ಇತರೆ

ಡೆಡ್ ಆರ್ಮ್

Eutypa lata

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಮರದ ಕಾಂಡದೊಳಗಿನ ಕೊಳೆತವನ್ನು ಈ ರೋಗಲಕ್ಷಣ ಒಳಗೊಂಡಿರುತ್ತದೆ.
  • ಮರದ ಕಾಂಡವನ್ನು ಅಡ್ಡಲಾಗಿ ಕತ್ತರಿಸಿದಾಗ ಒಳಗಿನ ಅಂಗಾಂಶಗಳ ಬೆಣೆಯಾಕಾರದ ಗಾಯವನ್ನು ಕಾಣಬಹುದು.
  • ಎಲೆಗಳ ಮೇಲೆ ಉಂಟಾಗಬಹುದಾದಂತಹ ರೋಗಲಕ್ಷಣಗಳೆಂದರೆ ಕ್ಲೋರೋಟಿಕ್(ಹಸಿರು ಬಣ್ಣ ಕಳೆದುಕೊಂಡ) ಪ್ಯಾಚುಗಳು, ಕೊಳೆತ ಅಂಚುಗಳು ಮತ್ತು ಎಲೆಯ ಮಧ್ಯಭಾಗ ಬಟ್ಟಲಾಕಾರ ಹೊಂದುವುದು.

ಇವುಗಳಲ್ಲಿ ಸಹ ಕಾಣಬಹುದು

10 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಚೆರ್ರಿ
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಮರದ ಕಾಂಡದೊಳಗಿನ ಕೊಳೆತವನ್ನು ಈ ರೋಗಲಕ್ಷಣ ಒಳಗೊಂಡಿರುತ್ತದೆ. ವರ್ಷಗಳು ಕಳೆದಂತೆ ರೋಗವು ಮುಂದುವರೆದಂತೆ, ಒಂದು ಅಥವಾ ಹೆಚ್ಚಿನ ಆರ್ಮ್ಗಳು (ಮರದ ಶಾಖೆಗಳು) ಸಾಯಬಹುದು, ಇದರಿಂದಲೇ ಇದಕ್ಕೆ "ಡೆಡ್ ಆರ್ಮ್' ಎಂಬ ಹೆಸರಿದೆ. ಮರದ ಕಾಂಡವನ್ನು ಅಡ್ಡಲಾಗಿ ಕತ್ತರಿಸಿದಾಗ ಒಳಗಿನ ಅಂಗಾಂಶಗಳ ಬೆಣೆಯಾಕಾರದ ಗಾಯವನ್ನು ಕಾಣಬಹುದು. ಕೆಲವೊಮ್ಮೆ ಶಿಲೀಂಧ್ರದ ಬೆಳವಣಿಗೆಯು ಡೆಡ್ ವುಡ್ ನ ತೊಗಟೆಯ ಮೇಲೆ ಕಲ್ಲಿದ್ದಲು ಬಣ್ಣದ ಪ್ಯಾಚುಗಳನ್ನು ರೂಪಿಸಿರುವುದನ್ನು ಗಮನಿಸಬಹುದು. ಈ ರೋಗವು ಎಲೆಗಳ ಮೇಲೂ ಸಹ ರೋಗಲಕ್ಷಣಗಳನ್ನು ಉಂಟುಮಾಡಬಹುದು. ಎಲೆಯ ಮೇಲಿನ ಚುಕ್ಕೆಗಳು ಮತ್ತು ಅದರ ನಂತರದ ಕ್ಲೋರೋಟಿಕ್ (ಹಸಿರು ಬಣ್ಣ ಕಳೆದುಕೊಂಡ)ಪ್ಯಾಚುಗಳು ಮತ್ತು ಕೊಳೆತ ಅಂಚುಗಳನ್ನು ರೋಗಲಕ್ಷಣಗಳು ಒಳಗೊಂಡಿವೆ. ಇದಾದ ಬಳಿಕ ಎಲೆಯ ಮಧ್ಯಭಾಗವು ಬಟ್ಟಲಾಕಾರವಾಗುತ್ತದೆ ಮತ್ತು ವಿರೂಪಗೊಳ್ಳುತ್ತದೆ. ಒಳಗೆಣ್ಣುಗಳು ಗಿಡ್ಡಾಗುತ್ತವೆ ಮತ್ತು ಚಿಗುರುಗಳು ಕುಂಠಿತವಾದ ಬೆಳವಣಿಗೆ ಹೊಂದಿರುತ್ತವೆ ಮತ್ತು ಕ್ಲೋರೋಟಿಕ್ ಆಗಿರುತ್ತವೆ. ಗೊಂಚಲುಗಳು ಮೂಡುವುದೇ ಇಲ್ಲ ಅಥವಾ ಬೆಳೆಯುವುದೇ ಇಲ್ಲ ಮತ್ತು ಅವು ಬಿದ್ದು ಹೋಗುತ್ತವೆ.

Recommendations

ಜೈವಿಕ ನಿಯಂತ್ರಣ

ಬ್ಯಾಸಿಲಸ್ ಸಬ್ಟಿಲಿಸ್ ಆಧಾರಿತ ವಾಣಿಜ್ಯ ತಯಾರಿಕೆಗಳನ್ನೂ ಸಹ ಸಮರುವಿಕೆಯಿಂದ ಉಂಟಾದ ಗಾಯಗಳಿಗೆ ರಕ್ಷಣೆಗಾಗಿ ಹಾಕಬಹುದು. ಸಮರುವಿಕೆಯ ನಂತರ ತಾಮ್ರವನ್ನು ಆಧರಿಸಿದ ಉತ್ಪನ್ನಗಳನ್ನು ಮೇಲ್ಮೈ ಮೇಲೆ ಹಾಕುವುದರಿಂದ ತೆರೆದ ಗಾಯಗಳ ಮೇಲಿನ ಶಿಲೀಂಧ್ರದ ಸೋಂಕನ್ನು ಸಹ ತಡೆಯಬಹುದಾಗಿದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಲಭ್ಯವಿದ್ದಲ್ಲಿ, ಜೈವಿಕ ನಿಯಂತ್ರಣದ ಜೊತೆ, ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮೈಕ್ಲೊಬ್ಯುಟಾನಿಲ್, ಥಿಯೋಫನೇಟ್-ಮಿಥೈಲ್ ಮತ್ತು ಟೆಟ್ರಾಕೊನಝೋಲ್ ಗಳು ಯುಟೈಪ ಡೈ ಬ್ಯಾಕ್ ಅನ್ನು ಒಳಗೊಂಡಂತೆ, ಮರದ ಕಾಂಡದ ಗಾಯದ ರೋಗಗಳನ್ನು ನಿಯಂತ್ರಿಸಲು ಬಳಸಲ್ಪಡುತ್ತವೆ. ಅವನ್ನು ನಿರೋಧಕವಾಗಿ, ಸಮರುವಿಕೆಯಾದ ಬಳಿಕವೇ ತಕ್ಷಣ ಹಾಕಬಹುದು. ಅಕ್ರಿಲಿಕ್ ಪೇಂಟ್ನಲ್ಲಿ, 5 % ಬೋರಿಕ್ ಆಮ್ಲದ ಜೊತೆ ವೂನ್ಡ್ ಸೀಲೆಂಟ್ ಅನ್ನು ಅಥವಾ ಸಸ್ಯಜನ್ಯ ತೈಲಗಳನ್ನೂ ಸಹ ಬಳಸಬಹುದು.

ಅದಕ್ಕೆ ಏನು ಕಾರಣ

ಈ ರೋಗವು ಯುಟೈಪ ಲಟ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ ಮತ್ತು ಸಾಮಾನ್ಯವಾಗಿ ಹಳೆಯ ದ್ರಾಕ್ಷಿತೋಟಗಳಲ್ಲಿ ಅಥವಾ ಹಣ್ಣಿನ ತೋಟಗಳಲ್ಲಿ ಇದನ್ನು ಕಾಣಬಹುದು. ಸೋಂಕಿನ ಪ್ರಾಥಮಿಕ ಮೂಲವೆಂದರೆ ಸೋಂಕಿತ ಮರದ ಕಾಂಡಗಳಲ್ಲಿ ಚಳಿಗಾಲವನ್ನು ಕಳೆಯುವ ಶಿಲೀಂಧ್ರದ ಬೀಜಕಣಗಳಾಗಿವೆ. ವಸಂತದಲ್ಲಿ, ಮಳೆ ಎರಚಲಿನ ಸಹಾಯದಿಂದ ಈ ಬೀಜಕಣಗಳು ಬಿಡುಗಡೆಯಾಗುತ್ತವೆ ಮತ್ತು ಅವು ಗಾಳಿಯ ಮೂಲಕ ಇನ್ನು ಮುಚ್ಚಿರದ ಮೊಗ್ಗುಗಳಿಗೆ ಹರಡಲ್ಪಡುತ್ತವೆ. ಅಲ್ಲಿ, ಅವು ಗಾಯಗಳ ಮೂಲಕ ಅಥವಾ ಬಹುಶಃ ಬಾಹ್ಯ ಪದರದ ರಂಧ್ರಗಳ ಮೂಲಕವೂ ನೇರವಾಗಿ ಸಸ್ಯದೊಳಗೆ ಪ್ರವೇಶಿಸುತ್ತವೆ. ಮರದೊಳಗೆ ಪ್ರವೇಶಿಸಿದ ಬಳಿಕ, ಇದು ನಿಧಾನವಾಗಿ ಹರಡುತ್ತದೆ ಮತ್ತು ವರ್ಷಗಳು ಕಳೆದಂತೆ, ನಾಳೀಯ ಅಂಗಾಂಶಗಳ ಮೇಲೆ ಪರಿಣಾಮ ಬೀರಬಹುದು. ಮುಂದುವರೆದ ಹಂತಗಳಲ್ಲಿ, ಇದು ಚಿಗುರುಗಳಲ್ಲಿ ಅಥವಾ ರೆಂಬೆಗಳಲ್ಲಿ ಸಂಪೂರ್ಣವಾಗಿ ಅವುಗಳ ನಡುವಿನ ಸುತ್ತಲೂ ತೊಗಟೆಯನ್ನು ಕೊರೆಯುತ್ತದೆ (ಗರ್ಡ್ಲಿಂಗ್), ಇದರಿಂದ ಬಳ್ಳಿಯ ಅಥವಾ ಮರದ ಮೇಲಿನ ಭಾಗಗಳಿಗೆ ನೀರು ಮತ್ತು ಪೋಷಕಾಂಶಗಳ ಸಾಗಾಣಿಕೆಗೆ ಅಡ್ಡಿಯಾಗುತ್ತದೆ. ಬೀಜಕಣಗಳ ಮೊಳಕೆಯೊಡೆಯುವಿಕೆಗೆ 20 ° ಸಿ ಇಂದ 25 ° ಸಿ ವರೆಗಿನ ತಾಪಮಾನವು ಅನುಕೂಲಕರವಾಗಿರುತ್ತದೆ. ಯುಟೈಪ ಲಟ, ಸೇಬು, ಪೇರು ಮತ್ತು ಚೆರ್ರೀ ಹಾಗು ವಾಲ್ನಟ್ ಮರಗಳನ್ನೂ ಸಹ ಸೋಂಕಿಗೆ ಒಳಪಡಿಸಬಹುದು. ಮೌಂಟನ್ ಆಶ್, ಕಾರ್ಕ್ ಓಕ್ ಅಥವಾ ಬ್ಲಾಕ್ಥಾರ್ನ್ ನಂತಹ ಅನೇಕ ಹೋಸ್ಟ್ ಗಳನ್ನೂ ಇದು ಹೊಂದಿದೆ ಮತ್ತು ಇನಾಕ್ಯುಲಮ್ಮಿಗೆ ಇದು ಸಂಗ್ರಹ ಸ್ಥಳದಂತೆ ವರ್ತಿಸಬಹುದು.


ಮುಂಜಾಗ್ರತಾ ಕ್ರಮಗಳು

  • ಹೊಲವನ್ನು ರೋಗದ ಚಿಹ್ನೆಗಳಿಗಾಗಿ ಮತ್ತು ಸೋಂಕಿತ ಬಳ್ಳಿಗಳನ್ನು ತೆಗೆದು ಹಾಕಲು ಪರೀಕ್ಷಿಸುತ್ತಿರಿ.
  • ಹೊಲದಲ್ಲಿನ ಹಳೆಯ ಬಳ್ಳಿಗಳ ಉಳಿಕೆಗಳನ್ನು ತೆಗೆದು ಹಾಕಲು ಮತ್ತು ನಾಶ ಮಾಡುವುದನ್ನು ಖಾತರಿಪಡಿಸಿಕೊಳ್ಳಿ.
  • ತೇವಾಂಶಭರಿತ ಹವಾಮಾನದಲ್ಲಿ ಮತ್ತು ಅದರ ನಂತರ ಕತ್ತರಿಸುವುದನ್ನು ತಪ್ಪಿಸಿ.
  • ಗಾಯದ ಕೆಳಗಿನ ಮರದ ಕಾಂಡದ ಸೋಂಕಿತ ರೆಂಬೆಯನ್ನು ಕತ್ತರಿಸಿ ಮತ್ತು ಹೊಸ, ಆರೋಗ್ಯಕರ ಚಿಗುರಿನ ಬೆಳವಣಿಗೆಗೆ ಅನುವು ಮಾಡಿಕೊಡಿ.
  • ನಿಧಾನಿಸಿದ ಸಮರುವಿಕೆ ಅಥವಾ ದುಪ್ಪಟ್ಟು ಸಮರುವಿಕೆಗಳೂ ಸಹ ಸೋಂಕನ್ನು ಕಡಿಮೆ ಮಾಡುವ ಪರಿಣಾಮಕಾರಿ ವಿಧಾನಗಳಾಗಿವೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ