ಪಪ್ಪಾಯಿ

ಪಪ್ಪಾಯಿಯ ಕಪ್ಪು ಚುಕ್ಕೆ ರೋಗ

Asperisporium caricae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಕೆಳಗಿನ ಎಲೆಗಳ ಮೇಲೆ ಕಂದು ಬಣ್ಣದ ಕಲೆಗಳು.
  • ಕಲೆಗಳು ದೊಡ್ಡದಾಗುತ್ತವೆ ನಂತರ, ಕಪ್ಪು ಬಣ್ಣದ, ಊದಿದ, ಪುಡಿಪುಡಿಯಾದ ಬೊಬ್ಬೆಗಳಾಗುತ್ತವೆ.
  • ಹಣ್ಣುಗಳ ಮೇಲೆ ಆಳವಿಲ್ಲದ, ಕೇಂದ್ರದಲ್ಲಿ ಕಪ್ಪು ಬಣ್ಣವಿರುವ ತಿಳಿ ಕಂದು ಬಣ್ಣದ ಗಾಯಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಪಪ್ಪಾಯಿ

ರೋಗಲಕ್ಷಣಗಳು

ಆರಂಭದಲ್ಲಿ, ಚದುರಿದ ಮಸುಕಾದ ಕಲೆಗಳು ಕೆಳಗಿನ ಎಲೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಇವುಗಳಿಗೆ ಹಳದಿ ಹೊರವೃತ್ತ ಇರುತ್ತದೆ. ಎಲೆಗಳ ಕೆಳಭಾಗದಲ್ಲಿ, ಈ ಕಲೆಗಳು ನಂತರ ದೊಡ್ಡದಾಗಿ, ಕಪ್ಪಾಗಿ, ಉಬ್ಬಿದ, 4 ಎಂಎಂ ವ್ಯಾಸವಿರುವ ಪುಡಿ ಪುಡಿಯಾದ ಗಂಟುಗಳಂತಾಗಿ ಬೆಳೆಯುತ್ತವೆ. ರೋಗದ ನಂತರದ ಹಂತಗಳಲ್ಲಿ, ಗಾಯಗಳು ಒಣಗಿ ಎಲೆಗಳ ಬಹುತೇಕ ಭಾಗಗಳಿಗೆ ಹರಡುತ್ತದೆ. ತೀವ್ರ ಸೋಂಕಿನ ಸಂದರ್ಭಗಳಲ್ಲಿ ಅಥವಾ ಇತರ ಶಿಲೀಂಧ್ರಗಳ ರೋಗಕಾರಕಗಳೊಂದಿಗೆ ಸಹ-ಸೋಂಕು ತಗುಲಿದಾಗ, ರೋಗಪೀಡಿತ ಎಲೆಗಳು ಉದುರುತ್ತವೆ. ಇದರಿಂದಾಗಿ ಸೋಂಕಿತ ಮರಗಳ ಚಟುವಟಿಕೆ ಕಡಿಮೆಯಾಗುತ್ತದೆ. ಆಳವಿಲ್ಲದ, ತಿಳಿ ಕಂದು ಬಣ್ಣದ, ಮಧ್ಯಭಾಗದಲ್ಲಿ ಕಪ್ಪು ಬಣ್ಣದ ಶಿಲೀಂಧ್ರ ಕಲೆ ಇರುವ ಅನಿಯಮಿತ ಗಾಯಗಳು ರೋಗಪೀಡಿತ ಹಣ್ಣುಗಳಲ್ಲಿ ಗೋಚರಿಸುತ್ತವೆ. ಆದರೆ, ಎಲೆಗಳ ಮೇಲಿಗಿಂತ ಕಡಿಮೆ ಪ್ರಮಾಣದಲ್ಲಿರುತ್ತವೆ. ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಹಣ್ಣುಗಳು ಸೋಂಕಿತವಾದರೆ ಅಕಾಲಿಕವಾಗಿ ಉದುರಬಹುದು. ಗಾಯಗಳ ಹೊರತಾಗಿಯೂ, ಹಣ್ಣಿನ ತಿರುಳು ಕೊಳೆಯುವ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ.

Recommendations

ಜೈವಿಕ ನಿಯಂತ್ರಣ

ಆಸ್ಪೆರಿಸ್ಪೋರಿಯಮ್ ಕ್ಯಾರಿಕಿಯ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆ ಇದುವರೆಗೆ ಕಂಡುಬಂದಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಯಾವ ವಿಷಯವಾದರೂ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿರುತ್ತೇವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಡಿಥಿಯೋಕಾರ್ಬಮೇಟ್ಸ್ ನಂತಹ ಎಲೆಯ ಮೇಲೆ ಸಿಂಪಡಿಸುವ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವುದು ಭಾರೀ ಸೋಂಕುಗಳ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿರುತ್ತದೆ.

ಅದಕ್ಕೆ ಏನು ಕಾರಣ

ಶಿಲೀಂಧ್ರವಾದ್ಅ ಆಸ್ಪೆರಿಸ್ಪೋರಿಯಮ್ ಕ್ಯಾರಿಕೆಯಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮುಖ್ಯವಾಗಿ ಮಧ್ಯ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾದ ಪಶ್ಚಿಮ ಭಾಗಗಳು ಹಾಗೂ ಪೂರ್ವ-ಆಫ್ರಿಕಾದಲ್ಲಿ ಕಂಡುಬರುತ್ತದೆ. ಎಲೆಗಳು ಮತ್ತು ಹಣ್ಣುಗಳೆರಡರ ಮೇಲೂ ಪರಿಣಾಮ ಬೀರಬಹುದು. ಬೆಳೆಯ ವಿಧ ಮತ್ತು ಪರಿಸರ ಸ್ಥಿತಿಗಳನ್ನು ಅವಲಂಬಿಸಿ ರೋಗಲಕ್ಷಣಗಳು ಕೊಂಚ ಭಿನ್ನವಾಗಿರುತ್ತವೆ. ಈ ರೋಗವು ಕೆಳ ಎಲೆಗಳಲ್ಲಿ ಮತ್ತು ಆರ್ದ್ರ ವಾತಾವರಣದ ಸಮಯದಲ್ಲಿ ಹೆಚ್ಚು ತೀವ್ರವಾಗಿರುತ್ತದೆ. ಪಪ್ಪಾಯಿ ಮಾತ್ರ ಈ ರೋಗಕಾರಕದ ಆಶ್ರಯದಾತ ಸಸ್ಯವಾಗಿದ್ದು ಸಾಮಾನ್ಯವಾಗಿ ಇದರ ಪರಿಣಾಮ ಸಣ್ಣದಾಗಿರುತ್ತದೆ. ಏಕೆಂದರೆ ಹಣ್ಣುಗಳ ಮೇಲಿನ ರೋಗಲಕ್ಷಣಗಳು ಸಾಮಾನ್ಯವಾಗಿ ಬಾಹ್ಯ ಸ್ವರೂಪದ್ದಾಗಿರುತ್ತವೆ. ಆದಾಗ್ಯೂ, ರೋಗವು ಹಣ್ಣಿನ ಗುಣಮಟ್ಟವನ್ನು ಕಡಿಮೆ ಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ರೋಗಪೀಡಿತ ಸಸ್ಯಗಳ ಭಾಗಗಳನ್ನು ಅಥವಾ ಬಿದ್ದ ಹಣ್ಣುಗಳನ್ನು ತೆಗೆದುಹಾಕಿ ನಾಶ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ