ಭತ್ತ

ಅಕ್ಕಿ ತಿಗಣೆ

Leptocorisa spp.

ಕೀಟ

5 mins to read

ಸಂಕ್ಷಿಪ್ತವಾಗಿ

  • ತೆನೆಯಲ್ಲಿ ಕೀಟ ತಿನ್ನುವುದರಿಂದ ಹಾನಿ.
  • ಭರ್ತಿಯಾಗದ ಅಥವಾ ಖಾಲಿ ಧಾನ್ಯಗಳು.
  • ಬಣ್ಣಗೆಡುವುದು.
  • ಧಾನ್ಯಗಳ ವಿರೂಪತೆ.
  • ಬ್ಯಾಕ್ಟೀರಿಯಾದ ಪ್ಯಾನಿಕಲ್ ರೋಗದೊಂದಿಗೆ ಗೊಂದಲವಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಅಕ್ಕಿ ಧಾನ್ಯದ ಬೆಳವಣಿಗೆಯ ಹಂತವನ್ನು ಅವಲಂಬಿಸಿ, ಆಹಾರ ಚಟುವಟಿಕೆಯು ಖಾಲಿ ಧಾನ್ಯಗಳು ಅಥವಾ ಸಣ್ಣ, ಗಟ್ಟಿಯಾದ, ವಿರೂಪಗೊಂಡ ಧಾನ್ಯಗಳಿಗೆ ಕಾರಣವಾಗಬಹುದು. ಅವುಗಳ ಮೇಲೆ ಚುಕ್ಕೆಗಳಿದ್ದು ಕೆಲವೊಮ್ಮೆ ಕೆಟ್ಟಾ ವಾಸನೆಯೂ ಇರಬಹುದು. ತೊಟ್ಟುಗಳು ನೆಟ್ಟಗೆ ಕಾಣಿಸಿಕೊಳ್ಳುತ್ತವೆ.

Recommendations

ಜೈವಿಕ ನಿಯಂತ್ರಣ

ಅಕ್ಕಿ ಕೀಟವನ್ನು ಹೊರಹಾಕಲು ಆರೊಮ್ಯಾಟಿಕ್ (ಲೆಮನ್ ಗ್ರಾಸ್ ನಂತಹ) ಸೋಪ್ ದ್ರಾವಣವನ್ನು ಸಿಂಪಡಿಸಿ. ಅಕ್ಕಿ ಕೀಟವನ್ನು ಆಕರ್ಷಿಸಲು ಮತ್ತು ಅದನ್ನು ಕೊಲ್ಲಲು ಗದ್ದೆ ಹತ್ತಿರವಿರುವ "ಪ್ರಹೋಕ್" (ಕಂಬೋಡಿಯಾದ ಸ್ಥಳೀಯ 'ಚೀಸ್') ಅನ್ನು ಬಳಸಿ. ಅಕ್ಕಿಯ ಕೀಟವನ್ನು ಹೊರಹಾಕುವುದಕ್ಕೆ ಮುಂಜಾನೆ ಅಥವಾ ಮಧ್ಯಾಹ್ನದಲ್ಲಿ ಸೊಳ್ಳೆ ಬಲೆಗಳನ್ನು ಬಳಸಿ. ತದನಂತರ ಇತರ ಅಕ್ಕಿ ಕೀಟಗಳನ್ನು ತೆಗೆದುಹಾಕಲು ಬಲೆಯಲ್ಲಿ ಹಿಡಿದ ಕೀಟಗಳನ್ನು ಪುಡಿಮಾಡಿ ನೀರಿನಲ್ಲಿ ಇರಿಸಿ ನಂತರ ಸಿಂಪಡಿಸಿ. ಇತರ ಜೈವಿಕ ನಿಯಂತ್ರಣ ಏಜೆಂಟ್ಗಳನ್ನು ಉತ್ತೇಜಿಸಿ: ಕೆಲವು ಕಣಜಗಳು, ಮಿಡತೆಗಳು ಮತ್ತು ಜೇಡಗಳು ಅಕ್ಕಿ ಕೀಟಗಳು ಅಥವಾ ಅಕ್ಕಿ ಕೀಟಗಳ ಮೊಟ್ಟೆಗಳ ಮೇಲೆ ದಾಳಿ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕೀಟನಾಶಕವನ್ನು ಬಳಸುವುದರಿಂದಾಗುವ ಪ್ರಯೋಜನಗಳನ್ನು ಆರೋಗ್ಯ ಮತ್ತು ಪರಿಸರದ ಅಪಾಯಗಳಿಗೆ ಪ್ರಕಾರ ಅಳೆಯಬೇಕು. ಹೊಲದ ಅಂಚುಗಳಿಂದ ಮಧ್ಯದೆಡೆಗೆ ವೃತ್ತಾಕಾರದ ರೀತಿಯಲ್ಲಿ ಪ್ರಾರಂಭಿಸುವ ಮೂಲಕ ಸಂಜೆ ವೇಳೆಯಲ್ಲಿ 2.5 ಮಿಲೀ ಕ್ಲೋರ್‌ಪಿರಿಫೋಸ್ 50 ಇಸಿ +1 ಮಿಲಿ / ಲೀ ಪ್ರಮಾಣದಲ್ಲಿ ಡಿಕ್ಲೋರ್ವೋಸ್‌ನಲ್ಲಿ ಸಿಂಪಡಿಸಿ. ಇದು ತಿಗಣೆಗಳನ್ನು ಮಧ್ಯಭಾಗಕ್ಕೆ ತರುತ್ತದೆ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಪರ್ಯಾಯವಾಗಿ ನೀವು ಅಬಾಮೆಕ್ಟಿನ್ ಅನ್ನು ಸಹ ಬಳಸಬಹುದು. ವಿವೇಚನಾರಹಿತ ಕೀಟನಾಶಕ ಬಳಕೆ ಜೈವಿಕ ನಿಯಂತ್ರಣಕ್ಕೆ ತಡೆಯೊಡ್ಡುತ್ತದೆ, ಇದು ಕೀಟ ಪುನರುಜ್ಜೀವನಕ್ಕೆ ಕಾರಣವಾಗುತ್ತದೆ.

ಅದಕ್ಕೆ ಏನು ಕಾರಣ

ಅಕ್ಕಿ ಕೀಟಗಳು ಮಿಲ್ಕಿಂಗ್ ನಿಂದ ಧಾನ್ಯ ತುಂಬುವ ಹಂತದಲ್ಲೇ ಅಧಿಕವಾಗಿ ಹಾನಿಯುಂಟುಮಾಡುತ್ತದೆ ಮತ್ತು ಸಂಜೆಯ ವೇಳೆ ಕೆಟ್ಟವಾಸನೆಯನ್ನು ಹೊರಸೂಸುತ್ತವೆ. ಅವು ಎಲ್ಲಾ ಅಕ್ಕಿ ಪರಿಸರಗಲಲ್ಲಿ ಕಂಡುಬರುತ್ತವೆ. ಕಾಡುಪ್ರದೇಶಗಳು, ಅಕ್ಕಿ ಜಾಗದ ಬಳಿ ಅಧಿಕ ಕಳೆಯಿರುವ ಪ್ರದೇಶ, ಕಾಲುವೆಗಳ ಬಳಿಯಿರುವ ಕಾಡು ಹುಲ್ಲು, ಮತ್ತು ಅಸ್ಥಿರ ನಾಟಿ ಇವುಗಳ ಸಂಖ್ಯೆ ಹೆಚ್ಚಾಗಲು ಅನುಕೂಲಕರ. ಮಾನ್ಸೂನ್ ಮಳೆ ಆರಂಭವಾದಾಗ ಇದು ಹೆಚ್ಚು ಸಕ್ರಿಯವಾಗಿರುತ್ತದೆ. ಬೆಚ್ಚಗಿನ ಹವಾಮಾನ, ಮೋಡ ಕವಿದ ಆಕಾಶಗಳು, ಮತ್ತು ಆಗಾಗ್ಗೆ ಬರುವ ತುಂತುರು ಮಳೆ ಅದರ ಸಂಖ್ಯೆ ಹೆಚ್ಚಾಗಲು ಸಹಾಯ ಮಾಡುತ್ತವೆ. ಒಣ ಋತುವಿನಲ್ಲಿ ಅವುಗಳ ಚಟುವಟಿಕೆ ಕಡಿಮೆಯಿರುತ್ತದೆ. ರೋಗಲಕ್ಷಣಗಳು ಬ್ಯಾಕ್ಟೀರಿಯಾದ ಪ್ಯಾನಿಕಲ್ ರೋಗದ ಹಾನಿಯನ್ನು ಹೋಲುತ್ತವೆ.


ಮುಂಜಾಗ್ರತಾ ಕ್ರಮಗಳು

  • ಸಾಧ್ಯವಾದರೆ, ಕೀಟದ ಸಂಖ್ಯೆ ಹೆಚ್ಚುವುದನ್ನು ತಪ್ಪಿಸಲು ತಡವಾಗಿ-ಪಕ್ವವಾಗುವ ಪ್ರಭೇದಗಳನ್ನು ಬಳಸಿ.
  • ಸಂಯೋಜನೆಯ (ಸಿಂಕ್ರೊನಸ್) ನಾಟಿ ಸಹ ಅಕ್ಕಿ ಕೀಟಗಳ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಹೂಬಿಡುವುದಕ್ಕಿಂತ ಮುಂಚಿನ ಹಂತದಿಂದ ಪ್ರಾರಂಭಮಾಡಿ ಕೀಟದ ಚಿಹ್ನೆಗಳಿಗಾಗಿ ಹೊಲಗಳನ್ನು ಮೇಲ್ವಿಚಾರಣೆ ಮಾಡಿ.
  • ಕ್ರ್ಯಾಬ್ಗ್ರಾಸ್, ಗೂಸ್ಗ್ರಾಸ್ ಮತ್ತು ಬೀನ್ಸ್ ಮೊದಲಾದ ಇತರ ಹೋಸ್ಟ್ ಸಸ್ಯಗಳನ್ನು ತೆಗೆದುಹಾಕಿ.
  • ಹೊಲಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಕಳೆಗಳನ್ನು ತೆಗೆದುಹಾಕಿ.
  • ಅಕ್ಕಿ ಕೀಟಗಳನ್ನು ಆಕರ್ಷಿಸಲು ಹೊಲದ ಸುತ್ತಲೂ ಬಲೆ ಬೆಳೆಗಳನ್ನು ಬಳಸಿ.
  • ಸಮತೋಲಿತ ಫಲವತ್ತತೆ ಯೋಜನೆಯನ್ನು ಬಳಸಿ.
  • ನಿಯಮಿತವಾಗಿ ನೀರು ಹಾಕಿ ಆದರೆ ಅತಿಯಾದ ಆರ್ದ್ರತೆಯನ್ನು ತಪ್ಪಿಸಿ.
  • ಮುಂಜಾನೆ ಅಥವಾ ಮಧ್ಯಾಹ್ನ, ಅಕ್ಕಿ ತಿಗಣೆಗಳನ್ನು ಸೆರೆಹಿಡಿಯಲು ಬಲೆಗಳನ್ನು ಬಳಸಿ.
  • ತಿಗಣೆಗಳನ್ನು ಮುಳುಗಿಸಲು ಅಥವಾ ಅವುಗಳನ್ನು ಸಸ್ಯದ ಮೇಲ್ಭಾಗಕ್ಕೆ ಓಡಿಸಲು ಹೊಲದಲ್ಲಿ ನೀರು ಹರಿಸಿ, ಅಲ್ಲಿ ಅವು ಕೀಟನಾಶಕಗಳಿಗೆ ಸುಲಭವಾಗಿ ಗುರಿಯಾಗುತ್ತವೆ.
  • ವಿಶಾಲ-ರೋಹಿತವಲ್ಲದ ಕೀಟನಾಶಕಗಳನ್ನು (ಕಣಜಗಳು, ಮಿಡತೆ ಮತ್ತು ಜೇಡಗಳು) ಸಿಂಪಡಿಸುವ ಮೂಲಕ ಪ್ರಯೋಜನಕಾರಿ ಕೀಟಗಳನ್ನು ಸಂರಕ್ಷಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ