ಕಡಲೆಕಾಯಿ

ಲೇಟ್ ಅಂಡ್ ಅರ್ಲಿ ಲೀಫ್ ಸ್ಪಾಟ್ (ಎಲೆ ಚುಕ್ಕೆ)

Mycosphaerella

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಲೇಟ್ ಅಂಡ್ ಅರ್ಲಿ ಲೀಫ್ ಸ್ಪಾಟ್ ಅನ್ನು ಕ್ರಮವಾಗಿ ಕಂದು ಅಥವಾ ಗಾಢಚುಕ್ಕೆಗಳಿಂದ ಗುರುತಿಸಬಹುದು, ಎರಡೂ ಸಂದರ್ಭಗಳಲ್ಲಿ ಇದು ಹಳದಿ ಪ್ರಭಾವಲಯದಿಂದ ಸುತ್ತುವರಿಯಲ್ಪಟ್ಟಿರುತ್ತದೆ, ಎಲೆಗಳು ಅಂತಿಮವಾಗಿ ಬೀಳುತ್ತವೆ ಮತ್ತು ಕಾಂಡಗಳು ಮತ್ತು ಸಣ್ಣ ಬೇರುಗಳು (ಪೆಗ್ಸ್) ದುರ್ಬಲಗೊಳ್ಳುತ್ತವೆ.
  • ಎಲೆಗಳಚುವಿಕೆಯು ಸಸ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ಅದರ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ.
  • ಕೊಯ್ಲಿನ ಸಮಯದಲ್ಲಿ ಎಳೆಯುವ ಮತ್ತು ಕಾಳಿಗಾಗಿ ಬಡಿಯುವ ಸಮಯದಲ್ಲಿ ಸೋಂಕಿತ ಸಣ್ಣ ಬೇರುಗಳು (ಪೆಗ್ಸ್) ಮುರಿಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಡಲೆಕಾಯಿ

ರೋಗಲಕ್ಷಣಗಳು

ಎಲೆಗಳ ಎರಡೂ ಬದಿಗಳಲ್ಲಿ ವೃತ್ತಾಕಾರದ ಕಲೆಗಳು. ಆರಂಭಿಕ ಎಲೆ ಚುಕ್ಕೆಯು ಹಳದಿ ಕಂದು ಬಣ್ಣದ ಮೃದುವಾದ ಗಾಯಗಳಿಂದ ಕೂಡಿದ್ದು, ಇದನ್ನು ಸಾಮಾನ್ಯವಾಗಿ ಹಳದಿ ಪ್ರಭಾವಲಯಗಳು ಸುತ್ತುವರೆದಿರುತ್ತವೆ. ನಂತರದ ಎಲೆಯ ಚುಕ್ಕೆಯು ಒರಟಾದ ಗಾಢ ಕಂದು ಅಥವಾ ಕಪ್ಪು ಬಣ್ಣದ ಗಾಯದ ಮೂಲಕ ಕಾಣಿಸಿಕೊಳ್ಳುತ್ತದೆ ಮತ್ತು ಪ್ರಭಾವಲಯಗಳು ಹೆಚ್ಚಾಗಿ ಕಂಡುಬರುವುದಿಲ್ಲ. ರೋಗವು ಮುಂದುವರೆದಂತೆ, ಚುಕ್ಕೆಗಳು ಗಾಢವಾಗಿ ಮತ್ತು ದೊಡ್ಡದಾಗಿ ಬೆಳೆಯುತ್ತವೆ (ಸುಮಾರು 10 ಮಿಮೀ), ಮತ್ತು ಮೇಲಿನ ಎಲೆಗಳು, ಕಾಂಡಗಳು ಮತ್ತು ಸಣ್ಣ ಬೇರುಗಳ (ಪೆಗ್ಸ್) ಮೇಲೆ ಕಾಣಿಸಿಕೊಳ್ಳುತ್ತವೆ. ಆರಂಭಿಕ ಎಲೆ ಚುಕ್ಕೆಗಳ ಸಂದರ್ಭದಲ್ಲಿ, ಬೆಳ್ಳಿ, ಕೂದಲು-ರೀತಿಯ ಶಿಲೀಂಧ್ರಗಳ ಬೆಳವಣಿಗೆಯನ್ನು ಕೆಲವೊಮ್ಮೆ ಎಲೆಗಳ ಮೇಲ್ಭಾಗದಲ್ಲಿ ಕಾಣಬಹುದು. ವಾತಾವರಣದ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ, ಎಲೆಗಳು ಅಂತಿಮವಾಗಿ ಉದುರಿಹೋಗುತ್ತದೆ ಮತ್ತು ಕಾಂಡಗಳು ಹಾಗು ಸಣ್ಣ ಬೇರುಗಳು (ಪೆಗ್ಸ್) ದುರ್ಬಲಗೊಳ್ಳುತ್ತವೆ. ವಿಪರ್ಣನವು ಸಸ್ಯ ಮತ್ತು ಅದರ ಉತ್ಪಾದಕತೆಯನ್ನು ದುರ್ಬಲಗೊಳಿಸುತ್ತದೆ. ಸೋಂಕಿತ ಸಣ್ಣ ಬೇರುಗಳಂತೆ (ಪೆಗ್ಸ್) ಕೊಯ್ಲು ನಷ್ಟಗಳು ಹೆಚ್ಚಾಗುತ್ತವೆ ಮತ್ತು ಸುಗ್ಗಿಯ ಸಮಯದಲ್ಲಿ ಎಳೆಯುವ ಹಾಗು ಕಾಳು ಬಡಿಯುವ ಸಮಯದಲ್ಲಿ ಮುರಿಯುತ್ತವೆ.

Recommendations

ಜೈವಿಕ ನಿಯಂತ್ರಣ

ಕಡಲೆಕಾಯಿಯ ನಂತರದ ಎಲೆ ಚುಕ್ಕೆಯ ಪ್ರಮಾಣವನ್ನು ಕಡಿಮೆ ಮಾಡಲು ಆಂಟಿಫುಂಗಲ್ ಬ್ಯಾಕ್ಟೀರಿಯಾ ಬಾಸಿಲಸ್ ಸರ್ಕ್ಯುಲನ್ಸ್ ಮತ್ತು ಸೆರೆಟಿಯ ಮಾರ್ಸೆಸೆನ್ಸ್ ಅನ್ನು ಎಲೆಗಳಿಗೆ ಹಾಕಬಹುದು.

ರಾಸಾಯನಿಕ ನಿಯಂತ್ರಣ

ಸಂಭವನೀಯ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳೊಂದಿಗೆ ಒಂದು ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಶಿಲೀಂಧ್ರನಾಶಕಗಳು ಕ್ಲೋರೊಥಲೋನಿಲ್, ಟೆಬೊಕೊನಜೋಲ್, ಪ್ರೊಪಿಕೊನಜೋಲ್ ಅಝೋಕ್ಸಿಸ್ಟ್ರೋಬಿನ್, ಪಿರಾಕ್ಲೋಸ್ಟ್ರೊಬಿನ್, ಫ್ಲೂಕ್ಸ್ಯಾಸ್ಟ್ರೋಬಿನ್ ಅಥವಾ ಬೊಸ್ಕಮಿಡ್ಗಳನ್ನು ಒಳಗೊಂಡಿದ್ದು ಎರಡೂ ರೋಗಗಳನ್ನು ನಿಯಂತ್ರಿಸಲು ಎಲೆಗಳ ಸಿಂಪರಿಕೆಯನ್ನು ಬಳಸಬಹುದು. ಉದಾಹರಣೆಗೆ, ರೋಗಲಕ್ಷಣಗಳು ಮೊದಲಿಗೆ ಕಾಣಿಸಿಕೊಳ್ಳಲು ಆರಂಭಿಸಿದಾಗ ಮತ್ತು 15 ದಿನಗಳ ನಂತರ ಪುನರಾವರ್ತನೆಯಾಗಿ 3ಗ್ರಾಂ/ಲೀ ಮ್ಯಾಂಕೊಜೆಬ್ ಅಥವಾ 3ಗ್ರಾಂ/ಲೀ ಕ್ಲೋರೊಥಲೋನಿಲ್ ಅನ್ನು ಸಿಂಪಡಿಸುವುದು.

ಅದಕ್ಕೆ ಏನು ಕಾರಣ

ನಂತರದ ಮತ್ತು ಆರಂಭಿಕ ಎಲೆ ಚುಕ್ಕೆ ಸಸ್ಯದ ವಿಭಿನ್ನ ಬೆಳವಣಿಗೆಯ ಹಂತಗಳಲ್ಲಿ ಕಾಣಿಸಿಕೊಳ್ಳುವ ಒಂದೇ ರೀತಿಯ ರೋಗಲಕ್ಷಣಗಳೊಂದಿಗೆ ಇರುವ ಎರಡು ವಿಭಿನ್ನ ರೋಗಗಳು ಎಂದು ಅವುಗಳ ಹೆಸರುಗಳೇ ತಿಳಿಸುತ್ತವೆ . ಅವು ಶಿಲೀಂಧ್ರಗಳು ಮೈಕೊಸ್ಫರೆಲ್ಲಾ ಅರಾಚಿಡಿಸ್ (ಆರಂಭಿಕ ಲೀಫ್ ಸ್ಪಾಟ್) ಮತ್ತು ಮೈಕೋಸ್ಫೇರೆಲ್ಲಾ ಬರ್ಕೆಲೀ (ಲೇಟ್ ಲೀಫ್ ಸ್ಪಾಟ್) ನಿಂದ ಉಂಟಾಗುತ್ತವೆ. ಕಡಲೆಕಾಯಿ ಸಸ್ಯಗಳು ಮಾತ್ರ ತಿಳಿದಿರುವ ಹೋಸ್ಟ್ಗಳಾಗಿವೆ. ಇನಾಕ್ಯುಲಮ್ನ ಮುಖ್ಯ ಮೂಲವು ಹಿಂದಿನ ಕಡಲೆಕಾಯಿ ಬೆಳೆಗಳ ಉಳಿಕೆಗಳಾಗಿವೆ. ಅಧಿಕ ಆರ್ದ್ರತೆಗಳು (ಇಬ್ಬನಿ), ಭಾರೀ ಮಳೆ (ಅಥವಾ ಓವರ್ಹೆಡ್ ನೀರಾವರಿ) ಮತ್ತು ಬೆಚ್ಚಗಿನ ತಾಪಮಾನಗಳು (20 ಡಿಗ್ರಿಗಿಂತ ಹೆಚ್ಚು °C) ದೀರ್ಘಕಾಲದ ಸೋಂಕು ಮತ್ತು ರೋಗದ ಪ್ರಗತಿಯನ್ನು ಉತ್ತೇಜಿಸುತ್ತವೆ. ನಂತರದ ಮತ್ತು ಆರಂಭಿಕ ಎಲೆ ಚುಕ್ಕೆ ವಿಶ್ವಾದ್ಯಂತ ಅತ್ಯಂತ ಗಂಭೀರವಾದ ಕಡಲೆಕಾಯಿ ರೋಗಗಳಾಗಿವೆ ಮತ್ತು ಏಕಕಾಲದಲ್ಲಿ ಅಥವಾ ಒಟ್ಟಿಗೆ ತೀವ್ರ ಬೀಜಕೋಶದ ಇಳುವರಿ ನಷ್ಟವನ್ನು ಉಂಟುಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಮಾರುಕಟ್ಟೆಯಲ್ಲಿ ಲಭ್ಯವಿರುವ ನಿರೋಧಕ ಪ್ರಭೇದಗಳನ್ನು ನೆಡಿ.
  • ಜಮೀನು ಮತ್ತು ಸುತ್ತಲೂ ತಾವಾಗೇ ಬೆಳೆದ ಕಡಲೆಕಾಯಿ ಬೆಳೆಗಳನ್ನು ನಾಶಮಾಡಿ.
  • ಓವರ್ಹೆಡ್ ನೀರಾವರಿಯನ್ನು ತಪ್ಪಿಸಿ.
  • ಸಸ್ಯಗಳು ತೇವವಾಗಿದ್ದಾಗ ಜಮೀನಿನಲ್ಲಿ ಕೆಲಸ ಮಾಡಬೇಡಿ.
  • ಸಾಕಷ್ಟು ಪ್ರಮಾಣದಲ್ಲಿ ನೀರನ್ನು ನೀರಾವರಿ ಮಾಡಿ ಮತ್ತು ಒಣ ಕ್ಯಾನೊಪಿ ಹಾಗು ಮಣ್ಣಿನ ಮೇಲ್ಮೈಯನ್ನು ಕಾಯ್ದುಕೊಳ್ಳಲು ನಿರಂತರವಾದ ನೀರಾವರಿ ತಪ್ಪಿಸಿ.
  • ಹೋಸ್ಟ್ ಅಲ್ಲದ ಬೆಳೆಗಳೊಂದಿಗೆ ಸರದಿ ಬೆಳೆ ಅಳವಡಿಸಿ.
  • ಸುಗ್ಗಿಯ ನಂತರ ಸೋಂಕಿತ ಬೆಳೆ ಉಳಿಕೆಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ