ಸ್ಟ್ರಾಬೆರಿ

ಸಾಮಾನ್ಯ ಎಲೆ ಚುಕ್ಕೆ ರೋಗ

Mycosphaerella fragariae

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಸಾಮಾನ್ಯವಾಗಿ, ಕೆನ್ನೇರಳೆ ಕಲೆಗಳು ಹಳೆಯ ಎಲೆಗಳಲ್ಲಿ ಮೊದಲು ಕಂಡುಬರುತ್ತವೆ.
  • ಅವು ಬೆಳೆದಂತೆ, ಅವುಗಳ ಮಧ್ಯಭಾಗವು ಬಿಳಿ ಅಥವಾ ಬೂದು ಬಣ್ಣಕ್ಕೆ ತಿರುಗುತ್ತದೆ.
  • ಎಲೆಗಳು ಕ್ಲೋರೋಟಿಕ್ ಆಗುತ್ತವೆ, ಸೊರಗುತ್ತವೆ ಮತ್ತು ಸಾಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಸ್ಟ್ರಾಬೆರಿ

ಸ್ಟ್ರಾಬೆರಿ

ರೋಗಲಕ್ಷಣಗಳು

ರೋಗಲಕ್ಷಣಗಳು ಸ್ಟ್ರಾಬೆರಿಯ ವಿಧ ಮತ್ತು ಪರಿಸರ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿವೆ. ಹಳೆಯ ಎಲೆಗಳ ಮೇಲ್ಭಾಗದಲ್ಲಿ ಕೆನ್ನೇರಳೆ ಬಣ್ಣದ ಕಲೆಗಳಿರುತ್ತವೆ (3-6 ಮಿಮೀ ವ್ಯಾಸದಲ್ಲಿ), ಕೆಲವೊಮ್ಮೆ ಅವುಗಳ ಸುತ್ತ ಸ್ವಲ್ಪ ಗಾಢ ಬಣ್ಣದ ವರ್ತುಲವಿರುತ್ತವೆ. ಕೆಲವು ಸಂದರ್ಭಗಳಲ್ಲಿ, ಕಲೆಗಳು ಕಳಿಯುವುದರಿಂದ, ಅವು ಬಿಳಿ ಬಣ್ಣದಿಂದ ಬೂದು ಬಣ್ಣಕ್ಕೆ ತಿರುಗಿ ಕಂದು ಬಣ್ಣದ ವರ್ತುಲದಿಂದ ಆವೃತವಾಗುತ್ತವೆ. ಹಗುರವಾದ ಕೇಂದ್ರಗಳಿಲ್ಲದ ಅಥವಾ ಸಮಾನವಾಗಿ ಕಂದು ಬಣ್ಣದ ಗಾಢವಾದ ಅಂಚುಗಳಿಲ್ಲದ ವಿಲಕ್ಷಣ ಗಾಯಗಳು ಬೆಚ್ಚನೆಯ ಆರ್ದ್ರ ವಾತಾವರಣದಲ್ಲಿ ಎಲೆಗಳಲ್ಲಿ ಉಂಟಾಗಬಹುದು. ನಂತರ, ಇಡೀ ಎಲೆಯು ಹಲವಾರು ಗಾಯಗಳಿಂದ ಮುಚ್ಚಲ್ಪಡುವುದು ಮತ್ತು ಕ್ಲೋರೋಟಿಕ್ ಆಗಿ ಕಳೆಗುಂದುತ್ತವೆ ಮತ್ತು ಸಾಯುತ್ತದೆ. ಹೊಸ, ಎಳೆ ಎಲೆಗಳು ವಾಸ್ತವವಾಗಿ ರೋಗಕಾರಕಕ್ಕೆ ಹೆಚ್ಚು ಒಳಗಾಗುತ್ತದೆ. ಉದ್ದವಾದ ಗಾಯಗಳು ಎಲೆ ತೊಟ್ಟು ಮತ್ತು ಸ್ಟೋಲನ್ಗಳ ಮೇಲೆ ರಚಿಸಲ್ಪಡುತ್ತವೆ, ನೀರಿನ ಸಾಗಣೆಗೆ ಅಡ್ಡಿ ಮಾಡುತ್ತವೆ ಮತ್ತು ದ್ವಿತೀಯ ಜೀವಿಗಳಿಂದ ಆಕ್ರಮಣಕ್ಕೆ ಸಸ್ಯವು ಹೆಚ್ಚು ಒಳಗಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಪ್ರಯೋಗಾಲಯ ಪರೀಕ್ಷೆಗಳಲ್ಲಿ ರೋಗದ ನಿಯಂತ್ರಣಕ್ಕೆ ಶಿಲೀಂಧ್ರನಾಶಕಗಳಂತಹ ಅದೇ ದಕ್ಷತೆಯೊಂದಿಗೆ ಬ್ಯಾಕ್ಟೀರಿಯಮ್ ಬ್ಯಾಸಿಲಸ್ ಸೀರೆಸ್ ಮತ್ತು ಯೀಸ್ಟ್ ಸ್ಯಾಚರೊಮೈಸಸ್ ಬೌಲರ್ಡಿಗಳನ್ನು ಹೊಂದಿರುವ ದ್ರಾವಣಗಳನ್ನು ಬಳಸಲಾಗುತ್ತದೆ. ಆದಾಗ್ಯೂ, ಈ ಉತ್ಪನ್ನಗಳನ್ನು ಇನ್ನೂ ಹೆಚ್ಚಿನ ಗದ್ದೆಗಳ ಪ್ರಯೋಗಗಳಲ್ಲಿ ಪರೀಕ್ಷಿಸಬೇಕಾಗಿದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಈ ರೋಗವನ್ನು ನಿಯಂತ್ರಿಸುವುದು ಕಷ್ಟ ಏಕೆಂದರೆ ಯಾವುದೇ ರೋಗಲಕ್ಷಣಗಳು ಕಾಣುವ ಮೊದಲೇ ಸಸ್ಯಗಳು ರೋಗದ ಪರಿಣಾಮವನ್ನು ಅನುಭವಿಸಲು ಪ್ರಾರಂಭಿಸಬಹುದು. ಕ್ಲೋರೊಥಲೋನಿಲ್, ಮೈಕ್ಲೊಬ್ಯುಟನಾಲ್ ಅಥವಾ ಟ್ರಿಫ್ಲುಮಿಝೋಲ್ ಅನ್ನು ಆಧರಿಸಿದ ಶಿಲೀಂಧ್ರನಾಶಕಗಳನ್ನು ಸ್ಟ್ರಾಬೆರಿಗಳಲ್ಲಿ ಬರುವ ಸಾಮಾನ್ಯ ಎಲೆ ಚುಕ್ಕೆ ರೋಗದ ಮೊದಲ ರೋಗ ಲಕ್ಷಣಗಳು ಕಂಡ ನಂತರವೆ ನಿಯಂತ್ರಕಗಳಾಗಿ ಬಳಸಬಹುದು. ಚಿಕಿತ್ಸೆಯನ್ನು ವಸಂತಕಾಲದ ಆರಂಭದಲ್ಲಿ ಅಥವಾ ನವೀಕರಣದ ನಂತರ ತಕ್ಷಣ ಮಾಡಬೇಕು ಮತ್ತು ಸುಮಾರು 2 ವಾರಗಳ ಮಧ್ಯಂತರದಲ್ಲಿ ಅದನ್ನು ಸಿಂಪಡಿಸಲು ಶಿಫಾರಸು ಮಾಡಲಾಗುತ್ತದೆ.

ಅದಕ್ಕೆ ಏನು ಕಾರಣ

ಮಣ್ಣಿನ ಮೇಲೆ ಸೋಂಕಿತ ಎಲೆಯ ಉಳಿಕೆಗಳ ಮೇಲೆ ಚಳಿಗಾಲವನ್ನು ಕಳೆಯುವ ಶಿಲೀಂಧ್ರವಾದ ಮೈಕೋಸ್ಫೇರೆಲ್ಲಾ ಫ್ರ್ಯಾಗೇರಿಯಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ವಸಂತಕಾಲದಲ್ಲಿ, ಅವು ಬೆಳವಣಿಗೆಯನ್ನು ಮುಂದುವರಿಸುತ್ತವೆ ಮತ್ತು ನೆರೆಹೊರೆಯ ಸಸ್ಯಗಳ ಕೆಳಗಿನ ಎಲೆಗಳಿಗೆ ಹರಡಿರುವ ಬೀಜಕಗಳನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಎಲೆಯ ತೆಳು ಪದರದ ಮೇಲೆ ಬೀಳುವ ಬೀಜಕಣಗಳು ಅಲ್ಲಿ ಜೀವಾಣು ಕೊಳವೆಗಳನ್ನು ರಚಿಸುತ್ತವೆ, ಅವು ಎಲೆಗಳ ಮೇಲ್ಭಾಗ ಮತ್ತು ಕೆಳಭಾಗಗಳಲ್ಲಿರುವ ನೈಸರ್ಗಿಕ ರಂಧ್ರಗಳ ಮೂಲಕ ಒಳಹೊಕ್ಕುತ್ತವೆ. ಇದು ಬೆಳೆದಂತೆ, ಶಿಲೀಂಧ್ರವು ಹೊಸ ಬೀಜಕಗಳ ಸಮೂಹವನ್ನು ಮಳೆ ನೀರಿನ ಎರಚಲು ಮತ್ತು ಗಾಳಿಯಿಂದ ಹೊಸ ಎಲೆಗಳಿಗೆ ಕೊಂಡೊಯ್ಯುತ್ತದೆ. ಗದ್ದೆಯಲ್ಲಿನ ಮಾನವ ಅಥವಾ ಯಂತ್ರ ಚಟುವಟಿಕೆಗಳು ಮಾಲಿನ್ಯದ ಮೂಲವಾಗಿರಬಹುದು. ಹಣ್ಣುಗಳ ಮೇಲೆ ಸಾಮಾನ್ಯವಾಗಿ ನೇರವಾಗಿ ಪರಿಣಾಮ ಆಗುವುದಿಲ್ಲ, ಆದರೆ ಎಲೆಗಳ ನಷ್ಟವು ಅವುಗಳ ಗುಣಮಟ್ಟ ಮತ್ತು ಇಳುವರಿಯನ್ನು ಕಡಿಮೆಗೊಳಿಸುತ್ತದೆ. ತಂಪಾದ ಹಗಲಿನ ತಾಪಮಾನಗಳು (ಸುಮಾರು 25 °C) ಮತ್ತು ಶೀತ ರಾತ್ರಿಯ ತಾಪಮಾನಗಳು, ಹೆಚ್ಚಿನ ಸಾಪೇಕ್ಷ ಆರ್ದ್ರತೆ, ಮತ್ತು ದೀರ್ಘಕಾಲದ ಎಲೆ ಆರ್ದ್ರತೆಗಳು ರೋಗ ಅಭಿವೃದ್ಧಿಗೆ ಅನುಕೂಲಕರ. ಸಸ್ಯಗಳ ನಡುವಿನ ಅಲ್ಪ ಅಂತರದಂತಹ ಕೆಟ್ಟ ಬೇಸಾಯ ಪದ್ಧತಿಗಳು, ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ನಾಟಿ ಮಾಡುವ ಬೀಜಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಿ.
  • ಪ್ರದೇಶದಲ್ಲಿ ಲಭ್ಯವಿದ್ದರೆ ರೋಗವನ್ನು ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಿ.
  • ತೆಳ್ಳಗಿನ, ಉತ್ತಮ ಗಾಳಿಯ ಪ್ರಸರಣ ಮತ್ತು ಮಾನ್ಯತೆ ಹೊಂದಿರುವ ಚೆನ್ನಾಗಿ ಬರಿದುಹೋದ ಮಣ್ಣಿನಲ್ಲಿ ಸಸ್ಯವನ್ನು ನೆಡಿ.
  • ಹೊಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಕಳೆಗಳನ್ನು ತೆಗೆದುಹಾಕಿ.
  • ಹೆಚ್ಚಿನ ತೇವಾಂಶ ಪರಿಸ್ಥಿತಿಗಳನ್ನು ತಡೆಗಟ್ಟಲು ಸಂಜೆ ನೀರು ಹಾಕಬೇಡಿ.
  • ಅಧಿಕ ಸಾರಜನಕವಿಲ್ಲದ ಸಮತೋಲಿತ ರಸಗೊಬ್ಬರ ಬಳಕೆ ಕೆಲಸವನ್ನು ಮಾಡಿ.
  • ಸೋಂಕಿತ ಸಸ್ಯಗಳು ಮತ್ತು ಬೆಳೆ ಉಳಿಕೆಗಳನ್ನು ತೆಗೆದುಹಾಕಿ ಮತ್ತು ಅದನ್ನು ಹೊಲದಿಂದ ದೂರದಲ್ಲಿ ಸುಟ್ಟುಹಾಕಿ ಅಥವಾ ಹೂತುಹಾಕಿ.
  • ಎಲೆಗಳು ಒದ್ದೆಯಾಗಿರುವಾಗ ಆ ಪ್ರದೇಶದಲ್ಲಿ ಕೆಲಸ ಮಾಡಬೇಡಿ ಮತ್ತು ಸಸ್ಯಗಳಿಗೆ ಗಾಯವಾಗದಂತೆ ನೋಡಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ