ಕಬ್ಬು

ಕರಿಹೇನು ರೋಗ(ಅಫಿಡ್)

Aphis

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಮತ್ತು ಚಿಗುರುಗಳು ಸುರುಳಿಯಾಗುವುದು.
  • ಎಲೆಗಳು ಮತ್ತು ಚಿಗುರುಗಳ ಕೆಳಗೆ ಸಣ್ಣ ಕೀಟಗಳು.
  • ಸ್ಥಗಿತಗೊಂಡ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು

57 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಇನ್ನಷ್ಟು

ಕಬ್ಬು

ರೋಗಲಕ್ಷಣಗಳು

ಇವು ಕಡಿಮೆ ಅಥವಾ ಸಾಧಾರಣ ಸಂಖ್ಯೆಯಲ್ಲಿದ್ದಾಗ ಸಾಮಾನ್ಯವಾಗಿ ಬೆಳೆಗೆ ಹಾನಿಕಾರಕವಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಮುತ್ತಿಕೊಂಡಾಗ ಎಲೆಗಳು ಮತ್ತು ಚಿಗುರುಗಳು ಸುರುಳಿಗಟ್ಟಿ, ಬಾಡಿಹೋಗಿ, ಹಳದಿ ಬಣ್ಣಕ್ಕೆ ತಿರುಗುತ್ತವೆ. ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ಒಟ್ಟಾರೆಯಾಗಿ ಗಿಡದ ಚೈತನ್ಯ ಕುಸಿದದ್ದು ತಿಳಿಯುತ್ತದೆ. ಈ ಕೀಟಗಳು ಗಿಡದ ಅಂಗಾಂಶವನ್ನು ತಿನ್ನುತ್ತಾ ಸ್ರವಿಸುವ ಸಿಹಿ ಅಂಟು ಅವಕಾಶಕ್ಕಾಗಿ ಹೊಂಚುವ ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುವುದರಿಂದ ಇನ್ನೂ ಹಲವು ಸೋಂಕುಗಳಿಗೆ ಮೂಲವಾಗುತ್ತದೆ. ಎಲೆಗಳ ಮೇಲೆ ಶಿಲೀಂಧ್ರದ ಬೆಳೆವಣಿಗೆ ಇದನ್ನು ಸೂಚಿಸುತ್ತದೆ. ಕೀಟ ಸ್ರವಿಸುವ ಸಿಹಿ ಅಂಟು ಇರುವೆಗಳನ್ನು ಆಕರ್ಷಿಸುತ್ತದೆ. ಈ ಕೀಟಗಳು ಸಣ್ಣ ಸಂಖ್ಯೆಯಲ್ಲಿದ್ದಾಗಲೂ ಕೂಡ ಗಿಡದಿಂದ ಗಿಡಕ್ಕೆ ವೈರಾಣುಗಳನ್ನು ನಿರಂತರವಾಗಿ ಹರಡುತ್ತವೆ.

Recommendations

ಜೈವಿಕ ನಿಯಂತ್ರಣ

ಕೀಟಗಳು ಕಡಿಮೆ ಸಂಖ್ಯೆಯಲ್ಲಿದ್ದಲ್ಲಿ, ಗಿಡದ ಎಣ್ಣೆಯಿಂದ ತಯಾರಿಸಿದ ದ್ರಾವಣ ಉದಾಹರಣೆಗೆ ಬೇವಿನ ಎಣ್ಣೆ (3 ml/ಪ್ರತಿ ಲೀಟರ್ ಗೆ), ಅಥವಾ ಸೌಮ್ಯ ಕೀಟನಾಶಕ ಸೋಪುಗಳ ದ್ರಾವಣವನ್ನು ಬಳಸಿ. ತೇವಾಂಶ ಹೆಚ್ಚಿದ್ದಾಗ ಈ ಕೀಟಗಳು ಶಿಲೀಂಧ್ರಗಳ ರೋಗಗಳಿಗೆ ಕೂಡಾ ಒಳಗಾಗುತ್ತವೆ. ತೇವ ಇದ್ದಾಗ ಗಿಡಹೇನುಗಳು ಶಿಲೀಂಧ್ರ ರೋಗಗಳಿಗೆ ಕೂಡಾ ಒಳಗಾಗುತ್ತವೆ. ಬಾಧಿತ ಸಸ್ಯಗಳ ಮೇಲೆ ಸರಳವಾಗಿ ನೀರನ್ನು ಸಿಂಪಡಿಸಿದರೂ ಸಹ ಅವುಗಳನ್ನು ತೆಗೆದುಹಾಕಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ವಿಧದೊಂದಿಗೆ ಜೈವಿಕ ವಿಧಾನಗಳನ್ನು ಸೇರಿಸಿದ ಸಮಗ್ರ ವಿಧಾನವನ್ನು ಪರಿಗಣಿಸಿ. ಗಿಡಹೇನುಗಳು ರಾಸಾಯನಿಕ ಕ್ರಿಮಿನಾಶಕಗಳ ಬಳಕೆಗೆ ಪ್ರತಿರೋಧವನ್ನು ಬೆಳೆಸಿಕೊಳ್ಳಬಹುದು ಎಂಬುದು ತಿಳಿದಿರಲಿ. 1:20 ಅನುಪಾತದಲ್ಲಿ ಕಾಂಡದ ಮೇಲೆ ಫ್ಲೋನಿಕಾಮಿಡ್ ಮತ್ತು ನೀರಿನ ಬಳಕೆಯನ್ನು ಬಿತ್ತನೆ ಮಾಡಿದ (ಡಿಎಎಸ್) 30, 45, 60 ದಿನಗಳ ನಂತರ ಯೋಜಿಸಬಹುದು. ಫೈಪ್ರೋನಿಲ್ 2 ಮಿಲೀ ಅಥವಾ ಥೈಯಾಮಿಥಾಕ್ಸಮ್ @ 0.2 ಗ್ರಾಂ ಅಥವಾ ಫ್ಲೋನಿಕಾಮಿಡ್ 0.3 ಗ್ರಾಂ ಅಥವಾ ಅಸೆಟಾಮಿಪ್ರಿಡ್ @ 0.2 ಗ್ರಾಂ (ಪ್ರತಿ ಒಂದು ಲೀಟರ್ ನೀರು)ಗಳನ್ನೂ ಸಹ ಬಳಸಬಹುದು. ಆದಾಗ್ಯೂ, ಈ ರಾಸಾಯನಿಕಗಳು ಪರಭಕ್ಷಕ, ಪ್ಯಾರಾಸಿಸಿಡ್ಗಳು, ಮತ್ತು ಪರಾಗಸ್ಪರ್ಶಕಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ.

ಅದಕ್ಕೆ ಏನು ಕಾರಣ

ಈ ಕೀಟಗಳು ಚಿಕ್ಕದಾದ, ಉದ್ದವಾದ ಕಾಲುಗಳು ಮತ್ತು ಆಂಟೆನಾಗಳೊಂದಿಗೆ ಮೃದುವಾದ ದೇಹಗಳನ್ನು ಹೊಂದಿರುತ್ತವೆ. ಅವುಗಳ ಗಾತ್ರ 0.5 ರಿಂದ 2 ಮಿ.ಮೀ. ವರೆಗೆ ಇರುತ್ತದೆ ಹಾಗೂ ಅವುಗಳ ಜಾತಿಯನ್ನು ಅವಲಂಬಿಸಿ ಹಳದಿ, ಕಂದು, ಕೆಂಪು ಅಥವಾ ಕಪ್ಪು ಬಣ್ಣದಲ್ಲಿರುತ್ತವೆ. ರೆಕ್ಕೆಯಿಲ್ಲದ ಜಾತಿಯ ಕೀಟ ಹೆಚ್ಚಾಗಿ ಕಂಡು ಬಂದರೂ, ರೆಕ್ಕೆಯಿರುವ, ಮೇಣದಂತೆ ಅಂಟಂಟಾಗಿರುವ, ಮೈಯೆಲ್ಲ ಕೂದಲಿರುವ ಉಣ್ಣೆಯ ಮುದ್ದೆಯಂತೆ ಕಾಣುವ - ಹೀಗೆ ಹಲವು ರೂಪಗಳಲ್ಲಿ ಇರುತ್ತವೆ. ಸಾಮಾನ್ಯವಾಗಿ ಪೋಷಕಾಂಶ ಚೆನ್ನಾಗಿ ಲಭಿಸಿದ ಎಳೆಯ ಎಲೆಗಳ ಕೆಳಭಾಗದಲ್ಲಿ ಅಥವಾ ಚಿಗುರುಗಳ ತುದಿಯಲ್ಲಿ ಗುಂಪಾಗಿ ನೆಲೆಸುತ್ತವೆ. ತಮ್ಮ ಉದ್ದವಾದ ಬಾಯಿಯ ಭಾಗದಿಂದ ಮೃದುವಾದ ಸಸ್ಯ ಅಂಗಾಂಶಗಳನ್ನು ಚುಚ್ಚಿ ದ್ರವವನ್ನು ಹೀರಿ ತೆಗೆಯುತ್ತವೆ. ಇವು ಕಡಿಮೆ ಅಥವಾ ಸಾಧಾರಣ ಸಂಖ್ಯೆಯಲ್ಲಿದ್ದಾಗ ಸಾಮಾನ್ಯವಾಗಿ ಬೆಳೆಗಳಿಗೆ ಹಾನಿಕಾರಕವಲ್ಲ. ವಸಂತ ಋತುವಿನ ಕೊನೆಯಲ್ಲಿ ಅಥವಾ ಬೇಸಿಗೆಯ ಆರಂಭದಲ್ಲಿ ಆರಂಭಿಕ ಆಕ್ರಮಣದ ನಂತರ, ನೈಸರ್ಗಿಕ ವೈರಿಗಳ ಕಾರಣದಿಂದ ಈ ಕೀಟದ ಸಂಖ್ಯೆಯು ಸಹಜವಾಗಿ ಕಡಿಮೆಯಾಗುತ್ತದೆ. ಈ ಕೀಟದ ಹಲವು ಜಾತಿಗಳು ಸಸ್ಯ ವೈರಾಣುಗಳನ್ನು ಹೊತ್ತು ಇತರ ರೋಗಗಳಿಗೆ ಕಾರಣವಾಗಬಹುದು


ಮುಂಜಾಗ್ರತಾ ಕ್ರಮಗಳು

  • ಹೊಲದ ಸುತ್ತಲೂ ಹೆಚ್ಚಿನ ಸಂಖ್ಯೆಯ ವೈವಿಧ್ಯಮಯ ಸಸ್ಯಗಳನ್ನು ಬೆಳೆಸಿ.
  • ಹಿಂದಿನ ಬೇಸಾಯಗಳಿಂದ ಸಸ್ಯಾವಶೇಷಗಳನ್ನು ತೆಗೆದುಹಾಕಿ.
  • ಕೀಟಗಳ ದಂಡು ಮುತ್ತುವಾಗ ಅವನ್ನು ಹಿಮ್ಮೆಟ್ಟಿಸಲು ಹೊಳೆಯುವ ನೆಲಹೊದಿಕೆಗಳನ್ನು ಉಪಯೋಗಿಸಿ.
  • ಹೇನುಗಳನ್ನು ಹೆಕ್ಕಿ ತೆಗೆಯಿರಿ ಅಥವಾ ಸೋಂಕಿತ ಭಾಗಗಳನ್ನು ಕಡಿದು ತೆಗೆಯಿರಿ.
  • ರೋಗ ಅಥವಾ ಕೀಟದ ಸಂಭಾವ್ಯತೆಯನ್ನು ನಿರ್ಣಯಿಸಲು ಮತ್ತು ಅವುಗಳ ತೀವ್ರತೆಯನ್ನು ನಿರ್ಧರಿಸಲು ಹೊಲಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಸೋಂಕಿತ ಸಸ್ಯದ ಭಾಗಗಳನ್ನು ತೆಗೆದುಹಾಕಿ.
  • ಗದ್ದೆಯಲ್ಲಿ ಮತ್ತು ಗದ್ದೆಯ ಸುತ್ತಮುತ್ತ ಕಳೆ ಬೆಳೆಯದಂತೆ ನೋಡಿಕೊಳ್ಳಿ.
  • ಅತಿಯಾಗಿ ನೀರು ಹಾಕದಿರಿ.
  • ಅತಿಯಾಗಿ ಗೊಬ್ಬರವನ್ನೂ ಹಾಕಬೇಡಿ.
  • ಇರುವೆಯು ಈ ಕೀಟವನ್ನು ರಕ್ಷಿಸುತ್ತದೆ.
  • ಹಾಗಾಗಿ ಅಂಟು ಪಟ್ಟಿಗಳನ್ನು ಗಿಡಕ್ಕೆ ಕಟ್ಟುವ ಮೂಲಕ ಇರುವೆಯ ಸಂಖ್ಯೆಯನ್ನು ನಿಯಂತ್ರಿಸಿ.
  • ಮೇಲಾವರಣದಲ್ಲಿ ಗಾಳಿಯಾಡಲು ಅನುಕೂಲವಾಗುವಂತೆ ನಿಮ್ಮ ಮರಗಳ ಶಾಖೆಗಳನ್ನು ಕತ್ತರಿಸಿ ಅಥವಾ ಕೆಳಗಿನ ಎಲೆಗಳು ಅಥವಾ ನಿಮ್ಮ ಸಸ್ಯಗಳನ್ನು ತೆಗೆದುಹಾಕಿ.
  • ಸಾಧ್ಯವಾದರೆ, ಸಸ್ಯಗಳನ್ನು ರಕ್ಷಿಸಲು ಬಲೆಗಳನ್ನು ಬಳಸಿ.
  • ಪ್ರಯೋಜನಕಾರಿ ಕೀಟಗಳ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಲು ಕೀಟನಾಶದ ಬಳಕೆಯನ್ನು ನಿಯಂತ್ರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ