ಕಡಲೆಕಾಯಿ

ಕಡಲೆಕಾಯಿ ರಸ್ಟು

Puccinia arachidis

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಮೊದಲಿಗೆ,ರಸ್ಟಿನ ಗಂಟುಗಳು ಎಲೆಗಳ ಕೆಳಭಾಗದಲ್ಲಿ ಗೋಚರಿಸುತ್ತವೆ.
  • ತೀವ್ರವಾಗಿ ಸೋಂಕಿತ ಎಲೆಗಳು ಎರಡೂ ಕಡೆಗಳಲ್ಲಿ ರಸ್ಟಿನ ಗಂಟುಗಳಿಂದ ಆವೃತವಾಗುತ್ತವೆ.
  • ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಅಂತಿಮವಾಗಿ ಕುಗ್ಗುತ್ತವೆ.
  • ಎಲೆಗಳಚುವಿಕೆ ಮತ್ತು ಭಾರೀ ಇಳುವರಿ ನಷ್ಟಗಳು ಉಂಟಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಡಲೆಕಾಯಿ

ರೋಗಲಕ್ಷಣಗಳು

ಕಡಲೆಕಾಯಿ ರಸ್ಟು ಸಾಮಾನ್ಯವಾಗಿ ವೃತ್ತಾಕಾರದ ಕಿತ್ತಳೆ ಕಂದು ಬಣ್ಣದ (ರಸ್ಟು) ಗಂಟುಗಳಂತೆ, ಎಲೆಗಳ ಕೆಳಭಾಗದಲ್ಲಿ ಕಂಡುಬರುತ್ತದೆ. ಇವು ಹೆಚ್ಚಾಗಿ ಪ್ರಭಾವಲಯವುಳ್ಳ ಹಳದಿ ಕ್ಲೋರೋಸಿಸ್ನೊಂದಿಗೆ ಸುತ್ತುವರಿಯಲ್ಪಟ್ಟಿರುತ್ತವೆ. ಇದು ಎಲೆಗಳು ಮತ್ತು ಸಸ್ಯಗಳ ಬೆಳವಣಿಗೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ. ಈ ರೋಗವು ಮುಂದುವರಿದಂತೆ, ತೀವ್ರವಾಗಿ ಸೋಂಕಿತ ಎಲೆಗಳು ಎರಡೂ ಕಡೆಗಳಲ್ಲಿ ರಸ್ಟಿನ ಗಂಟುಗಳಿಂದ ಆವೃತವಾಗುತ್ತವೆ, ಹಳದಿ ಬಣ್ಣಕ್ಕೆ ತಿರುಗುತ್ತದೆ ಹಾಗು "ರಸ್ಟು" ಹಿಡಿಯುತ್ತದೆ ಮತ್ತು ಅಂತಿಮವಾಗಿ ಸೊರಗುತ್ತವೆ. ಉದ್ದವಾದ, ಕೆಂಪು ಮಿಶ್ರಿತ ಕಂದು ಬಣ್ಣದ (ಮತ್ತು ನಂತರ ಕಪ್ಪು) ಗಂಟುಗಳು ಸಣ್ಣ ಬೇರುಗಳ ಮೇಲೆ (ಪೆಗ್ಸ್), ಕಾಂಡಗಳು ಮತ್ತು ತೊಟ್ಟುಗಳಲ್ಲಿ ಕೂಡ ಕಾಣಿಸಿಕೊಳ್ಳಬಹುದು. ಎಲೆಗಳಚುವಿಕೆ ಉಂಟಾಗಬಹುದು. ರೋಗವು ಬೀಜಕೋಶದ ಹಾಗು ಮೇವಿನ ಇಳುವರಿ ಮತ್ತು ತೈಲದ ಗುಣಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

Recommendations

ಜೈವಿಕ ನಿಯಂತ್ರಣ

ಸೋಂಕನ್ನು ನಿಯಂತ್ರಿಸಲು ಜೈವಿಕ ಏಜೆಂಟುಗಳು ಸಹಾಯ ಮಾಡಬಹುದು. ಸಾಲ್ವಿಯಾ ಅಫಿಷಿನಾಲಿಸ್ನ ಮತ್ತು ಪೊಟೆನ್ಟಿಲ್ಲಾ ಎರೆಕ್ಟಾ ಸಾರಗಳು ಶಿಲೀಂಧ್ರ ಬೆಳವಣಿಗೆಯ ವಿರುದ್ಧ ಎಲೆಗಳ ಮೇಲೆ ರಕ್ಷಣಾತ್ಮಕ ಪರಿಣಾಮವನ್ನು ಹೊಂದಿವೆ. ಫ್ಲ್ಯಾಕ್ಸ್ ಬೀಜದ ಎಣ್ಣೆ ಮತ್ತು ಕಡಲೆಕಾಯಿ ಎಣ್ಣೆ ಮುಂತಾದ ಇತರ ಸಸ್ಯದ ಸಾರಗಳು ಸಹ ರೋಗದ ಸಂಭವನೀಯತೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿವೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ರೋಗದ ಅಭಿವೃದ್ಧಿಯ ನಂತರದ ಹಂತಗಳಲ್ಲಿ ರಾಸಾಯನಿಕ ಚಿಕಿತ್ಸೆಯು ಅನುಪಯುಕ್ತವಾಗಬಹುದು. ಶಿಲೀಂಧ್ರನಾಶಕಗಳು ಅಗತ್ಯವಿದ್ದರೆ, ಮನ್ಕೊಜೆಬ್, ಪ್ರೊಪಿಕೊನಜೋಲ್ ಅಥವಾ ಕ್ಲೋರೊಥಲೋನಿಲ್ (3 ಗ್ರಾಂ/ಲೀ ನೀರು) ಅನ್ನು ಹೊಂದಿರುವ ಉತ್ಪನ್ನಗನ್ನು ಸಿಂಪಡಿಸಿ. ಸೋಂಕಿನ ಮೊದಲ ಪ್ರವೇಶದ ನಂತರ ನೇರವಾಗಿ ಅಪ್ಲಿಕೇಶನ್ ಅನ್ನು ಪ್ರಾರಂಭಿಸಬೇಕು ಮತ್ತು 15 ದಿನಗಳ ನಂತರ ಪುನರಾವರ್ತಿಸಬೇಕು.

ಅದಕ್ಕೆ ಏನು ಕಾರಣ

ಕಡಲೆಕಾಯಿ ರಸ್ಟು ಮಣ್ಣಿನ ಬೆಳೆ ಉಳಿಕೆಗಳಲ್ಲಿ ಅಥವಾ ಪರ್ಯಾಯ ಹೋಸ್ಟ್ಗಳಾಗಿ ವರ್ತಿಸುವ ಇತರ ದ್ವಿದಳಧಾನ್ಯದ ಸಸ್ಯಗಳಲ್ಲಿ ಬದುಕುತ್ತದೆ. ಅದು ಉಂಟಾದ ಮೊದಲಿನ ಹಂತದಲ್ಲಿ ಬೀಜಕಣಗಳಿಂದ ಉಂಟಾಗುವ ಪ್ರಾಥಮಿಕ ಸೋಂಕು ಕೆಳಗಿನ ಎಲೆಗಳ ಮೇಲೆ ಉಂಟಾಗುತ್ತದೆ. ದ್ವಿತೀಯ ಹರಡುವಿಕೆಯು ಗಾಳಿಯಿಂದ ಹರಡುವ ಬೀಜಕಗಳ ಮೂಲಕ ಸಂಭವಿಸುತ್ತದೆ. ಸೋಂಕಿತ ಕಲೆಗಳು ಶಿಲೀಂಧ್ರಗಳ ಬೆಳವಣಿಗೆಗೆ ಅನುಕೂಲಕರವಾಗಿರುವ ವಾತಾವರಣದ ಪರಿಸ್ಥಿತಿಗಳಲ್ಲಿ ತ್ವರಿತವಾಗಿ ವಿಸ್ತರಿಸಬಹುದು, ಉದಾಹರಣೆಗೆ, ಬೆಚ್ಚಗಿನ ತಾಪಮಾನಗಳು (21 ರಿಂದ 26 °C) ಮತ್ತು ತೇವಾಂಶ , ಮೋಡಕವಿದ ಹವಾಮಾನ (ಮಂಜು ಅಥವಾ ರಾತ್ರಿಯ ಭಾರೀ ಇಬ್ಬನಿ). ಇದು ಸಸ್ಯದ ಚಿಗುರು ಮತ್ತು ಬೇರಿನ ಬೆಳವಣಿಗೆಯನ್ನು ಸಹ ನಿಗ್ರಹಿಸುತ್ತದೆ, ಇದರಿಂದಾಗಿ ಬೆಳವಣಿಗೆ ಕುಂಠಿತವಾಗುತ್ತದೆ. ಮಣ್ಣಿನಲ್ಲಿ ರಂಜಕ ರಸಗೊಬ್ಬರದ ಅತಿ ಹೆಚ್ಚಿನ ಮಟ್ಟವು ರಸ್ಟಿನ ಅಭಿವೃದ್ಧಿಯನ್ನು ನಿಧಾನಗೊಳಿಸುವುದು ಕಂಡು ಬಂದಿದೆ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಬಳಸಿ.
  • ನಿರೋಧಕ ಪ್ರಭೇದಗಳನ್ನು ನೆಡಿ.
  • ಸಸ್ಯಗಳ ನಡುವೆ ನೆಟ್ಟ ಅಂತರವನ್ನು ವಿಸ್ತರಿಸುವ ಮೂಲಕ ಹೆಚ್ಚಿನ ಆರ್ದ್ರತೆಯನ್ನು ತಪ್ಪಿಸಿ.
  • ಹೊಲಗಳಲ್ಲಿ ಮತ್ತು ಅದರ ಸುತ್ತಲೂ ಕಳೆಗಳನ್ನು, ತಾವಾಗೇ ಬೆಳೆದ ಸಸ್ಯಗಳನ್ನು ನಿಯಂತ್ರಿಸಿ.
  • ನಿಮ್ಮ ಹೊಲದ ಸಮೀಪದಲ್ಲಿ ಪರ್ಯಾಯ ಹೋಸ್ಟ್ ಗಳನ್ನು ನೆಡುವುದನ್ನು ತಪ್ಪಿಸಿ.
  • ರಸ್ಟಿನ ಅಭಿವೃದ್ಧಿಯನ್ನು ನಿಧಾನಗೊಳಿಸಲು ದೊಡ್ಡ ಪ್ರಮಾಣದ ಫಾಸ್ಫರಸ್ ರಸಗೊಬ್ಬರವನ್ನು ಹಾಕಿ.
  • ಸುಟ್ಟು ಹಾಕುವ ಅಥವಾ ಉಳುಮೆ ಮಾಡುವ ಮೂಲಕ ಸೋಂಕಿತ ಸಸ್ಯಗಳನ್ನು ಮತ್ತು ನಿಮ್ಮ ತ್ಯಾಜ್ಯವನ್ನು ತೆಗೆದುಹಾಕಿ ಅಥವಾ ನಾಶಮಾಡಿ.
  • ಹೋಸ್ಟ್ ಅಲ್ಲದ ಬೆಳೆಗಳನ್ನು ಹೊಂದಿರುವ ಬೆಳೆ ಸರದಿಯನ್ನು ಪ್ರತಿ ಮೂರು- ನಾಲ್ಕು ವರ್ಷಗಳಿಗೆ ಮಾಡುವಂತೆ ಸೂಚಿಸಲಾಗಿದೆ.
  • ಸತತ ಕಡಲೆಕಾಯಿ ಬೆಳೆಗಳ ನಡುವೆ ದೀರ್ಘಾವಧಿಯ ಉಳುಮೆ ಮಾಡದ ಅವಧಿಗಳನ್ನು ಯೋಜಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ