ರಕಾರ ಮಾವು ಮತ್ತು ಲಿಚಿ ಹಣ್ಣಿನ ಗಿಡಗಳು ಮಾತ್ರ ಇದಕ್ಕೆ ಆಶ್ರಯದಾತ ಗಿಡಗಳು.

Recommendations

ಜೈವಿಕ ನಿಯಂತ್ರಣ

ಹುಳಗಳ ಸಂಖ್ಯೆ ಕಡಿಮೆಯಿದ್ದಾಗ, ಬೆಳ್ಳುಳ್ಳಿ ಮತ್ತು ಮೆಣಸಿನ ಸಸ್ಯ-ಸಾರವನ್ನು ನೀರಲ್ಲಿ ಕರಗಿಸಿ ಗಿಡಕ್ಕೆ ಸಿಂಪಡಿಸುವುದರಿಂದ ಹುಳಗಳನ್ನು ತಡೆಗಟ್ಟಬಹುದು ಹಾಗೂ ಕೊರೆತವನ್ನು ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಪೀಡಿತ ಕಸಿ ಸಸ್ಯ ಅಥವಾ ಮೊಳಕೆಯನ್ನು ತೆಗೆದು 0.04% ಮೊನೊಕ್ರೊಟೋಫೊಸ್, 0.05% ಡಿಮೀಥೋಯೇಟ್ ಅಥವಾ 0.1% ಕಾರ್ಬಾರಿಲನ್ನು ಸಿಂಪಡಿಸುವುದರಿಂದ ಕೀಟವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು. ಫೆನ್ವಾಲೆರೇಟ್, ಪೆರ್ಮೆತ್ರಿನ್, ಪೆಂತೋಯೆಟ್ ಮತ್ತು ಕ್ವಿನಲ್ಫೋಸ್ಗಳಂತಹ ಕೀಟನಾಶಕಗಳನ್ನು ಮಾವಿನ ಚಿಗುರು ಕೊರೆತವನ್ನು ನಿಯಂತ್ರಿಸಲು ಬಳಸಬಹುದು.

ಅದಕ್ಕೆ ಏನು ಕಾರಣ

ಗಿಡದ ಬೇರೆ ಬೇರೆ ಭಾಗಗಳ ಮೇಲಾಗುವ ಹಾನಿಯು ಮುಖ್ಯವಾಗಿ ಲಾರ್ವಾಗಳು ತಿನ್ನುವುದರಿಂದ ಉಂಟಾಗುತ್ತದೆ. ಪ್ರೌಢ ಪತಂಗಗಳು ಬೂದು ಮಿಶ್ರಿತ ಕಪ್ಪು ಬಣ್ಣದಲ್ಲಿದ್ದು, ಗಾತ್ರದಲ್ಲಿ 8-10 ಮಿಮೀ ಇರುತ್ತವೆ. ಅವುಗಳು ಉದ್ದವಾದ ಆಂಟೆನಾಗಳೊಂದಿಗೆ ಕಂದು ಬಣ್ಣದ ಬೆಣೆಯಾಕಾರದ ದೇಹವನ್ನು ಹೊಂದಿರುತ್ತವೆ. ರೆಕ್ಕೆಗಳು ಸುಮಾರು 15 ಮಿಮೀ. ಅಗಲಕ್ಕಿರುತ್ತವೆ. ಮುಂದಿನ ರೆಕ್ಕೆಗಳು ಕಂದುಬಣ್ಣದ್ದಾಗಿರುತ್ತವೆ, ಅಡ್ಡಡ್ಡಕ್ಕಿರುವ ಪಟ್ಟೆಗಳು ಕಂದು ಬಣ್ಣದ ವಿವಿಧ ಛಾಯೆಗಳಲ್ಲಿರುತ್ತದೆ. ರೆಕ್ಕೆಯ ಅಂಚಿನಲ್ಲಿ ಮಸುಕಾದ ಒಂದು ಪಟ್ಟೆ ಇರುತ್ತದೆ. ಹಿಂದಿನ ರೆಕ್ಕೆಗಳು ಸಾದಾ ಕಂದು ಬಣ್ಣದಲ್ಲಿರುತ್ತವೆ. ಕೀಟವು ಕಾಂಡ ಮತ್ತು ಎಳೆಯ ಚಿಗುರುಗಳಲ್ಲಿ ಕೆನೆ ಬಿಳಿ ಬಣ್ಣದ ಮೊಟ್ಟೆಗಳನ್ನು ಇಡುತ್ತದೆ. ಲಾರ್ವಾಗಳು 3-7 ದಿನಗಳ ನಂತರ ಹೊರ ಬಂದು, ಸುಮಾರು 8-10 ದಿನಗಳ ಕಾಲ ಗಿಡದ ಭಾಗಗಳನ್ನು ತಿಂದು ಬಳಿಕ ಪ್ಯೂಪಾ ಹಂತಕ್ಕೆ ಬೆಳೆಯುತ್ತವೆ. ಹೊರ ಬಂದ ನಂತರ, ಪ್ರೌಢ ಕೀಟಗಳು ಬೇರೆ ಮರ ಮತ್ತು ತೋಟಗಳಿಗೆ ಸುಲಭವಾಗಿ ಹಾರುತ್ತವೆ. ಮಳೆಗಾಲ ಮತ್ತು ಹೆಚ್ಚಿದ ತೇವಾಂಶವು ಮಾವಿನ ಚಿಗುರು ಕೊರಕಗಳ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ, ಆದರೆ ಅಧಿಕ ತಾಪಮಾನವು ಕೀಟಗಳ ಜೀವನ ಚಕ್ರಕ್ಕೆ ಅಡ್ಡಿಯುಂಟುಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿಯಮಿತವಾಗಿ ಮೊಟ್ಟೆ, ಲಾರ್ವಾ, ಪತಂಗ ಮತ್ತು ಪ್ಯೂಪಾಗಳ ಇರುವಿಕೆಗೆ ಹೊಲದ ಮೇಲ್ವಿಚಾರಣೆ ಮಾಡಿ.
  • ಸೋಂಕಿತ ಗಿಡದ ಭಾಗಗಳನ್ನು ಕತ್ತರಿಸಿ ಹಾಗೂ ಅವುಗಳನ್ನು ಸುಟ್ಟು ಹಾಕಿ ಅಥವಾ ಹೂತು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ