ಇತರೆ

ಈರುಳ್ಳಿ ಹಳದಿ ಕುಬ್ಜ

OYDV

ವೈರಸ್

5 mins to read

ಸಂಕ್ಷಿಪ್ತವಾಗಿ

  • ಪ್ರಬುದ್ಧ ಎಲೆಗಳ ಮೇಲೆ ಹಳದಿ ಪಟ್ಟೆಗಳು - ಮೊಸಾಯಿಕ್ ಮಾದರಿಗಳು.
  • ಎಲೆಗಳ ಸುಕ್ಕುಗಟ್ಟುವಿಕೆ, ಮೆತ್ತಗಾಗುವಿಕೆ, ಸುರುಳಿಯಾಗುವಿಕೆ ಮತ್ತು ಬಾಡುವಿಕೆ.
  • ಕುಂಠಿತ ಬೆಳವಣಿಗೆ.
  • ಇಡೀ ಸಸ್ಯವೇ ಹಳದಿಯಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಬೆಳ್ಳುಳ್ಳಿ
ಈರುಳ್ಳಿ

ಇತರೆ

ರೋಗಲಕ್ಷಣಗಳು

ಸೋಂಕು ಯಾವುದೇ ಬೆಳವಣಿಗೆಯ ಹಂತದಲ್ಲಿ ಸಂಭವಿಸಬಹುದು ಮತ್ತು ಮೊದಲ ವರ್ಷದ ಸಸ್ಯಗಳ ಬೆಳೆದ ಎಲೆಗಳಲ್ಲಿ ಮೊದಲು ಗೋಚರಿಸುತ್ತವೆ. ಆರಂಭಿಕ ಲಕ್ಷಣಗಳು ಅನಿಯಮಿತ, ಹಳದಿ ಪಟ್ಟೆಗಳಂತೆ ಗೋಚರಿಸುತ್ತವೆ. ಅವು ಕ್ರಮೇಣ ಮೊಸಾಯಿಕ್ ಮಾದರಿಯನ್ನು ರೂಪಿಸುತ್ತವೆ. ರೋಗಲಕ್ಷಣಗಳು ಮುಂದುವರೆದಂತೆ, ಈ ಎಲೆಗಳು ಸುಕ್ಕುಗಟ್ಟುತ್ತವೆ, ಮೆತ್ತಗಾಗುತ್ತವೆ, ಕೆಳಕ್ಕೆ ಸುರುಳಿಯಾಗಿರುತ್ತವೆ ಮತ್ತು ಅಂತಿಮವಾಗಿ ಬಾಡುತ್ತವೆ. ಸೋಂಕು ತೀವ್ರವಾಗಿದ್ದಾಗ, ಅದು ಎಲೆಗಳು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗಲು ಕಾರಣವಾಗಬಹುದು ಮತ್ತು ಸಸ್ಯಗಳು ಕುಬ್ಜವಾಗಬಹುದು. ಗೆಡ್ಡೆಗಳು ಬೆಳೆಯದಿರಬಹುದು ಮತ್ತು ಬೆಳೆದರೂ ಗಾತ್ರದಲ್ಲಿ ಸಣ್ಣದಾಗಿರುತ್ತವೆ ಮತ್ತು ಅಕಾಲಿಕವಾಗಿ - ಉದಾಹರಣೆಗೆ ಶೇಖರಣಾ ಸಮಯದಲ್ಲಿ - ಮೊಳಕೆಯೊಡೆಯಬಹುದು. ಬೀಜೋತ್ಪಾದನೆಗೆ ಬಳಸುವ ಈರುಳ್ಳಿ ಸಸ್ಯಗಳು ಹೂವಿನ ಕಾಂಡಗಳಲ್ಲಿ ವಿರೂಪತೆ ತೋರಬಹುದು. ಜೊತೆಗೆ, ಹೂವು ಮತ್ತು ಬೀಜಗಳಲ್ಲಿ ಕಡಿತ ಮತ್ತು ಬೀಜದ ಗುಣಮಟ್ಟ ಕಡಿಮೆಯಾಗಬಹುದು. ಮೊಳಕೆಯೊಡೆಯುವಿಕೆಯ ಪ್ರಮಾಣದ ಮೇಲೆ ಇದು ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.

Recommendations

ಜೈವಿಕ ನಿಯಂತ್ರಣ

ಈ ಕಾಯಿಲೆಗೆ ಚಿಕಿತ್ಸೆ ನೀಡಲು ಯಾವುದೇ ಜೈವಿಕ ಚಿಕಿತ್ಸೆ ಈಗ ಸಧ್ಯಕ್ಕೆ ಲಭ್ಯವಿಲ್ಲ. ಗಿಡಹೇನುಗಳ ವಿರುದ್ಧದ ಚಿಕಿತ್ಸೆಗಳಲ್ಲಿ 2% ಬೇವಿನ ಎಣ್ಣೆ ಮತ್ತು 5% ಬೇವಿನ ಬೀಜದ ಕರ್ನಲ್ ಸಾರ (ಎನ್‌ಎಸ್‌ಕೆಇ)ದ ದ್ರಾವಣ ಸೇರಿದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ವೈರಸ್ ಸೋಂಕಿನ ಸಂದರ್ಭದಲ್ಲಿ ರಾಸಾಯನಿಕ ಚಿಕಿತ್ಸೆ ಸಾಧ್ಯವಿಲ್ಲ. ಗಿಡಹೇನುಗಳ ವಿರುದ್ಧದ ಚಿಕಿತ್ಸೆಗಳಲ್ಲಿ ಎಮಾಮೆಕ್ಟಿನ್ ಬೆಂಜೊಯೇಟ್, ಇಂಡೊಕ್ಸಾಕಾರ್ಬ್ ಅಥವಾ ಎನ್ಎಸ್ ಕೆ ಇ ಸೇರಿವೆ.

ಅದಕ್ಕೆ ಏನು ಕಾರಣ

ಈರುಳ್ಳಿ ಹಳದಿ ಕುಬ್ಜ ವೈರಸ್ – ಆನಿಯನ್ ಯೆಲ್ಲೋ ಡ್ವಾರ್ಫ್ ವೈರಸ್ (ಒವೈಡಿವಿ) ಎಂಬ ವೈರಸ್‌ನಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಹೊಲದಲ್ಲಿನ ಸಸ್ಯ ಅವಶೇಷಗಳಲ್ಲಿ ದೀರ್ಘಕಾಲ ಬದುಕಬಲ್ಲದು. ಸಾಮಾನ್ಯವಾಗಿ ವೈರಸ್ ಸೋಂಕಿತ ಸಸ್ಯ ಭಾಗಗಳಾದ ಗೆಡ್ಡೆಗಳು, ಸೆಟ್‌ಗಳು ಮತ್ತು ಹೊಲದಲ್ಲಿ ತಾವಾಗೇ ಬೆಳೆದ ಸಸ್ಯಗಳಿಂದ ಇದು ಹರಡುತ್ತದೆ. ಇದು ಸೀಮಿತ ಆಶ್ರಯದಾತ ಸಸ್ಯಗಳನ್ನು ಹೊಂದಿದೆ. ಅಂದರೆ ಅಲಿಯಮ್ ಕುಟುಂಬದ ಸಸ್ಯ ಪ್ರಭೇದಗಳಿಗೆ ಸೀಮಿತವಾಗಿದೆ (ಈರುಳ್ಳಿ, ಬೆಳ್ಳುಳ್ಳಿ, ಶಲೋಟ್ಸ್ ಮತ್ತು ಕೆಲವು ಅಲಂಕಾರಿಕ ಅಲಿಯಮ್ ಗಳು). ಈ ರೋಗ ಹಲವಾರು ಗಿಡಹೇನು ಪ್ರಭೇದಗಳ ಮೂಲಕ ನಿರಂತರವಲ್ಲದ ರೀತಿಯಲ್ಲಿ ಹರಡಬಹುದು (ಉದಾಹರಣೆಗೆ ಮೈಜಸ್ ಪರ್ಸಿಕೆ). ಅವು ವೈರಸ್ ಅನ್ನು ತಮ್ಮ ಬಾಯಿಗಳ ಭಾಗಗಳಲ್ಲಿ ಒಯ್ಯುತ್ತವೆ ಮತ್ತು ಅದನ್ನು ಸಸ್ಯದ ರಸ ಹೀರುವಾಗ ಆರೋಗ್ಯಕರ ಸಸ್ಯಕ್ಕೆ ಸೇರಿಸುತ್ತವೆ. ಆಗಾಗ್ಗೆ, ಅದೇ ಸಸ್ಯದಲ್ಲಿನ ಇತರ ವೈರಸ್‌ಗಳ ಸಂಯೋಜನೆಯಲ್ಲಿ ಸೋಂಕು ಸಂಭವಿಸುತ್ತದೆ. ಸೋಂಕನ್ನು ಅವಲಂಬಿಸಿ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಇಳುವರಿ ನಷ್ಟವಾಗಬಹುದು. ಉದಾಹರಣೆಗೆ, ಸಸ್ಯಗಳು ಲೀಕ್ ಹಳದಿ ಪಟ್ಟೆ ವೈರಸ್‌ನಿಂದ ಸೋಂಕಿಗೆ ಒಳಗಾದಾಗ ಇಳುವರಿ ನಷ್ಟ ಹೆಚ್ಚಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ನೆಡುವ ವಸ್ತು ಅಥವಾ ಬೀಜಗಳನ್ನು ಪ್ರಮಾಣೀಕೃತ ಮೂಲದಿಂದಲೇ ಬಳಸಿ.
  • ಪ್ರದೇಶದಲ್ಲಿ ಲಭ್ಯವಿರುವ ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ಬಳಸಿ.
  • ನೆಡುವ ವಸ್ತುವು ಆರೋಗ್ಯಕರವಾಗಿದೆಯೆ ಅಥವಾ ಇಲ್ಲವೇ ಎಂದು ಖಚಿತವಾಗಿಲ್ಲದಿದ್ದರೆ, ಗೆಡ್ಡೆ ಅಥವಾ ಸೆಟ್ ಗಳ ಬದಲಿಗೆ ನಿಜವಾದ ಬೀಜಗಳನ್ನು ಬಳಸಿ.
  • ರೋಗದ ಯಾವುದೇ ಚಿಹ್ನೆಗಾಗಿ ನಿಮ್ಮ ಸಸ್ಯಗಳು ಅಥವಾ ಹೊಲಗಳನ್ನು ನಿಯಮಿತವಾಗಿ ಪರಿಶೀಲಿಸಿ.
  • ರೋಗ ಹರಡುವುದನ್ನು ತಪ್ಪಿಸಲು ಆಫಿಡ್ ಸಂಖ್ಯೆಯನ್ನು ನಿಯಂತ್ರಿಸಿ.
  • ಪರ್ಯಾಯ ಆಶ್ರಯದಾತ ಸಸ್ಯಗಳಾಗಿ ಕಾರ್ಯನಿರ್ವಹಿಸುವ ಕಳೆಗಳನ್ನು ತೆಗೆದುಹಾಕಿ.
  • ಸೋಂಕಿತ ಸಸ್ಯಗಳು ಮತ್ತು ಸಸ್ಯದ ಭಾಗಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ ಉದಾಹರಣೆಗೆ ಸುಡುವ ಮೂಲಕ.
  • ಆಶ್ರಯದಾತವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿ ಯೋಜಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ