ಆರಂಭಿಕ ಅಂಗಮಾರಿ

 • ರೋಗಲಕ್ಷಣಗಳು

 • ಪ್ರಚೋದಕ

 • ಜೈವಿಕ ನಿಯಂತ್ರಣ

 • ರಾಸಾಯನಿಕ ನಿಯಂತ್ರಣ

 • ಮುಂಜಾಗ್ರತಾ ಕ್ರಮಗಳು

ಆರಂಭಿಕ ಅಂಗಮಾರಿ

Alternaria solani

ಶಿಲೀಂಧ್ರ


ಸಂಕ್ಷಿಪ್ತವಾಗಿ

 • ಏಕಕೇಂದ್ರ ಬೆಳವಣಿಗೆಯೊಂದಿಗೆ ಎಲೆಗಳ ಮೇಲೆ ಗಾಢ ಕಲೆಗಳು ಮತ್ತು ಹಳದಿ ಹೊರ ವೃತ್ತಗಳು.
 • ಕಾಂಡಗಳು ಮತ್ತು ಹಣ್ಣುಗಳ ಮೇಲೆ ಮತ್ತು ಕಡಿಮೆ ಮಟ್ಟಿಗೆ ಕಾಣಿಸಿಕೊಳ್ಳುತ್ತವೆ.
 • ಹಣ್ಣುಗಳು ಕೊಳೆಯಲು ಆರಂಭಿಸುತ್ತವೆ ಮತ್ತು ಅಂತಿಮವಾಗಿ ಉದುರಲು ಆರಂಭಿಸಬಹುದು.

ಆಶ್ರಯದಾತ ಸಸ್ಯಗಳು:

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಬಿಳಿಬದನೆ

ಟೊಮೆಟೊ

ಆಲೂಗಡ್ಡೆ

ರೋಗಲಕ್ಷಣಗಳು

ಆರಂಭಿಕ ಅಂಗಮಾರಿಯ ರೋಗಲಕ್ಷಣಗಳು ಹಳೆಯ ಎಲೆಗಳು, ಕಾಂಡ ಮತ್ತು ಹಣ್ಣುಗಳ ಮೇಲೆ ಸಂಭವಿಸುತ್ತವೆ. ಕಂದು ಬಣ್ಣದಿಂದ ಬೂದು ಬಣ್ಣದ ಕಲೆಗಳು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ ಮತ್ತು ಕ್ರಮೇಣ ಒಂದು ಸ್ಪಷ್ಟ ಕೇಂದ್ರದ ಸುತ್ತ ಏಕಕೇಂದ್ರಕ ರೀತಿಯಲ್ಲಿ ಬೆಳೆಯುತ್ತವೆ. ಇದು ವಿಶಿಷ್ಟವಾದ "ಬುಲ್ಸ್ ಐ" ರಚನೆಗೆ ಕಾರಣವಾಗುತ್ತದೆ. ಈ ಕಲೆಗಳು ಪ್ರಕಾಶಮಾನವಾದ ಹಳದಿ ಹೊರ ವೃತ್ತದಿಂದ ಸುತ್ತುವರೆದಿರುತ್ತವೆ. ರೋಗ ಮುಂದುವರೆದಂತೆ, ಪೂರ್ತಿ ಎಲೆಗಳು ಕ್ಲೋರೋಟಿಕ್ ಆಗುತ್ತವೆ ಮತ್ತು ಉದುರುತ್ತವೆ. ಇದು ಗಣನೀಯ ಪ್ರಮಾಣದ ಎಲೆ ಉದರುವಿಕೆಗೆ ಕಾರಣವಾಗುತ್ತದೆ. ಎಲೆಗಳು ಸತ್ತು ಬಿದ್ದಾಗ, ಹಣ್ಣುಗಳು ಸೂರ್ಯನ ಸಡುಗಾಯಕ್ಕೆ ಹೆಚ್ಚು ಒಳಗಾಗುತ್ತವೆ. ಸ್ಪಷ್ಟವಾದ ಕೇಂದ್ರವಿರುವ ಅದೇ ರೀತಿಯ ಕಲೆಗಳು ಕಾಂಡಗಳು ಮತ್ತು ಹಣ್ಣುಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಹಣ್ಣುಗಳು ಕೊಳೆಯುತ್ತವೆ ಮತ್ತು ನಂತರ ಉದುರುತ್ತವೆ.

ಪ್ರಚೋದಕ

ಅಲ್ಟರ್ನಾರಿಯಾ ಸೋಲಾನಿ ಎಂಬ ಮಣ್ಣಿನಲ್ಲಿ ಅಥವಾ ಪರ್ಯಾಯ ಆಶ್ರಯದಾತ ಸಸ್ಯಗಳಲ್ಲಿ, ಸೋಂಕಿತ ಬೆಳೆ ಅವಶೇಷಗಳ ಮೇಲೆ ಚಳಿಗಾಲವನ್ನು ಕಳೆಯುವ ಶಿಲೀಂಧ್ರದಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಖರೀದಿಸಿದ ಬೀಜಗಳು ಅಥವಾ ಕಸಿಗಳು ಸಹ ಈಗಾಗಲೇ ಸೋಂಕಿತವಾಗಿರಬಹುದು. ಸೋಂಕಿತ ಮಣ್ಣಿನೊಂದಿಗೆ ಸಂಪರ್ಕದಲ್ಲಿರುವ ಕೆಳಗಿನ ಎಲೆಗಳು ಹೆಚ್ಚಾಗಿ ಸೋಂಕಿಗೆ ಒಳಗಾಗುತ್ತವೆ. ಬೆಚ್ಚಗಿನ ತಾಪಮಾನ (24-29 °C) ಮತ್ತು ಅಧಿಕ ಆರ್ದ್ರತೆ (90%) ರೋಗದ ಬೆಳವಣಿಗೆಯನ್ನು ಬೆಂಬಲಿಸುತ್ತದೆ. ಸುದೀರ್ಘ ಆರ್ದ್ರ ಅವಧಿ (ಪರ್ಯಾಯವಾದ ತೇವ / ಒಣ ಹವಾಮಾನ) ಬೀಜಕಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಸಿಡಿಯುವ ಮಳೆ ಅಥವಾ ಸಿಂಪಡಣೆ ನೀರಾವರಿ ಅಥವಾ ಗಾಳಿ ಮೂಲಕ ಇವು ಹರಡುತ್ತವೆ. ಹಸಿರು ಅಥವಾ ಇನ್ನೂ ಕಚ್ಚಾ ಸ್ಥಿತಿಯಲ್ಲಿರುವಾಗಲೇ ಕಟಾವು ಮಾಡಿದ ಗೆಡ್ಡೆಗಳು, ವಿಶೇಷವಾಗಿ ಸೋಂಕಿಗೆ ಒಳಗಾಗುತ್ತವೆ. ಭಾರೀ ಮಳೆಯಾಗುವಿಕೆಯ ನಂತರ ಇದು ಹೆಚ್ಚಾಗಿ ತಗಲುತ್ತದೆ ಮತ್ತು ವಿಶೇಷವಾಗಿ ಉಷ್ಣವಲಯದ ಮತ್ತು ಉಪ ಉಷ್ಣವಲಯದ ಪ್ರದೇಶಗಳಲ್ಲಿ ಇದು ವಿನಾಶಕಾರಿಯಾಗಿದೆ.

ಜೈವಿಕ ನಿಯಂತ್ರಣ

ಸಣ್ಣ ರೈತರು ಸೋಂಕಿತ ಸಸ್ಯಗಳಿಗೆ ಚಿಕಿತ್ಸೆ ಮಾಡಲು ಪಾಚಿ ಸುಣ್ಣಕಲ್ಲು, ಕೊಬ್ಬು ಮುಕ್ತ ಹಾಲು ಮತ್ತು ನೀರಿನ ಮಿಶ್ರಣ (1 : 1) ಅಥವಾ ರಾಕ್ ಫ್ಲೋರ್ ಬಳಸಬಹುದು. 4 ಲೀಟರ್ ನೀರಿನಲ್ಲಿ 3 ಟೀ ಚಮಚದ ಬೈಕಾರ್ಬನೇಟ್ ನ ಸೋಡಾ + ಮೀನಿನ ಎಮಲ್ಷನ್ ದ್ರಾವಣ ಸಹ ಸಹಾಯ ಮಾಡುತ್ತದೆ. ಸಾವಯವ ಎಂದು ನೋಂದಾಯಿಸಲ್ಪಟ್ಟಿರುವ ಬ್ಯಾಸಿಲಸ್ ಸಬ್ಟಿಲಿಸ್ ಅಥವಾ ತಾಮ್ರ ಆಧಾರಿತ ಶಿಲೀಂಧ್ರನಾಶಕಗಳನ್ನು ಆಧರಿಸಿದ ಉತ್ಪನ್ನಗಳು ಸಹ ಕೆಲಸ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳೊಂದಿಗೆ, ಜೈವಿಕ ಚಿಕಿತ್ಸೆಗಳು ಇರುವ ಸಮಗ್ರ ವಿಧಾನವನ್ನು ಯಾವಾಗಲೂ ಮೊದಲು ಪರಿಗಣಿಸಿ. ಆರಂಭಿಕ ಅಂಗಮಾರಿಯನ್ನು ನಿಯಂತ್ರಿಸಲು ಮಾರುಕಟ್ಟೆಯಲ್ಲಿ ಹಲವಾರು ಶಿಲೀಂಧ್ರನಾಶಕಗಳು ಇವೆ. ಅಝೊಕ್ಸಿಸ್ಟ್ರೋಬಿನ್, ಪೈರಾಕ್ಲೋಸ್ಟ್ರೋಬಿನ್, ಡೈಫಿನೊಕೊನಜೋಲ್, ಬೊಸ್ಕ್ಯಾಲಿಡ್, ಕ್ಲೋರೊಥಲೋನಿಲ್, ಫೆನಾಮಿಡೋನ್, ಮನೆಬ್, ಮನ್ಕೊಜೆಬ್, ಪಿರಾಕ್ಲೋಸ್ಟ್ರೋಬಿನ್, ಟ್ರೈಫ್ಲೊಕ್ಸಿಸ್ಟ್ರೋಬಿನ್ ಮತ್ತು ಜಿರಾಮ್ ಆಧರಿಸಿದ ಅಥವಾ ಸಂಯೋಜನೆಯ ಶಿಲೀಂಧ್ರನಾಶಕಗಳನ್ನು ಬಳಸಬಹುದು. ವಿಭಿನ್ನ ರಾಸಾಯನಿಕ ಸಂಯುಕ್ತಗಳ ಆವರ್ತನೆಯನ್ನು ಸೂಚಿಸಲಾಗುತ್ತದೆ. ಹವಾಮಾನ ಪರಿಸ್ಥಿತಿಗಳನ್ನು ಗಮನಕ್ಕೆ ತೆಗೆದುಕೊಂಡು ಸೂಕ್ತ ಸಮಯಗಳಲ್ಲಿ ಚಿಕಿತ್ಸೆಯನ್ನು ಮಾಡಿ. ಈ ಉತ್ಪನ್ನಗಳನ್ನು ಬಳಸಿದ ನಂತರ ನೀವು ಸುರಕ್ಷಿತವಾಗಿ ಯಾವಾಗ ಕೊಯ್ಲು ಮಾಡಬಹುದು ಎಂಬಂತಹ ಕೊಯ್ಲು ಪೂರ್ವ ಅಂತರವನ್ನು ಎಚ್ಚರಿಕೆಯಿಂದ ಪರಿಶೀಲಿಸಿ.

ಮುಂಜಾಗ್ರತಾ ಕ್ರಮಗಳು

 • ಪ್ರಮಾಣೀಕೃತ, ರೋಗಕಾರಕ-ಮುಕ್ತ ಬೀಜಗಳನ್ನು ಅಥವಾ ಕಸಿಗಳನ್ನು ಬಳಸಿ.
 • ರೋಗ ನಿರೋಧಕವಾಗಿರುವ ಪ್ರಭೇದಗಳನ್ನು ಆಯ್ಕೆ ಮಾಡಿ.
 • ಒಳಚರಂಡಿ ಸುಧಾರಿಸಲು ಎತ್ತರದ ಸಸಿಮಡಿಗಳ ಮೇಲೆ ನೆಡಿ ಅಥವಾ ನಾಟಿ ಮಾಡಿ.
 • ಮುಖ್ಯ ಗಾಳಿಯ ದಿಕ್ಕಿಗೆ ಸರಿಯಾಗಿ ಸಾಲುಗಳನ್ನು ರಚಿಸಿ ಮತ್ತು ನೆರಳಿನ ಪ್ರದೇಶಗಳನ್ನು ತಪ್ಪಿಸಿ.
 • ಮಳೆ ಅಥವಾ ನೀರಾವರಿ ನಂತರ ಮೇಲಾವರಣ ತ್ವರಿತವಾಗಿ ಒಣಗುವಂತೆ ಸಸ್ಯಗಳನ್ನು ನೆಡಿ.
 • ಸಸ್ಯಗಳು ಮಣ್ಣನ್ನು ಮುಟ್ಟದಂತೆ, ಮಣ್ಣಿನ ಮೇಲೆ ಮಲ್ಚ್ ಹಾಕಿ.
 • ವಿಶೇಷವಾಗಿ ಆರ್ದ್ರ ವಾತಾವರಣದಲ್ಲಿ, ರೋಗದ ಚಿಹ್ನೆಗಳಿಗಾಗಿ ಹೊಲದ ಮೇಲ್ವಿಚಾರಣೆ ಮಾಡಿ.
 • ಮಣ್ಣಿಗೆ ಹತ್ತಿರವಿರುವ ಕೆಳಗಿನ ಎಲೆಗಳನ್ನು ತೆಗೆದುಹಾಕಿ.
 • ರೋಗಲಕ್ಷಣಗಳನ್ನು ಪ್ರದರ್ಶಿಸುವ ಎಲೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.
 • ಸಮರ್ಪಕ ಪೋಷಕಾಂಶದೊಂದಿಗೆ ಸಸ್ಯಗಳನ್ನು ಸದೃಢ ಮತ್ತು ಬಲ ಮತ್ತು ಶಕ್ತಿಯುತವಾಗಿ ಇರಿಸಿ.
 • ಸಸ್ಯಗಳನ್ನು ನೆಟ್ಟಗೆ ಇರಿಸಲು ಕೋಲುಗಳನ್ನು ಬಳಸಿ.
 • ಎಲೆಯ ತೇವವನ್ನು ಕಡಿಮೆಗೊಳಿಸಲು ಹನಿ ನೀರಾವರಿ ವ್ಯವಸ್ಥೆಯನ್ನು ಬಳಸಿ.
 • ಸಸ್ಯಗಳಿಗೆ ಬೆಳಿಗ್ಗೆ ನೀರು ಹಾಕುವ ಮೂಲಕ, ನಂತರ ಬಿಸಿಲಿಗೆ ಸಸ್ಯಗಳು ಒಣಗುವಂತೆ ನೋಡಿಕೊಳ್ಳಿ.
 • ಹೊಲದಲ್ಲಿ ಮತ್ತು ಸುತ್ತಲಿನಲ್ಲಿ ರೋಗಕ್ಕೆ ಒಳಗಾಗುವ ಕಳೆಗಳನ್ನು ನಿಯಂತ್ರಿಸಿ.
 • ಸಸ್ಯಗಳು ತೇವವಾಗಿದ್ದಾಗ ಆ ಜಾಗಗಳಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ.
 • ಸುಗ್ಗಿಯ ನಂತರ, ಸಸ್ಯಗಳ ಅವಶೇಷಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು (ಕಾಂಪೋಸ್ಟ್ ಮಾಡಬೇಡಿ) ಸುಟ್ಟು ಬಿಡಿ.
 • ಪರ್ಯಾಯವಾಗಿ, ಮಣ್ಣಿನಲ್ಲಿ ಆಳವಾಗಿ ಅವಶೇಷಗಳನ್ನು (45 ಸೆಂ.ಮೀ.
 • ಗಿಂತ ಹೆಚ್ಚು) ಹೂತು ಬಿಡಿ.
 • ರೋಗಕ್ಕೆ ಸೂಕ್ಷ್ಮವಲ್ಲದ ಬೆಳೆಗಳೊಂದಿಗೆ 2- ಅಥವಾ 3 ವರ್ಷದ ಬೆಳೆ ಸರದಿ ಯೋಜಿಸಿ.
 • ತಂಪಾದ ಉಷ್ಣಾಂಶದಲ್ಲಿ ಮತ್ತು ಗಾಳಿಯಾಡುವ ಸ್ಥಳಗಳಲ್ಲಿ ಗೆಡ್ಡೆಗಳನ್ನು ಶೇಖರಿಸಿ.