ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ನಿಂಬೆಯ ಆಂಥ್ರಾಕ್ನೋಸ್

Glomerella acutata

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಕಂದು ಬಣ್ಣದ ಕಲೆಗಳು.
  • ಕಲೆಗಳು ಒಣಗಿ ಉದುರಿಹೋಗುತ್ತವೆ.
  • ಎಲೆಗಳು ಮತ್ತು ಎಳೆ ಚಿಗುರುಗಳಿಗೆ ರೋಗ ತಗುಲಿ ಅವು ಬೀಳುತ್ತವೆ.
  • ಹೊಸ ಹಣ್ಣುಗಳು ಅಕಾಲಿಕವಾಗಿ ಉದುರುತ್ತವೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ನಿಂಬೆಯ ಆಂಥ್ರಾಕ್ನೋಸ್ ಹೂವುಗಳು, ಹೊಸ ಎಲೆಗಳು ಮತ್ತು ಹಣ್ಣುಗಳಿಗೆ ಹಾನಿ ಮಾಡುತ್ತದೆ. ಮತ್ತು ಗಾಯಗಳು ಸಣ್ಣ ಕಲೆಗಳಿಂದ ಆರಂಭವಾಗಿ ದೊಡ್ಡ ಪ್ರದೇಶಗಳನ್ನು ಆವರಿಸುವಷ್ಟು ವಿಸ್ತರಿಸಬಹುದು. ಎಲೆಗಳು ಮತ್ತು ಹಣ್ಣುಗಳು ಸಾಮಾನ್ಯವಾಗಿ ಉದುರುತ್ತವೆ ಮತ್ತು ಕೊಂಬೆಗಳು ಸಾಯುತ್ತವೆ ಇದನ್ನು "ವಿದರ್ ಟಿಪ್ " ಲಕ್ಷಣ ಎಂದು ಕರೆಯಲಾಗುತ್ತದೆ. ಎಲೆಗಳ ಮೇಲಿನ ರೋಗಲಕ್ಷಣಗಳು ಕೊಳೆತಂತಹ ಕಲೆಗಳಾಗಿ ಕಂಡುಬಂದು ಅದು ಶಾಟ್ ಹೋಲ್ ಪರಿಣಾಮಕ್ಕೆ ಕಾರಣವಾಗಬಹುದು. ತೀವ್ರ ಸೋಂಕಿಗೆ ಒಳಗಾದ ಎಳೆ ಚಿಗುರುಗಳು ಮತ್ತು ಎಲೆಗಳು ಸಂಪೂರ್ಣವಾಗಿ ಹಾನಿಗೊಳಗಾಗುತ್ತವೆ ಮತ್ತು ಉದುರುತ್ತವೆ. ಇದಲ್ಲದೆ, ಚಿಗುರು ಸಾಯಬಹುದು ಮತ್ತು ಎಲೆ ವಿರೂಪಗೊಳ್ಳಬಹುದು. ಹೊಸ ಹಣ್ಣುಗಳು ಸೋಂಕಿಗೆ ಒಳಗಾದರೆ ಅಕಾಲಿಕವಾಗಿ ಉದುರುತ್ತವೆ. ಸೋಂಕು ಮುಂದುವರಿದರೆ ಹಣ್ಣುಗಳ ಮೇಲೆ ಆಳವಾದ ದೊಡ್ಡ ಗಾಯಗಳಾಗುತ್ತವೆ ಮತ್ತು ಹಣ್ಣುಗಳು ವಿರೂಪಗೊಳ್ಳುತ್ತವೆ.

Recommendations

ಜೈವಿಕ ನಿಯಂತ್ರಣ

ಕ್ಷಮಿಸಿ, ಗ್ಲೋಮೆರೆಲಾ ಅಕ್ಯುಟಾಟಾ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆಯ ಬಗ್ಗೆ ನಮಗೆ ಗೊತ್ತಿಲ್ಲ. ಈ ರೋಗದ ವಿರುದ್ಧ ಹೋರಾಡಲು ಸಹಾಯವಾಗುವ ಬೇರೆ ಯಾವುದಾದರೂ ಮಾರ್ಗ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ. ನಿಮ್ಮಿಂದ ಉತ್ತರ ನಿರೀಕ್ಷಿಸುತ್ತಿದ್ದೇವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳನ್ನು ಒಳಗೊಂಡ ಸಮಗ್ರವಾದ ಮಾರ್ಗ ಇದ್ದರೆ ಅದನ್ನು ಮೊದಲು ಪರಿಗಣಿಸಿ. ಬೆನೊಮಿಲ್, ಕ್ಯಾಟಾಫೊಲ್, ಕ್ಯಾಪ್ಟನ್, ಮನೆಬ್ ಮತ್ತು ಫೆರ್ಬಾಮ್ಗಳನ್ನು ಆಧರಿಸಿದ ಶಿಲೀಂಧ್ರನಾಶಕಗಳು ಗ್ಲೋಮೆರೆಲಾ ಅಕ್ಯುಟಾಟಾ ವಿರುದ್ಧ ಪರಿಣಾಮಕಾರಿ ಚಿಕಿತ್ಸೆಯನ್ನು ಒದಗಿಸುತ್ತವೆ. ಹೂ ಬಿಡುವ ಹಂತದಲ್ಲಿ ಚಿಕಿತ್ಸೆಯನ್ನು ಪ್ರಾರಂಭಿಸಿ.

ಅದಕ್ಕೆ ಏನು ಕಾರಣ

ಈ ರೋಗದ ಸೋಂಕುಶಾಸ್ತ್ರವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲಾಗಿಲ್ಲ. ನಿಂಬೆಯ ಆಂಥ್ರಾಕ್ನೋಸ್ ಸತ್ತ ಕೊಂಬೆಗಳ ಮೇಲೆ ಮತ್ತು ಬೆಳೆದ ಎಲೆಗಳ ಮೇಲಿನ ಗಾಯಗಳಲ್ಲಿ ಉಳಿದುಕೊಂಡು ಋತುಗಳಿಂದ ಋತುಗಳಿಗೆ ಸಾಗುತ್ತದೆ. ನೀರಿನ ಎರಚಲು ಮೂಲಕ ಇದರ ಬೀಜಕ ಪ್ರಸರಣಗೊಂಡು ಎಳೆ ಅಂಗಾಂಶಗಳನ್ನು ಸೋಂಕಿಗೆ ಒಳಪಡಿಸುತ್ತದೆ. ದೊಡ್ಡ ಪ್ರಮಾಣದಲ್ಲಿ ಸೋಂಕಿತ ಭಾಗವನ್ನು ಹೊಂದಿರುವ ನಿಂಬೆಯ ಎಲೆಗಳ ಉತ್ಪನ್ನದಿಂದಾಗಿ ಆಂಥ್ರಾಕ್ನೋಸ್ ಅನ್ನು ನಿಯಂತ್ರಿಸುವುದು ಕಷ್ಟವಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬೆಳೆಯಿರಿ.
  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಮಾತ್ರ ಬೀಜಗಳನ್ನು ಬಳಸಿ.
  • ನೆಡುವ ಮೊದಲು ಎಲೆಯ ಮೇಲೆ ಚುಕ್ಕೆಗಳಿವೆಯೇ ಎಂದು ಪರಿಶೀಲಿಸಿ.
  • ರೋಗದ ಚಿಹ್ನೆಗಳಿವೆಯೇ ಎಂದು ನಿಯಮಿತವಾಗಿ ಹಣ್ಣಿನ ತೋಟವನ್ನು ಗಮನಿಸುತ್ತಿರಿ.
  • ಸುಗ್ಗಿಯ ನಂತರ ತೋಟದಲ್ಲಿನ ತ್ಯಾಜ್ಯವನ್ನು ತೆಗೆದುಹಾಕಿ ಅಥವಾ ಸುಟ್ಟು ಬಿಡಿ.
  • ಗಾಳಿಯಾಡಲು ಅವಕಾಶವಾಗುವಂತೆ ನಿಂಬೆ ಗಿಡಗಳ ನಡುವೆ ಸಾಕಷ್ಟು ಜಾಗವಿರುವಂತೆ ನೋಡಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ