ಮಾವು

ಮಾವಿನಲ್ಲಿ ಬೂದಿ ರೋಗ (ಪೌಡರಿ ಮಿಲ್ಡ್ಯೂ)

Oidium mangiferae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು, ಹೂಗಳು ಮತ್ತು ಹಣ್ಣಿನ ಮೇಲೆ ಬಿಳಿ, ಪುಡಿಯಂತಹ ತೇಪೆಗಳು.
  • ಎಲೆ ಮತ್ತು ಹಣ್ಣಿನ ವಿರೂಪತೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ಸೋಂಕು ತಗುಲಿದ ಗಿಡದ ಭಾಗಗಳಲ್ಲಿ ಬಿಳಿಯ ಬಣ್ಣದ ಹುಡಿಯ ರೂಪದಲ್ಲಿ ಶಿಲೀಂಧ್ರದ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ. ರೋಗದ ಮುಂದಿನ ಹಂತದಲ್ಲಿ ಈ ಶಿಲೀಂಧ್ರದ ಪಟ್ಟೆಯು ಗಿಡದ ಅಂಗಾಂಶದ ದೊಡ್ಡ ಭಾಗವನ್ನು ಮುಸುಕಿಕೊಳ್ಳುತ್ತದೆ. ಹಳೆಯ ಎಲೆಗಳು ಮತ್ತು ಹಣ್ಣುಗಳ ಸೋಂಕಿತ ಅಂಗಾಂಶದಲ್ಲಿ ನೇರಳೆಮಿಶ್ರಿತ ಕಂದು ಬಣ್ಣದ ವಿಸರ್ಜನೆ ಕಾಣಿಸಿಕೊಳ್ಳುತ್ತದೆ. ಎಳೆಯ ಎಲೆ ಹಾಗೂ ಹೂವುಗಳ ಮೇಲೆ ಶಿಲೀಂಧ್ರದ ಬೀಜಕಗಳು ಮುತ್ತಿಕೊಂಡು, ಕಂದು ಬಣ್ಣಕ್ಕೆ ತಿರುಗಿ, ಕಾಲಕ್ರಮೇಣ ಸತ್ತು ಹೋಗುತ್ತವೆ. ಅವುಗಳು ವಿರೂಪಗೊಳ್ಳಬಹುದು ಕೂಡ. ಉದಾಹರಣೆಗೆ, ಕೆಳಕ್ಕೆ ಸುರುಳಿ ಸುತ್ತಿಕೊಳ್ಳಬಹುದು. ಹಣ್ಣುಗಳ ಮೇಲೆ ಬಿಳಿಯ ಹುಡಿ ಆವರಿಸಿಕೊಂಡಿರಬಹುದು ಹಾಗೂ ಆರಂಭಿಕ ಹಂತಗಳಲ್ಲಿ ಹಣ್ಣು ಒಡೆದು ಒರಟು ಅಂಗಾಂಶಗಳು ಕಾಣಬಹುದು. ಸೋಂಕಿತ ಹಣ್ಣುಗಳು ಸಣ್ಣದಾಗಿದ್ದು ಹಾಗೂ ವಿರೂಪಗೊಂಡಿದ್ದು ಪೂರ್ತಿ ಮಾಗುವುದೇ ಇಲ್ಲ.

Recommendations

ಜೈವಿಕ ನಿಯಂತ್ರಣ

ಬಾಸಿಲಸ್ ಲೈಕೆಫಾರ್ಫಿಸ್ ಹೊಂದಿರುವ ಸಾವಯವ ಶಿಲೀಂಧ್ರನಾಶಕಗಳನ್ನು ಸಿಂಪಡಿಸುವುದು ಈ ರೋಗವನ್ನು ಕಡಿಮೆ ಮಾಡುತ್ತದೆ. ಆಂಪೆಲೋಮೈಸಸ್ ಕ್ವಿಸ್ಕ್ವಾಲಿಸ್ ಎಂಬ ಪರಾವಲಂಬಿ ಶಿಲೀಂಧ್ರವು ಇದರ ಬೆಳವಣಿಗೆಯನ್ನು ನಿಗ್ರಹಿಸುವುದೆಂದು ಸಾಬೀತಾಗಿದೆ. ಸಲ್ಫರ್, ಕಾರ್ಬೊನಿಕ್ ಆಸಿಡ್, ಬೇವಿನೆಣ್ಣೆ, ಕೊಯಾನಿನ್ ಮತ್ತು ಆಸ್ಕೋರ್ಬಿಕ್ ಆಸಿಡ್ಡನ್ನು ಆಧರಿಸಿದ ಉತ್ಪನ್ನಗಳನ್ನು ಎಲೆಗಳ ಮೇಲೆ ಸಿಂಪಡಿಸುವುದರಿಂದ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಬಹುದು. ಇದಲ್ಲದೆ, ಹಾಲು ನೈಸರ್ಗಿಕ ಶಿಲೀಂಧ್ರನಾಶಕವಾಗಿದೆ. ಇದನ್ನು ಶಿಲೀಂಧ್ರವನ್ನು ನಿಯಂತ್ರಿಸಲು ತಿಳಿಮಜ್ಜಿಗೆಯ ರೂಪದಲ್ಲಿ ಚಿಕಿತ್ಸೆಗೆ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಮೊನೊಪೊಟಾಸಿಯಮ್ ಲವಣಗಳನ್ನು ಹೊಂದಿರುವ ಶಿಲೀಂಧ್ರನಾಶಕಗಳು, ಹೈಡ್ರೋಸಲ್ಫರೈಝ್ಡ್ (ಸಲ್ಫರ್ ಅನ್ನು ತೆಗೆದು ಹಾಕುವ ಪ್ರಕ್ರಿಯೆ) ಸೀಮೆಎಣ್ಣೆ, ಅಲಿಫ್ಯಾಟಿಕ್ ಪೆಟ್ರೋಲಿಯಂ ದ್ರಾವಕ, ಮ್ಯಾಂಕೋಝೆಬ್ ಮತ್ತು ಮೈಕ್ಲೊಬ್ಯುಟಾನಿಲ್ ಅನ್ನು ಮಾವಿನಲ್ಲಿ ಬೂದಿ ರೋಗದ ಚಿಕಿತ್ಸೆಗೆ ಬಳಸಲಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ, ಹೂಬಿಡುವ ಮೊದಲೇ ಅಥವಾ ಹೂಬಿಡುವ ಹಂತದ ಪ್ರಾರಂಭದಲ್ಲೇ ಚಿಕಿತ್ಸೆ ಪ್ರಾರಂಭಿಸಬೇಕು. ನಿಯಮಿತವಾಗಿ ಏಳರಿಂದ ಹದಿನಾಲ್ಕು ದಿನಗಳ ಅಂತರದಲ್ಲಿ ಚಿಕಿತ್ಸೆಯನ್ನು ಅನ್ವಯಿಸುವುದಕ್ಕೆ ಸೂಚಿಸಲಾಗುತ್ತದೆ.

ಅದಕ್ಕೆ ಏನು ಕಾರಣ

ಋತುಗಳ ನಡುವೆ ಹಳೆಯ ಎಲೆಗಳಲ್ಲಿ ಅಥವಾ ಸುಪ್ತ ಮೊಗ್ಗುಗಳಲ್ಲಿ ರೋಗಾಣು ಉಳಿದುಕೊಂಡಿರುತ್ತದೆ. ಕಾಂಡ ಮತ್ತು ಬೇರುಗಳನ್ನು ಹೊರತುಪಡಿಸಿ ಮರದ ಎಲ್ಲಾ ಘಟಕಗಳ ಎಳೆಯ ಅಂಗಾಂಶಗಳೂ ಈ ಶಿಲೀಂಧ್ರದ ದಾಳಿಗೊಳಗಾಗುವ ಸಾಧ್ಯತೆಯಿದೆ. ಅನುಕೂಲಕರವಾದ ಪರಿಸ್ಥಿತಿ ಸಿಕ್ಕಿದಾಗ, ಎಲೆ ಅಥವಾ ಮೊಗ್ಗುಗಳಲ್ಲಿನ ರೋಗಾಣುಗಳಿಂದ ಬೀಜಕಗಳು ಬಿಡುಗಡೆಯಾಗುತ್ತವೆ ಹಾಗೂ ಇತರ ಮರಗಳಿಗೆ ಗಾಳಿ ಅಥವಾ ಮಳೆಯ ಮೂಲಕ ಹರಡುತ್ತವೆ. 60-90% ನಷ್ಟು ಸಾಪೇಕ್ಷ ಆರ್ದ್ರತೆಯ ಜೊತೆಗೆ 10-31 °C ನಡುವಿನ ಬೆಚ್ಚಗಿನ ದೈನಿಕ ತಾಪಮಾನ ಮತ್ತು ತಣ್ಣಗಿನ ರಾತ್ರಿಯ ತಾಪಮಾನ ರೋಗ ಹರಡಲು ಅನುಕೂಲಕರ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ, ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ಚೆನ್ನಾಗಿ ಗಾಳಿಯಾಡುವ ಒಣಪ್ರದೇಶದಲ್ಲಿ ಮಾವನ್ನು ಬೆಳೆಯಿರಿ.
  • ಉದ್ದವಾಗಿ ಬೆಳೆದ ರೆಂಬೆಗಳನ್ನು ಕತ್ತರಿಸಿ.
  • ಎತ್ತರಕ್ಕೆ ಬೆಳೆದ ಕಳೆಯನ್ನು ತೆಗೆದು ಹಾಕಿ.
  • ಈ ಸೋಂಕು ತಗುಲದ ಮರಗಳ ಜೊತೆ ಮಾವಿನ ಬೆಳೆಯನ್ನು ಆವರ್ತಿಸಿ.
  • ಸಮತೋಲಿತ ಪೌಷ್ಟಿಕ ಪೂರೈಕೆ ಮಾಡಿ ಹಾಗೂ ಸಾರಜನಕವನ್ನು ಅತಿಯಾಗಿ ಬಳಸಬೇಡಿ.
  • ಪೊಟ್ಯಾಷಿಯಮ್-ಫಾಸ್ಫೇಟನ್ನು ಹೊಂದಿರುವ ರಸಗೊಬ್ಬರಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ