ಪ್ಲಾಂಟಿಕ್ಸ್ ಕೀಟ ಟ್ರ್ಯಾಕರ್

ಭಾರತದಲ್ಲಿ ಫಾಲ್ ಆರ್ಮಿವರ್ಮ್ ( ಹುಸಿ ಸೈನಿಕ ಹುಳು) ತೀವ್ರ ಹರಡುವಿಕೆಯ ಕಾರಣದಿಂದ, ಜಮೀನಿನಲ್ಲಿ ಕೆಲಸ ಮಾಡುವ ನಿಮಗೆ, ಉತ್ತಮವಾಗಿಯೂ ಪರಿಣಾಮಕಾರಿಯಾಗಿಯೂ ಹೇಗೆ ನಾವು ಸಹಾಯ ಮಾಡಬಹುದು ಎಂಬುದರ ಬಗ್ಗೆ ಚಿಂತಿಸಿದೆವು. ಹೀಗಾಗಿ, ನೈಜ ಸಮಯದಲ್ಲಿ ಆಕ್ರಮಣಶೀಲ ಕೀಟಗಳನ್ನು ಟ್ರಾಕ್ ಮಾಡಲು " ಪ್ಲಾಂಟಿಕ್ಸ್ ಕೀಟ ಟ್ರ್ಯಾಕರ್" ಎಂಬ ಹೊಸ ಉಪಕರಣವನ್ನು ನಿಮಗೆ ಪ್ರಸ್ತುತ ಪಡಿಸುತ್ತಿದ್ದೇವೆ. ನಾವು ಕ್ರಮೇಣವಾಗಿ ಭಾರತದಲ್ಲಿನ ಅತಿ ಸಾಮಾನ್ಯ ಮತ್ತು ಆಕ್ರಮಣಶೀಲ ಕೀಟಗಳ ಮತ್ತು ರೋಗಗಳ ಇನ್ನೂ ಹೆಚ್ಚಿನ ನಕ್ಷೆಗಳೊಂದಿಗೆ, ವಿಶ್ವಾಸಾರ್ಹ ಆರಂಭಿಕ ಎಚ್ಚರಿಕೆ ವ್ಯವಸ್ಥೆ ನಿಮ್ಮ ಕೈಯಲ್ಲಿರುವಂತೆ ಈ ಉಪಕರಣವನ್ನು ಯಾವಾಗಲೂ ನವೀಕರಿಸುತ್ತೇವೆ.

ಡೇಟಾ ಮೂಲ: ನಮ್ಮ ಪ್ಲಾಂಟಿಕ್ಸ್ ರೈತರ ಆಪ್ ನೊಂದಿಗೆ, ನಾವು ಕೇವಲ ಭಾರತದಿಂದಲೇ ಪ್ರತಿದಿನ 20,000 ಹೆಚ್ಚು ಚಿತ್ರಗಳನ್ನು ಸ್ವೀಕರಿಸುತ್ತೇವೆ. ಈ ಡೇಟಾವನ್ನು ನಾವು ಒಳನೋಟಗಳನ್ನು ಉತ್ಪಾದಿಸಿ ಎಲ್ಲಾ ಪಾಲುದಾರರೊಂದಿಗೆ ಹಂಚಿಕೊಳ್ಳಲು ಉಪಯೋಗಿಸುತ್ತೇವೆ. ನೇರ ಟ್ರಾಕಿಂಗ್ ನಕ್ಷೆಯಲ್ಲಿ ತೋರಿಸಿರುವ ಏಲ್ಲಾ ದತ್ತಾಂಶಗಳು ತಜ್ಞರಿಂದ ಮೌಲ್ಯೀಕರಿಸಲಾಗಿದೆ. ಎಲ್ಲಾ ನಿರ್ದೇಶಾಂಕಗಳನ್ನು 10 ಕಿ. ಮೀ ನಷ್ಟು ನಿಖರತೆಗೆ ಅನಾನಿಮೈಝ್ ಗೊಳಿಸಲಾಗಿವೆ ಮತ್ತು ಡೇಟಾ ಪ್ರತಿ ದಿನ ನವೀಕರಿಸಲಾಗುತ್ತದೆ. ಕಚ್ಚಾ ಡೇಟಾ ಪಡೆಯಲು ಅಥವಾ ನಿಮ್ಮ ಡೇಟಾವನ್ನು ನಕ್ಷೆಗೆ ಸೇರಿಸಲು ದಯವಿಟ್ಟು contact@peat.ai ಅನ್ನು ಸಂಪರ್ಕಿಸಿ.