ಆಲೂಗಡ್ಡೆ

ಪೌಡರಿ ಸ್ಕ್ಯಾಬ್

Spongospora subterranea

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಗಾಢ ಬಣ್ಣದ ಬೀಜಕ ವಸ್ತುವಿರುವ ಗುಳ್ಳೆಗಳು.
  • ಅವು ಒಡೆಯುತ್ತವೆ ಮತ್ತು ಬೆಂಡು ರೀತಿಯ ವಸ್ತುವನ್ನು ಉತ್ಪತ್ತಿ ಮಾಡುತ್ತವೆ.
  • ಗಾಯಗಳು ಒಳಮುಖವಾಗಿ ಹರಡಿ ಆಳವಾದ ಗುಂಡಿಗಳನ್ನು ರಚಿಸುತ್ತವೆ.
  • ಆಲೂಗಡ್ಡೆಗಳು ವಿರೂಪಗೊಳ್ಳುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಆಲೂಗಡ್ಡೆ

ರೋಗಲಕ್ಷಣಗಳು

ಭೂಮಿಯ ಮೇಲೆ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆಲೂಗಡ್ಡೆ ಗೆಡ್ಡೆಗಳ ಮೇಲೆ ಕಂಡುಬರುವ ಆರಂಭಿಕ ರೋಗಲಕ್ಷಣಗಳೆಂದರೆ, ಚಿಕ್ಕದಾದ, ಕೆನ್ನೀಲಿ-ಕಂದು ಬಣ್ಣದ ಗುಳ್ಳೆಗಳು ಮತ್ತು ಅವು ಗಾತ್ರದಲ್ಲಿ ನಿಧಾನವಾಗಿ ಹೆಚ್ಚಾಗುತ್ತವೆ. ನಂತರ ಅವು ಒಡೆಯುತ್ತವೆ, ಆಲೂಗಡ್ಡೆಯ ಸಿಪ್ಪೆಯನ್ನು ಸೀಳುತ್ತವೆ ಮತ್ತು ಆಲೂಗೆಡ್ಡೆ ಗೆಡ್ಡೆಗಳ ಸಿಪ್ಪೆಗಳಿಂದ ಗಾಢ ಕಂದು ಬಣ್ಣದ ಪುಡಿ ರೀತಿಯ ವಸ್ತು ಹೊರಬರುತ್ತದೆ. ಸ್ಕ್ಯಾಬ್ ಎಂದು ಕರೆಯಲ್ಪಡುವ ಬೆಂಡಾದ ಆಳವಿಲ್ಲದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ತೇವಾಂಶವಿರುವ ಮಣ್ಣುಗಳಲ್ಲಿ, ಗಾಯಗಳು ಒಳಮುಖವಾಗಿ ಹರಡಿ ಆಳವಾದ ಗುಂಡಿಗಳನ್ನು ರಚಿಸುತ್ತವೆ ಮತ್ತು ಒಳಗಿನ ಅಂಗಾಂಶಗಳನ್ನು ನಾಶಮಾಡುತ್ತವೆ. ಊತಗಳು ಮತ್ತು ಗುಳ್ಳೆಗಳು ಹರಡುತ್ತವೆ, ಮತ್ತು ವಿರೂಪಗೊಂಡ ಆಲೂಗಡ್ಡೆಗಳನ್ನು ಮಾರುಕಟ್ಟೆಯಲ್ಲಿ ಮಾರಲಾಗುವುದಿಲ್ಲ. ಶೇಖರಣೆಯ ಸಮಯದಲ್ಲಿ ವೈಪರೀತ್ಯಗಳು ಹೆಚ್ಚಾಗುತ್ತಾ ಹೋಗುತ್ತವೆ.

Recommendations

ಜೈವಿಕ ನಿಯಂತ್ರಣ

ಈ ರೋಗಕಾರಕದ ವಿರುದ್ಧ ಯಾವುದೇ ಪರ್ಯಾಯ ಚಿಕಿತ್ಸೆ ಲಭ್ಯವಿಲ್ಲ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮೆಟಾಮ್ ಸೋಡಿಯಂ ಅಥವಾ ಫ್ಲಝಿನಾಮ್ ಗಳನ್ನು ಉಪಯೋಗಿಸಿ ಮಣ್ಣನ್ನು ನಾಟಿಗೆ ಮೊದಲೇ ಸಂಸ್ಕರಿಸಿದರೆ, ಅವು ಕೆಲವು ಸಂದರ್ಭಗಳಲ್ಲಿ ಚೆನ್ನಾಗಿ ಕೆಲಸ ಮಾಡುತ್ತವೆ ಮತ್ತು ಇದು ಸಾಮಾನ್ಯವಾಗಿ ಪರಿಸರದ ಸ್ಥಿತಿಗಳನ್ನು ಅವಲಂಬಿಸಿರುತ್ತದೆ.

ಅದಕ್ಕೆ ಏನು ಕಾರಣ

ಪೌಡರಿ ಸ್ಕ್ಯಾಬ್ ರೋಗವು ಮಣ್ಣಿನಿಂದ ಹರಡುವ ರೋಗಕಾರಕವೊಂದರಿಂದ ಉಂಟಾಗುತ್ತದೆ ಮತ್ತು ಇದು ಮಣ್ಣಿನಲ್ಲಿ ಸುಮಾರು 6 ವರ್ಷಗಳ ವರೆಗೆ ಬದುಕುಳಿಯಬಲ್ಲದು. ತಣ್ಣನೆಯ ತಾಪಮಾನದಲ್ಲಿ (12 ರಿಂದ 18 °C) ಮತ್ತು ಗಟ್ಟಿ, ಆಮ್ಲೀಯ ಮಣ್ಣುಗಳಲ್ಲಿ ನೀರು ನಿಲ್ಲುವುದು ಸಾಮಾನ್ಯವಾದ್ದರಿಂದ, ಅಂತಹ ಪರಿಸ್ಥಿತಿಗಳಲ್ಲಿ ಈ ರೋಗವು ಸಾಮಾನ್ಯವಾಗಿರುತ್ತದೆ. ಪರ್ಯಾಯವಾಗಿ, ತೇವವಾದ ಮತ್ತು ಶುಷ್ಕ ವಾತಾವರಣಗಳೂ ಸಹ ಈ ರೋಗದ ಬೆಳವಣಿಗೆಗೆ ಅನುಕೂಲಕರವಾಗಿರುತ್ತದೆ. ಸೋಂಕಿತ ಬೀಜ ಗೆಡ್ಡೆಗಳು, ಬಟ್ಟೆ, ಉಪಕರಣಗಳು ಅಥವಾ ಗೊಬ್ಬರವು ರೋಗಕಾರಕದ ವಾಹಕಗಳಾಗಿರಬಹುದು. ಗುಪಟೆ, ಕಣ್ಣುಗಳು ಅಥವಾ ಗೆಡ್ಡೆಗಳ ಗಾಯಗಳ ಮೂಲಕ ಗೆಡ್ಡೆ ಹುಟ್ಟುವ ಸಮಯದಲ್ಲಿ ಸೋಂಕಾಗುತ್ತದೆ. ರುಸೆಟ್ ಆಲೂಗೆಡ್ಡೆ ಪ್ರಭೇದಗಳು ಈ ಹಾನಿಯ ರೋಗಲಕ್ಷಣಗಳನ್ನು ಅಷ್ಟಾಗಿ ತೋರುವುದಿಲ್ಲ. ಪೌಡರಿ ಸ್ಕ್ಯಾಬ್ ರೋಗವು ಸೋಲಾನೇಸಸ್ ಕುಟುಂಬದ ಅನೇಕ ತರಕಾರಿಗಳಿಗೆ ಸೋಂಕುಂಟುಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ಚೇತರಿಸಿಕೊಳ್ಳುವ ಪ್ರಭೇದಗಳ ಬಗ್ಗೆ ಬೀಜ ವ್ಯಾಪಾರಿಗಳ ಬಳಿ ವಿಚಾರಿಸಿ.
  • ಆರೋಗ್ಯಕರ ಬೀಜವನ್ನು ಬಳಸಿ.
  • ಉತ್ತಮ ಸುಸಂಘಟಿತ ಸರದಿ ಬೆಳೆಯನ್ನು ಅಳವಡಿಸಿ.
  • ನೀರು ನಿಲ್ಲುವುದನ್ನು ತಪ್ಪಿಸಲು ಚೆನ್ನಾಗಿ ಬರಿದಾಗಿರುವ ಮಣ್ಣಿನಲ್ಲಿ ಸಸ್ಯವನ್ನು ನೆಡಿ.
  • ಭೂಮಿಯ ಸುತ್ತ ಮುತ್ತಲಿನ ಸೊಲೇನಾಸಿಯಸ್ ಕುಟುಂಬದ ಪರ್ಯಾಯ ಹೋಸ್ಟ್ ಗಳನ್ನು ಪರಿಶೀಲಿಸಿ ಮತ್ತು ಅವುಗಳನ್ನು ನಾಶ ಮಾಡಿ.
  • PH ಅನ್ನು ನಿಯಂತ್ರಿಸಲು ನಿಮ್ಮ ಮಣ್ಣಿಗೆ ಸಲ್ಫರ್ ಅನ್ನು ಹಾಕಿ.
  • ನಿಮ್ಮ ಉಪಕರಣ, ಬಟ್ಟೆ ಮತ್ತು ಸಲಕರಣೆಗಳ ಸೋಂಕನ್ನು ತೆಗೆಯಲು ವಿಶೇಷ ಗಮನ ಹರಿಸಿ.
  • ಸೋಂಕಿತ ಆಲೂಗಡ್ಡೆಗಳನ್ನು ತಿಂದ ಪ್ರಾಣಿಗಳಿಂದ ಬಂದ ಗೊಬ್ಬರವನ್ನು ಬಳಸಬೇಡಿ.
  • ಕೊಯ್ಲಿನ ನಂತರ ಆಳವಾಗಿ ಉಳುಮೆ ಮಾಡಿದರೆ ಮತ್ತು ಮಣ್ಣಿನ ಸೌರೀಕರಣ ಮಾಡಿದರೂ ಸಹ ಸಹಾಯವಾಗುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ