ಸೋಯಾಬೀನ್

ನಾರ್ದರ್ನ್ ಸ್ಟೆಮ್ ಕ್ಯಾಂಕರ್

Diaporthe caulivora

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಕೆಳಗಿನ ಶಾಖೆಗಳು ಮತ್ತು ಎಲೆಯ ತೊಟ್ಟುಗಳ ತಳದಲ್ಲಿ ಕೆಂಪು-ಕಂದು ಬಣ್ಣದ ಗಾಯಗಳು.
  • ಉದ್ದವಾದ ಕಪ್ಪು-ಕಂದು ಕ್ಯಾಂಕರ್ ಗಳು ಕಾಂಡವನ್ನು ಸುತ್ತುವರೆಯುತ್ತವೆ.
  • ಸಸ್ಯದಲ್ಲಿನ ನೀರು ಮತ್ತು ಪೋಷಕಾಂಶಗಳ ಹರಿವಿಗೆ ಹಾನಿಯಾದಾಗ ಎಲೆಗಳಲ್ಲಿ ಅಂತರನಾಳೀಯ ಕ್ಲೋರೋಸಿಸ್ ಕಂಡುಬರುತ್ತದೆ.
  • ಗಾಯಗಳಿಗೆ ತುತ್ತಾಗುವ ಎಲೆಗಳು ಸಾಯುತ್ತವೆ ಆದರೆ ಕಾಂಡದಲ್ಲೆ ಉಳಿಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಆರಂಭಿಕ ಲಕ್ಷಣಗಳೇನೆಂದರೆ ಸಸ್ಯದ ಕೆಳಗಿನ ಭಾಗದಲ್ಲಿರುವ ಶಾಖೆಗಳು ಮತ್ತು ಎಲೆ ತೊಟ್ಟುಗಳ ತಳದಲ್ಲಿ ಸಣ್ಣ ಕೆಂಪು-ಕಂದು ಗಾಯಗಳು ಕಾಣಿಸಿಕೊಳ್ಳುತ್ತವೆ. ಗಾಯಗಳು ನಂತರ ಕಾಂಡದ ಮೇಲೆ ಮತ್ತು ಕೆಳಗೆ ಹರಡುತ್ತವೆ ಮತ್ತು ಗಾಢ-ಕಂದು ಬಣ್ಣಕ್ಕೆ ತಿರುಗುತ್ತವೆ. ಕಾಂಡದ ಉದ್ದಕ್ಕೂ ಕಂಡುಬರುವ ಹಸಿರು ಮತ್ತು ಕಂದು ಬಣ್ಣದ ಕಲೆಗಳ ಪರ್ಯಾಯ ಮಾದರಿಯೇ ಈ ರೋಗದ ಲಕ್ಷಣ. ಕ್ಯಾಂಕರ್ ಕಾಂಡದ ಆಂತರಿಕ ಅಂಗಾಂಶಗಳನ್ನು ಹಾನಿಗೊಳಿಸುತ್ತದೆ ಮತ್ತು ನೀರು ಮತ್ತು ಪೋಷಕಾಂಶಗಳ ಸಾಗಣೆಗೆ ಅಡ್ಡಿಯುಂಟುಮಾಡುತ್ತದೆ. ಎಲೆಗಳ ಮೇಲೆ ಅಂತರನಾಳೀಯ ಕ್ಲೋರೋಸಿಸ್ ಕಾಣಿಸಿಕೊಳ್ಳುತ್ತದೆ. ಎಲೆಗಳು ನಂತರ ಸಾಯುತ್ತವೆ ಆದರೆ ಕಾಂಡದಲ್ಲೆ ಇರುತ್ತವೆ. ಗಾಯಗಳ ಮೇಲಿರುವ ಸಸ್ಯದ ಭಾಗಗಳು ಸಾಯುತ್ತವೆ ಮತ್ತು ಬೀಜಕೋಶ ಬೆಳವಣಿಗೆಯಲ್ಲಿ ತೀವ್ರವಾದ ಕಡಿತವಾಗಬಹುದು.

Recommendations

ಜೈವಿಕ ನಿಯಂತ್ರಣ

ಲಭ್ಯವಿದ್ದರೆ, ಯಾವಾಗಲೂ ಜೈವಿಕ ಶಿಲೀಂಧ್ರನಾಶಕಗಳ ಜೊತೆ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಶಿಲೀಂಧ್ರನಾಶಕ ಸಂಸ್ಕರಣೆಗಳು ಸೋಂಕನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡಬಹುದು ಆದರೆ ಅವುಗಳನ್ನು ಹಾಕುವ ಸಮಯ, ಪರಿಸರ ಪರಿಸ್ಥಿತಿಗಳು ಮತ್ತು ಬಳಸಿದ ಉತ್ಪನ್ನಗಳ ಆಧಾರದ ಮೇಲೆ ಪರಿಣಾಮಗಳು ವ್ಯಾಪಕವಾಗಿ ಭಿನ್ನವಾಗಿರುತ್ತದೆ. ಅಗತ್ಯವಿದ್ದರೆ, ಸಸ್ಯಕ ಮತ್ತು ಸಂತಾನೋತ್ಪತ್ತಿ ಬೆಳವಣಿಗೆಯ ಹಂತಗಳಲ್ಲಿ ಮೆಫೆನೊಕ್ಸಮ್, ಕ್ಲೋರೊಥಲೋನಿಲ್, ಥಿಯೋಪನೆಟ್-ಮೀಥೈಲ್ ಅಥವಾ ಅಜೋಕ್ಸಿಸ್ಟ್ರೋಬಿನ್ ಹೊಂದಿರುವ ಉತ್ಪನ್ನಗಳನ್ನು ಹಾಕಿ.

ಅದಕ್ಕೆ ಏನು ಕಾರಣ

ಮಣ್ಣಿನಿಂದ ಹರಡುವ ಶಿಲೀಂಧ್ರವಾದ ಡಿಯಾಪೋರ್ಟೆ ಫೇಸಿಯೋಲೋರಂನಿಂದ ಸೋಯಾಬೀನ್ ಸ್ಟೆಮ್ ಕ್ಯಾಂಕರ್ ರೋಗ ಉಂಟಾಗುತ್ತದೆ. ಶಿಲೀಂಧ್ರದ ಎರಡು ಸ್ವಲ್ಪ ವಿಭಿನ್ನವಾದ ವೈವಿಧ್ಯಗಳಿವೆ ಮತ್ತು ಅವನ್ನು ದಕ್ಷಿಣ ಮತ್ತು ಉತ್ತರ ಸ್ಟೆಮ್ ಕ್ಯಾಂಕರ್ ಗಳೆಂದು ವಿಭಜಿಸಲಾಗಿದೆ. ಇದು ಸೋಂಕಿತ ಬೆಳೆ ಉಳಿಕೆಗಳಲ್ಲಿ ಅಥವಾ ಬೀಜಗಳ ಮೇಲೆ ಚಳಿಗಾಲವನ್ನು ಕಳೆಯುತ್ತವೆ. ಇದು ಸಸ್ಯಗಳನ್ನು ಸಸ್ಯಕ ಹಂತದಲ್ಲಿ ಸೋಂಕು ಮಾಡುತ್ತದೆ ಆದರೆ ಸಂತಾನೋತ್ಪತ್ತಿಯ ಹಂತದಲ್ಲಿ ಮಾತ್ರ ಇದರ ರೋಗಲಕ್ಷಣಗಳು ಗೋಚರಿಸುತ್ತವೆ. ನಿರಂತರವಾದ ಆರ್ದ್ರ ಮತ್ತು ಮಳೆಯ ಹವಾಮಾನದ ಪರಿಸ್ಥಿತಿಗಳು, ವಿಶೇಷವಾಗಿ ಋತುವಿನ ಆರಂಭದಲ್ಲಿ, ಸೋಂಕಿಗೆ ಸೂಕ್ತ ವಾತಾವರಣಗಳು. ಸರಿಯಾಗಿರದ ಬೇಸಾಯದ ಅಭ್ಯಾಸಗಳು ಸಹ ಇದಕ್ಕೆ ಅನುಕೂಲಕರವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ನೆಡಿ.
  • ಪ್ರಮಾಣೀಕೃತ ರೋಗಕಾರಕ-ಮುಕ್ತ ಬೀಜದ ವಸ್ತುಗಳನ್ನು ಬಳಸಿ.
  • ಋತುವಿನ ನಂತರ ನಾಟಿ ಮಾಡಿ.
  • ಸಮತೋಲಿತ ಪೋಷಣೆಯೊಂದಿಗೆ ಉತ್ತಮ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಿ.
  • ಕನಿಷ್ಠ ಎರಡು ವರ್ಷಗಳ ಕಾಲ ಕಾರ್ನ್, ಗೋಧಿ, ಸೋರ್ಗಮ್ನಂತಹ ಹೋಸ್ಟ್ ಅಲ್ಲದ ಬೆಳೆಗಳೊಂದಿಗೆ ಸರದಿ ಬೆಳೆ ಮಾಡಿ.
  • ನಿಮ್ಮ ಬೇಸಾಯದ ಬಳಿ ಕಳೆಗಳ ವಿಪರೀತ ಬೆಳವಣಿಗೆಯನ್ನು ತಡೆಗಟ್ಟಿ.
  • ಆರ್ದ್ರ ಸಮಯವನ್ನು ತಪ್ಪಿಸಲು ಸಾಧ್ಯವಾದಷ್ಟು ಬೇಗ ಕೊಯ್ಲು ಮಾಡಿ.
  • ಸೌರ ವಿಕಿರಣ ಮತ್ತು ಗಾಳಿಗೆ ಮಣ್ಣನ್ನು ಒಡ್ಡಲು ಹೊಲವನ್ನು ಉಳುಮೆ ಮಾಡಿ.
  • ಕೊಯ್ಲಿನ ನಂತರ ಸೋಂಕಿತ ಬೆಳೆ ಉಳಿಕೆಗಳನ್ನು ಹೂತುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ