ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಕಪ್ಪು ಕತ್ತರಿ ಹುಳು

Agrotis ipsilon

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಸಣ್ಣ ಅನಿಯಮಿತ ರಂಧ್ರಗಳು.
  • ಕಾಂಡಗಳು ನೆಲ ಮಟ್ಟದಲ್ಲಿ ತುಂಡಾಗಬಹುದು.
  • ದುರ್ಬಲ ಸಸ್ಯ ಬೆಳವಣಿಗೆ ಅಥವಾ ಸಾವು.
  • ಬೆಳೆದ ಸಸ್ಯಗಳ ಬಾಡುವಿಕೆ ಮತ್ತು ಬಾಗುವಿಕೆ.

ಇವುಗಳಲ್ಲಿ ಸಹ ಕಾಣಬಹುದು

33 ಬೆಳೆಗಳು
ಸೇಬು
ಬಾಳೆಹಣ್ಣು
ಬಾರ್ಲಿ
ಹುರುಳಿ
ಇನ್ನಷ್ಟು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ರೋಗಲಕ್ಷಣಗಳು

ಕತ್ತರಿ ಹುಳುಗಳು ಬೆಳವಣಿಗೆಯ ಎಲ್ಲಾ ಹಂತಗಳಲ್ಲಿ ಹಲವಾರು ಬೆಳೆಗಳನ್ನು ಆಕ್ರಮಿಸುತ್ತವೆ. ಆದರೆ ಎಳೆಯ ಸಸಿಗಳಿಗೆ ಆದ್ಯತೆ ನೀಡುತ್ತವೆ. ಸಸಿಗಳು ಮೂಡುವ ಹಂತದಲ್ಲಿ ಹೆಚ್ಚಿನ ಸಂಖ್ಯೆಯ ಮರಿಹುಳುಗಳು ಇದ್ದರೆ ಮತ್ತು ಜಮೀನಿನ ಸುತ್ತಲು ಕಳೆಗಳು ಇದ್ದರೆ ಹಾನಿ ತೀವ್ರವಾಗಿರುತ್ತದೆ. ನೆಲಕ್ಕೆ ಸಮೀಪ, ಎಳೆಯ ಮರಿಹುಳುಗಳು ಇದ್ದರೆ ಕಳೆಗಳನ್ನು ಅಥವಾ ಮೆಕ್ಕೆ ಜೋಳದ ಸಸ್ಯಗಳನ್ನು ತಿನ್ನುತ್ತವೆ. ಮೃದು ಎಲೆಗಳ ಮೇಲೆ ಸಣ್ಣ ಅನಿಯಮಿತ ರಂಧ್ರಗಳನ್ನು ಉಂಟು ಮಾಡುತ್ತವೆ. ಬೆಳೆದ ಮರಿಹುಳುಗಳು ಹಗಲಿನ ಬೆಳಕನ್ನು ತಪ್ಪಿಸಲು ಮಣ್ಣಿನಲ್ಲಿ ಹುದುಗಿರುತ್ತವೆ ಮತ್ತು ರಾತ್ರಿಯಲ್ಲಿ ಆಹಾರಕ್ಕಾಗಿ ಸಸ್ಯಗಳ ತಳದಿಂದ ಹೊರಹೊಮ್ಮುತ್ತವೆ. ಎಳೆಯ ಸಸ್ಯಗಳನ್ನು ಇವು ನೆಲದ ಕೆಳಕ್ಕೆ ಎಳೆಯಬಹುದು. ಕಾಂಡಗಳನ್ನು ನೆಲ ಮಟ್ಟದಲ್ಲಿ ಕತ್ತರಿಸಬಹುದು (ಕಟ್). ಇದು ಬೆಳೆಯುತ್ತಿರುವ ಅಂಗಾಂಶಗಳಿಗೆ ಹಾನಿ ಉಂಟು ಮಾಡಬಹುದು. ಕುಂಠಿತ ಬೆಳವಣಿಗೆ ಅಥವಾ ಸಾವಿಗೂ ಕಾರಣವಾಗುತ್ತದೆ. ಕತ್ತರಿ ಹುಳುಗಳು ಕಾಂಡದೊಳಗೆ ಸುರಂಗ ಕೊರೆದು ಕೂಡ, ಬೆಳೆದ ಸಸ್ಯಗಳ ಬಾಡುವಿಕೆ ಮತ್ತು ಬಾಗುವಿಕೆಗೆ ಕಾರಣವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಕತ್ತರಿ ಹುಳುಗಳಿಗೆ ಪರಾವಲಂಬಿ ಕಣಜಗಳು, ನೊಣಗಳು ಮತ್ತು ಮಿಡತೆಗಳಂತಹ ಪರಭಕ್ಷಕಗಳನ್ನು ಒಳಗೊಂಡಂತೆ ಅನೇಕ ವೈರಿಗಳಿವೆ. ಬ್ಯಾಸಿಲಸ್ ತುರಿಂಜಿಯೆನ್ಸಿಸ್, ನ್ಯೂಕ್ಲಿಯೊಪೊಲಿಹೆಡ್ರೋಸಿಸ್ ವೈರಸ್ ಮತ್ತು ಬ್ಯೂವರ್ರಿಯಾ ಬಾಸ್ಸಿಯಾನಾಗಳನ್ನು ಆಧರಿಸಿದ ಜೈವಿಕ-ಕೀಟನಾಶಕಗಳು ಪರಿಣಾಮಕಾರಿ ಸಂಖ್ಯಾ ನಿಯಂತ್ರಣವನ್ನು ಒದಗಿಸುತ್ತದೆ. ಅನಗತ್ಯ ಚಿಕಿತ್ಸೆಯನ್ನು ತಪ್ಪಿಸುವ ಮೂಲಕ ನೈಸರ್ಗಿಕ ಪರಭಕ್ಷಕಗಳನ್ನು ಪ್ರೋತ್ಸಾಹಿಸಬೇಕು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ, ಜೈವಿಕ ಪರ್ಯಾಯಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಒಂದು ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕ್ಲೋರಿಪಿರಿಫೊಸ್, ಬೀಟಾ-ಸೈಪರ್ಮೆಥರಿನ್, ಡೆಲ್ಟಾಮೆಥ್ರಿನ್, ಲ್ಯಾಂಬ್ಡಾ-ಸೈಹಲೋಥರಿನ್ ಅನ್ನು ಹೊಂದಿರುವ ಉತ್ಪನ್ನಗಳನ್ನು ಕತ್ತರಿ ಹುಳುಗಳ ಸಂಖ್ಯೆಯನ್ನು ನಿಯಂತ್ರಿಸಲು ಬಳಸಬಹುದು. ನೆಡುವ ಮೊದಲು ಬಳಸುವ ಕೀಟನಾಶಕಗಳು ಸಹ ಸಹಾಯ ಮಾಡಬಹುದು. ಆದರೆ ದೊಡ್ಡ ಸಂಖ್ಯೆಗಳು ಕಾಣಿಸಿಕೊಳ್ಳುವ ನಿರೀಕ್ಷೆಯಿದ್ದರೆ ಮಾತ್ರ ಇದನ್ನು ಶಿಫಾರಸು ಮಾಡಲಾಗುತ್ತದೆ.

ಅದಕ್ಕೆ ಏನು ಕಾರಣ

ಕಪ್ಪು ಕತ್ತರಿ ಹುಳುಗಳು ಬೂದು-ಕಂದು ಬಣ್ಣದ ಮಚ್ಚೆಗಳಿರುವ ದೇಹವನ್ನು ಹೊಂದಿರುವ ದೃಢ ಪತಂಗಗಳಾಗಿವೆ. ಅವುಗಳು ಗಾಢ-ಕಂದು ಮತ್ತು ಕಪ್ಪು-ಕಂದು ಬಣ್ಣದ, ಹೊರ ಅಂಚಿನ ಕಡೆಗೆ ಗಾಢವಾದ ಗುರುತುಗಳಿರುವ ಮುಂದಿನ ರೆಕ್ಕಗಳು ಮತ್ತು ಬಿಳಿಯ ಹಿಂದಿನ ರೆಕ್ಕೆಗಳನ್ನು ಹೊಂದಿರುತ್ತವೆ. ಅವು ನಿಶಾಚರಿಯಾಗಿದ್ದು ಹಗಲಿನ ಸಮಯದಲ್ಲಿ ಮಣ್ಣಿನಲ್ಲಿ ಮರೆಯಾಗಿರುತ್ತವೆ. ಹೆಣ್ಣು ಹುಳುಗಳು ಗಂಡುಗಳಂತೆಯೇ ಇರುತ್ತವೆ. ಆದರೆ ಸ್ವಲ್ಪ ಗಾಢ ಬಣ್ಣದಾಗಿರುತ್ತದೆ. ಅವು ಮುತ್ತಿನ ಬಿಳಿ (ನಂತರ ತಿಳಿ ಕಂದು) ಮೊಟ್ಟೆಗಳನ್ನು ಒಂದೊಂದಾಗಿ ಅಥವಾ ಸಮೂಹಗಳಲ್ಲಿ ಸಸ್ಯಗಳ ಮೇಲೆ, ತೇವವಾದ ನೆಲದ ಮೇಲೆ ಅಥವಾ ಮಣ್ಣಿನ ಬಿರುಕುಗಳಲ್ಲಿ ಇಡುತ್ತವೆ. ಮೊಟ್ಟೆ ಒಡೆದು ಲಾರ್ವಾಗಳು ಹೊರಬರುವುದು ಹೆಚ್ಚಾಗಿ ಉಷ್ಣತೆಯ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಇದು 3 ರಿಂದ 24 ದಿನಗಳವರೆಗೆ (ಕ್ರಮವಾಗಿ 30 °C ಮತ್ತು 12 °C ನಲ್ಲಿ) ತೆಗೆದುಕೊಳ್ಳಬಹುದು. ಎಳೆಯ ಲಾರ್ವಾಗಳು ತಿಳಿ ಬೂದು, ನಯ ಮತ್ತು ಜಿಡ್ಡಿನಂತಹ ಗುಣವನ್ನು ಹೊಂದಿರುತ್ತವೆ. ಮತ್ತು 5 ರಿಂದ 10 ಮಿಮೀ ಉದ್ದವಿರುತ್ತವೆ. ಹಳೆಯ ಲಾರ್ವಾಗಳು ಕಪ್ಪು-ಕಂದು ಬಣ್ಣದ್ದಾಗಿರುತ್ತವೆ. 40 ಮಿಮೀ ವರೆಗೆ ಉದ್ದವಿರುತ್ತವೆ. ಎರಡು ಹಳದಿ ಚುಕ್ಕೆಗಳ ಪಟ್ಟಿಗಳು ಹಿಂಭಾಗದಲ್ಲಿ ಉದ್ದಕ್ಕೆ ಹರಡಿರುತ್ತದೆ. ಅವು ರಾತ್ರಿಯ ಸಮಯದಲ್ಲಿ ಮತ್ತು ದಿನದ ಸಮಯದಲ್ಲಿ ಆಹಾರ ತಿನ್ನುತ್ತವೆ ಮತ್ತು ಮಣ್ಣಿನ ಮೇಲ್ಮೈಯ ಕೆಳಗಿರುವ ಸಣ್ಣ, ಆಳವಿಲ್ಲದ ಸುರಂಗಗಳಲ್ಲಿ ಸಿ ಆಕಾರದಲ್ಲಿ ಸುತ್ತಿಕೊಂಡಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಅಕೀಟದ ಅಧಿಕ ಸಂಖ್ಯೆಯನ್ನು ತಪ್ಪಿಸಲು ಬೇಗ ನೆಡಿ.
  • ಹಿಂದೆ ಸೋಯಾಬೀನ್ ಬಿತ್ತಿದ ಜಮೀನಿನಲ್ಲಿ ಜೋಳದ ಸಸ್ಯಗಳನ್ನು ನೆಡುವುದನ್ನು ತಪ್ಪಿಸಿ.
  • ನೆಡುವ 3 ರಿಂದ 6 ವಾರಗಳ ಮೊದಲು ಮರಿಹುಳುಗಳನ್ನು ಹೂತುಹಾಕಲು ಅಥವಾ ಪರಭಕ್ಷಕಗಳಿಗೆ ಅವುಗಳನ್ನು ಒಡ್ಡಲು ಭೂಮಿಯನ್ನು ಉಳುಮೆ ಮಾಡಿ.
  • ಕಪ್ಪು ಕತ್ತರಿ ಹುಳುಗಳನ್ನು ಆಕರ್ಷಿಸಲು ಜಮೀನಿನ ಸುತ್ತಲು ಸೂರ್ಯಕಾಂತಿ ಸಸ್ಯಗಳನ್ನು ನೆಡಿ.
  • ನೆಡುವ ಮೊದಲು ಮತ್ತು ಸಸಿಗಳು ಹೊರಹೊಮ್ಮಿದ ನಂತರ ಜಮೀನಿನಲ್ಲಿ ಹಾಗು ಅದರ ಸುತ್ತಲೂ ಕಳೆಗಳನ್ನು ತೆರವುಗೊಳಿಸಿ.
  • ಪತಂಗಗಳನ್ನು ನಿಯಂತ್ರಿಸಲು ಅಥವಾ ಹಿಡಿಯಲು ಬೆಳಕು ಮತ್ತು ಫೆರೋಮೋನ್ ಬಲೆಗಳನ್ನು ಬಳಸಿ.
  • ಕತ್ತರಿ ಹುಳುಗಳನ್ನು ಗಾಯಗೊಳಿಸಲು ಮತ್ತು ಅವುಗಳನ್ನು ಪರಭಕ್ಷಕಗಳಿಗೆ ಒಡ್ಡಲು ಆಗಾಗ್ಗೆ ಸಾಗುವಳಿ ಮಾಡಿ.
  • ಸುಗ್ಗಿಯ ನಂತರ ಸಸ್ಯದ ಅವಶೇಷಗಳನ್ನು ಮಣ್ಣಿನ ಆಳದಲ್ಲಿ ಹೂತುಹಾಕಿ.
  • ನೆಡುವುದಕ್ಕೆ ಮೊದಲು ಕೆಲವು ವಾರಗಳ ಕಾಲ ಜಮೀನನ್ನು ಖಾಲಿ ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ