ಸೋಯಾಬೀನ್

ಸೋಯಾಬೀನಿನ ಆಂಥ್ರಾಕ್ನೋಸ್

Colletotrichum truncatum

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಬೀಜಕೋಶಗಳು ಮತ್ತು ಕಾಂಡಗಳ ಮೇಲೆ ಕಂದು ಬಣ್ಣದ ಅನಿಯಮಿತ ಕಲೆಗಳು.
  • ಕಂದು ಬಣ್ಣದ ಸಿರೆಗಳು ಮತ್ತು ಸುರುಳಿಯಾದ ಎಲೆಗಳು.
  • ಬೀಜಕೋಶಗಳಲ್ಲಿ ಕೊಳೆತ ಬರಡಾದ ಬೀಜಗಳು.
  • ಸೋಂಕಿತ ಮೊಳಕೆಗಳು ಸೊರಗಿಹೋಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೋಯಾಬೀನ್

ರೋಗಲಕ್ಷಣಗಳು

ಆಂಥ್ರಾಕ್ನೋಸ್ ಸೋಯಾಬೀನಿನ ಕಾಂಡಗಳು, ಬೀಜಕೋಶಗಳು ಮತ್ತು ಎಲೆಗಳಿಗೆ ಸೋಂಕು ತಗುಲಿಸಬಹುದು, ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳಿಲ್ಲದೆ. ಸಂತಾನೋತ್ಪತ್ತಿಯ ಬೆಳವಣಿಗೆಯ ಹಂತಗಳಲ್ಲಿ ಮಾತ್ರ ರೋಗಲಕ್ಷಣಗಳು ಗೋಚರಿಸಬಹುದು. ವಾತಾವರಣವು ಬೆಚ್ಚಗೆ ಮತ್ತು ತೇವವಾಗಿದ್ದಾಗ, ಬೀಜಕೋಶಗಳು ಮತ್ತು ಕಾಂಡಗಳ ಮೇಲೆ ಸಣ್ಣ ಕಂದು ಬಣ್ಣದ ಅನಿಯಮಿತ ಕಲೆಗಳು ಕಾಣಿಸಿಕೊಳ್ಳುತ್ತವೆ. ಈ ಕಲೆಗಳ ಮೇಲೆಯೇ ಸಣ್ಣ ಕಪ್ಪು ಚುಕ್ಕೆಗಳಿರುತ್ತವೆ. ಎಲೆಗಳು ಸುರುಳಿಯಾಗುತ್ತವೆ ಮತ್ತು ಸಿರೆಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ತೀವ್ರವಾಗಿ ಸೋಂಕಿಗೊಳಗಾದ ಬೀಜಕೋಶಗಳಲ್ಲಿ ಸಣ್ಣ, ಕೊಳೆತ ಬರಡಾದ ಬೀಜಗಳು ಇರುತ್ತವೆ. ಸಸಿಗಳಿಗೆ ಬೇಗ ಸೋಂಕು ತಗುಲಿದರೆ ಅವು ಸೊರಗಿಹೋಗುತ್ತವೆ.

Recommendations

ಜೈವಿಕ ನಿಯಂತ್ರಣ

ಇಲ್ಲಿಯವರೆಗೆ ಅಂಥ್ರಾಕ್ನೋಸ್ ವಿರುದ್ಧ ಯಾವುದೇ ಜೈವಿಕ ಚಿಕಿತ್ಸೆಯ ಬಗ್ಗೆ ತಿಳಿದುಬಂದಿಲ್ಲ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. 5% ಕ್ಕಿಂತ ಹೆಚ್ಚು ಬೀಜಗಳು ಸೋಂಕಿಗೆ ಒಳಗಾಗಿದ್ದರೆ, ಶಿಲೀಂಧ್ರನಾಶಕಗಳೊಂದಿಗಿನ ಸಂಸ್ಕರಣೆಯನ್ನು ಸೂಚಿಸಲಾಗುತ್ತದೆ. ಕ್ಲೋರೊಥಲೋನಿಲ್,ಮ್ಯಾಂಕೊಜೆಬ್, ತಾಮ್ರದ ದ್ರವೌಷಧಗಳು ಅಥವಾ ಪ್ರೊಪಿಕೊನಜೋಲ್ ಮತ್ತು ವ್ಯವಸ್ಥಿತ ಶಿಲೀಂಧ್ರನಾಶಕ ಥಿಯೊಫನೇಟ್-ಮೀಥೈಲ್ ಅನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ರೋಗಕಾರಕವು ಸಸ್ಯದ್ರವ್ಯದ ಮೇಲೆ ಒಂದು ವರ್ಷದವರೆಗೆ ಬದುಕಬಲ್ಲದು. ಸೋಂಕಿತ ಉಳಿಕೆಗಳ ಮೇಲೆ ಉತ್ಪತ್ತಿಯಾದ ಬೀಜಕಗಳು ಗಾಳಿ ಮತ್ತು ಮಳೆಯ ಮೂಲಕ ಮೇಲಿನ ಎಲೆಗಳಿಗೆ ಹರಡುತ್ತವೆ. ಎಲೆಗಳು ತೇವವಾಗಿದ್ದಾಗ ಮತ್ತು ಮಳೆ ಅಥವಾ ಇಬ್ಬನಿ ಸಮಯಗಳು ದಿನಕ್ಕೆ 12 ಗಂಟೆಯನ್ನು ಮೀರಿದಾಗ ಸೋಂಕು ತಗುಲುತ್ತದೆ. ಒಟ್ಟಾರೆಯಾಗಿ, ರೋಗವು ಇಳುವರಿಯ ಮೇಲೆ ಅಷ್ಟಾಗಿ ಪರಿಣಾಮ ಬೀರದೇ ಇದ್ದರು, ಸಸ್ಯ ಉಳಿಯುವ ಸಾಮರ್ಥ್ಯ ಮತ್ತು ಬೀಜದ ಗುಣಮಟ್ಟವನ್ನು ಕಡಿಮೆ ಮಾಡಬಹುದು. ಅನುಕೂಲಕರ ಪರಿಸ್ಥಿತಿಗಳು (ಆರ್ದ್ರ ಮಣ್ಣು, ಬೆಚ್ಚಗಿನ ಮತ್ತು ಆರ್ದ್ರ ವಾತಾವರಣ) ಇರುವ ಪ್ರದೇಶಗಳಲ್ಲಿ, ಇಳುವರಿ ನಷ್ಟಗಳು ಅಧಿಕವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಉನ್ನತ ಗುಣಮಟ್ಟದ ಪ್ರಮಾಣಿತ ಬೀಜಗಳನ್ನು ನೆಡಿ.
  • ಸಹಿಷ್ಣು ಪ್ರಭೇದಗಳು ಲಭ್ಯವಿದೆಯೇ ಎಂಬುದರ ಬಗ್ಗೆ ಮಾರಾಟಗಾರರನ್ನು ಸಂಪರ್ಕಿಸಿ.
  • ಸಾಲು ಅಂತರವನ್ನು 50 ಸೆಂ.ಮೀ ಗಿಂತ ಕಡಿಮೆ ಇಡಬೇಡಿ.
  • ಸಸ್ಯಗಳನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಉಪಕರಣಗಳು ಮತ್ತು ಸಲಕರಣೆಗಳನ್ನು ಆಗಾಗ್ಗೆ ಸ್ವಚ್ಚಗೊಳಿಸಿ.
  • ಬೀಜಗಳನ್ನು ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಿ.
  • ಸಸ್ಯದ ಉಳಿಕೆಗಳನ್ನು ಉಳುಮೆ ಮಾಡಿ ಹೂತುಹಾಕಿ ಅಥವಾ ಅವುಗಳನ್ನು ಸುಟ್ಟು ಹಾಕಿ.
  • ರೋಗಕಾರಕವು ಹರಡುವುದನ್ನು ತಪ್ಪಿಸಲು ನಾನ್ ಹೋಸ್ಟ್ ಬೆಳೆಗಳೊಂದಿಗೆ ಸರದಿ ಬೆಳೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ