ಮಾವು

ಫೋಮಾ ಸೋಂಕು

Peyronellaea glomerata

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಬೆಳೆದ ಎಲೆಗಳ ಮೇಲೆ ಅನಿಯಮಿತವಾಗಿ ಹರಡಿದ, ಹಳದಿಯಿಂದ ಕಂದು ಬಣ್ಣದಲ್ಲಿರಬಹುದಾದ ಗಾಯಗಳು.
  • ಗಾಯಗಳು ದೊಡ್ಡ ತೇಪೆಗಳಾಗಿ ಬೆಳೆಯುತ್ತವೆ.
  • ಈ ತೇಪೆಗಳ ನಡುವಿನಲ್ಲಿ ಎಲೆಯು ಕೊಳೆತು ಬೂದು ಬಣ್ಣಕ್ಕೆ ತಿರುಗುತ್ತದೆ.
  • ಎಲೆಗಳು ಮುದುಡುವುದು, ಕ್ರಮೇಣ ಉದುರಿ ಹೋಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಮಾವು

ರೋಗಲಕ್ಷಣಗಳು

ಈ ಸೋಂಕಿನ ಲಕ್ಷಣಗಳು ಬೆಳೆದ ಎಲೆಗಳಲ್ಲಿ ಮಾತ್ರ ಗೋಚರಿಸುತ್ತವೆ. ಬಾಧಿತ ಎಲೆಗಳ ಲ್ಯಾಮಿನಾದ ಮೇಲೆ ವಕ್ರ ವಕ್ರವಾದ, ಬಣ್ಣದಲ್ಲಿ ಹಳದಿಯಿಂದ ಹಿಡಿದು ಕಂದು ಬಣ್ಣದಲ್ಲಿರಬಹುದಾದ, ಅನಿಯಮಿತವಾಗಿ ಹರಡಿದ ಗಾಯಗಳನ್ನು ಕಾಣಬಹುದು. ರೋಗವು ಉಲ್ಬಣಿಸಿದಂತೆ, ಗಾಯಗಳು ಬೆಳೆದು ದೊಡ್ಡ ತೇಪೆಗಳಾಗುತ್ತವೆ. ನಂತರ ನಡುವೆ ಬೂದು ಬಣ್ಣದಲ್ಲಿರುವ ಹಾಗೂ ಗಾಢ ಅಂಚುಗಳಿರುವ ಮಬ್ಬಾದ ಕೊಳೆತ ಪ್ರದೇಶಗಳಾಗಿ ಬದಲಾಗುತ್ತವೆ. ಕೊನೆಯ ಹಂತದಲ್ಲಿ, ಎಲೆಗಳು ಮುದುಡಿ ಉದುರತೊಡಗುತ್ತವೆ. ದ್ರಾಕ್ಷಿಬಳ್ಳಿ (ವಿಟಿಸ್ ವೈನಿಫೆರಾ) ಮತ್ತು ಕೆಂಟುಕಿ ಹುಲ್ಲು (ಪೊವಾ ಪ್ರಟೆಂನ್ಸಿಸ್) ಇದಕ್ಕೆ ಪರ್ಯಾಯ ಆಶ್ರಯದಾತ ಗಿಡಗಳು.

Recommendations

ಜೈವಿಕ ನಿಯಂತ್ರಣ

ಮೊದಲ ರೋಗಲಕ್ಷಣ ಕಂಡ ಕೂಡಲೆ ತಾಮ್ರದ ಆಕ್ಸಿಕ್ಲೋರೈಡ್ (0.3%) ಅನ್ನು ಸಿಂಪಡಿಸಿ, ಬಳಿಕ ನಡುವೆ 20 ದಿನಗಳ ಅಂತರ ಬಿಟ್ಟು ಸಿಂಪಡಿಸುತ್ತಿದ್ದರೆ ರೋಗವನ್ನು ನಿಯಂತ್ರಣದಲ್ಲಿಡಬಹುದು. ತಂಪಾದ ಶೇಖರಣಾ ವ್ಯವಸ್ಥೆಯಲ್ಲಿ ಶೇಖರಿಸುವುದು ಹಾಗೂ ಬೇವಿನ ಎಲೆಯ ಸಾರದಿಂದ ಹಣ್ಣುಗಳನ್ನು ಸಂಸ್ಕರಿಸುವುದರಿಂದ, ರೋಗಕಾರಕವು ಶೇಖರಣೆಯ ಸಮಯದಲ್ಲಿ ಬೆಳೆಯುವುದನ್ನು ತಪ್ಪಿಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಆರಂಭದಲ್ಲಿ ಕಾಣಿಸಿಕೊಂಡಾಗ ಬೆನೊಮಿಲ್ (0.2%) ಹೊಂದಿರುವ ಶಿಲೀಂಧ್ರನಾಶಕಗಳನ್ನು ಸಿಂಪಡಿಸಿ. ನಂತರ 20 ದಿನಗಳ ಬಳಿಕ 0.3% ಮಿಲಿಟೋಕ್ಸ್ನ್ನು ಸಿಂಪಡಿಸುವುದರಿಂದ ಶಿಲೀಂಧ್ರವನ್ನು ನಿಯಂತ್ರಣದಲ್ಲಿಡಬಹುದು.

ಅದಕ್ಕೆ ಏನು ಕಾರಣ

ಫೋಮಾ ಸೋಂಕು ಒಂದು ಹೊಸ ರೋಗ. ಆದರೆ ಈಗ ಮಾವು ಬೆಳೆಯುವ ಪ್ರದೇಶಗಳಲ್ಲಿ ಇದು ಆರ್ಥಿಕ ಪ್ರಾಮುಖ್ಯತೆ ಪಡೆಯುತ್ತಿದೆ. ರೋಗಲಕ್ಷಣಗಳು ಪಿಯಾರೊನೆಲಿಯಾ ಗ್ಲೋಮೆರಾಟಾ ಎಂಬ ಶಿಲೀಂಧ್ರದಿಂದ ಉಂಟಾಗುತ್ತವೆ, ಹಿಂದೆ ಇದನ್ನು ಫೋಮಾ ಗ್ಲೋಮೆರಾಟಾ ಎಂದು ಕರೆಯಲಾಗುತ್ತಿತ್ತು. ಹಾಗಾಗಿ ಈ ರೋಗವನ್ನು ಫೋಮಾ ಸೋಂಕು ಎನ್ನಲಾಗುತ್ತದೆ. ಇದು ಸರ್ವವ್ಯಾಪಿ ಹಾಗೂ ವ್ಯಾಪಕವಾಗಿ ಹರಡಿಕೊಂಡಿರುವ ಶಿಲೀಂಧ್ರವಾಗಿದ್ದು, ಮಣ್ಣಿನಲ್ಲಿ ಸತ್ತ ಅಥವಾ ಜೀವಂತ ಗಿಡಗಳ ಭಾಗಗಳಲ್ಲಿ (ಬೀಜಗಳು, ಹಣ್ಣುಗಳು, ತರಕಾರಿಗಳು), ಸಾಧಾರಣವಾಗಿ ರೋಗಲಕ್ಷಣಗಳನ್ನು ಉಂಟುಮಾಡದೆ ಉಳಿದುಕೊಳ್ಳುತ್ತದೆ. ಒಳಾಂಗಣದಲ್ಲಿ ಇದನ್ನು ಮರದ, ಸಿಮೆಂಟಿನ ಅಥವಾ ತೈಲವರ್ಣ ಬಳಿದ ಜಾಗಗಳು ಮತ್ತು ಕಾಗದದ ಮೇಲೆ ಕಾಣಬಹುದು. ಇದನ್ನು ಸಾಮಾನ್ಯವಾಗಿ ಈಗಾಗಲೇ ರೋಗಗ್ರಸ್ತವಾಗಿರುವ ಅಂಗಾಂಶಗಳ ಮೇಲೆ ಮತ್ತೆ ದಾಳಿ ಮಾಡುವ ಶಿಲೀಂಧ್ರವೆಂದು ಪರಿಗಣಿಸಲಾಗುತ್ತದೆ. ಹೀಗಿದ್ದರೂ, ಕೆಲವು ಗಿಡಗಳಲ್ಲಿ ಮತ್ತು ಕೆಲವು ಪರಿಸರ ಪರಿಸ್ಥಿತಿಗಳಲ್ಲಿ (ಆರ್ದ್ರ ವಾತಾವರಣ ಮತ್ತು ಹೆಚ್ಚಿದ ತಾಪಮಾನ), ಇದು ರೋಗವನ್ನು ಪ್ರಚೋದಿಸುತ್ತದೆ. ತಾಪಮಾನವು 26 °C ಇಂದ 37 °C ವರೆಗಿದ್ದರೆ ಶಿಲೀಂಧ್ರದ ಬೆಳವಣಿಗೆಗೆ ಅನುಕೂಲಕರ.


ಮುಂಜಾಗ್ರತಾ ಕ್ರಮಗಳು

  • ಶೇಖರಣೆಯ ಸಮಯದಲ್ಲಿ ಶಿಲೀಂಧ್ರಗಳ ಬೆಳವಣಿಗೆಯನ್ನು ತಪ್ಪಿಸಲು ಶೇಖರಣಾ ಸೌಲಭ್ಯಗಳನ್ನು ಸ್ವಚ್ಛವಾಗಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ